ಹುಣಸಗಿ ತಾಲೂಕಿಗೆ ಬೇಕಿದೆ ಮಿನಿಸೌಧ
¬ವಿವಿಧ ಇಲಾಖೆ ಸೇವೆ ಇಲ್ಲಿಲ್ಲ,ಹಳೇ ತಾಲೂಕಿಗೆ ತೆರಳುವುದು ತಪ್ಪಿಲ್ಲ
Team Udayavani, Jan 6, 2021, 4:25 PM IST
ಹುಣಸಗಿ: ಹುಣಸಗಿ ತಾಲೂಕು ಕೇಂದ್ರವಾಗಿ ಮೂರು ವರ್ಷ ಗತಿಸಿದರೂ ಇಲ್ಲಿನ ಸರ್ಕಾರಿಕಚೇರಿಗಳಿಗೆ ಇನ್ನೂ ಶಾಶ್ವತ ಕಟ್ಟಡಗಳಿಲ್ಲ.ಹೀಗಾಗಿ ಕೆಬಿಜೆಎನ್‌ಎಲ್ ಇಲಾಖೆ ಕ್ಯಾಂಪ್ ಕಟ್ಟಡಗಳಲ್ಲಿಯೇ ಕಚೇರಿಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ತಹಶೀಲ್ದಾರ್ ಕಾರ್ಯಾಲಯ ಹಾಗೂಉಪ-ನೋಂದಣಾಧಿಕಾರಿ ಕಚೇರಿ ಮತ್ತು ಖಜಾನೆ, ತಾಪಂ ಕಾರ್ಯಾಲಯ ಈಗಾಗಲೇ ಸಾಮಾನ್ಯಜನರಿಗೆ ಸೇವೆ ಒದಗಿಸುತ್ತಿವೆ. ವಿಚಿತ್ರವೆಂದರೆಉಳಿದಂತೆ ಸಮಾಜ ಕಲ್ಯಾಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೀಗೆ ಹಲವು ಸರ್ಕಾರಿ ಕಚೇರಿಗಳನ್ನು ಮಾತ್ರತಾಲೂಕು ಕೇಂದ್ರಕ್ಕೆ ಕಲ್ಪಿಸಲಾಗಿಲ್ಲ. ಹೀಗಾಗಿಹೆಸರಿಗೆ ಮಾತ್ರ ಹುಣಸಗಿ ತಾಲೂಕು ಕೇಂದ್ರವಾಗಿಉಳಿದಿದ್ದು, ಪ್ರತಿಯೊಂದಕ್ಕೂ ಸಾರ್ವಜನಿಕರುಸುರಪುರ ತಾಲೂಕಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ.
ಒಟ್ಟು 82 ಗ್ರಾಮಗಳು, 18 ಗ್ರಾಪಂಗಳುಒಳಪಟ್ಟಿವೆ. ತಾಲೂಕು ಕೇಂದ್ರಕ್ಕೆ ಎಲ್ಲಕಚೇರಿಗಳನ್ನು ಒಳಗೊಂಡು ಮಿನಿ ವಿಧಾನಸೌಧಶೀಘ್ರ ಆಗಬೇಕಿದೆ. ಅಲ್ಲದೇ ನೂತನ ತಾಪಂಕಾರ್ಯಾಲಯ, ಸಾರಿಗೆ ಡಿಪೋ, ತಾಲೂಕುನ್ಯಾಯಾಲಯ (ಕೋರ್ಟ್) ಗಳಿಗೆ ನೂತನಕಟ್ಟಡ ಅಗತ್ಯವಿದೆ. ಆದರೆ ಇನ್ನೂ ಈಸೌಲಭ್ಯವಿಲ್ಲದೇ ಸಾರ್ವಜನಿಕರು ಕಚೇರಿ ಕೆಲಸಕ್ಕೆಸುರಪುರಕ್ಕೆ ಹೋಗುವ ಸಮಸ್ಯೆ ಇದೆ ಎನ್ನುತ್ತಾರೆಪ್ರಜ್ಞಾವಂತರು.
2013ರಲ್ಲಿ ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಅವಧಿಯಲ್ಲಿ 43 ತಾಲೂಕು ರಚನೆ ಮಾಡಲಾಗಿತ್ತು. ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ 9 ತಾಲೂಕೆಂದು ಸೇರಿಸಿ ಅಧಿಕೃತವಾಗಿ ಫೆ.28ರಂದು ತಾಲೂಕು ಕೇಂದ್ರವನ್ನಾಗಿ ಉದ್ಘಾಟಿಸಲಾಯಿತು.ಅಲ್ಲಿಂದ ಇಲ್ಲಿವರೆಗೂ ವಿವಿಧ ಸರ್ಕಾರಿ ಕಚೇರಿ ಭಾಗ್ಯ ದೊರೆಯದಿರುವುದು ವಿಪರ್ಯಾಸ. ಪ್ರತಿನಿತ್ಯ ಸಾರ್ವಜನಿಕರು ಹಳೇ ತಾಲೂಕು ಕೇಂದ್ರಕ್ಕೆ ತೆರಳುವುದು ತಪ್ಪಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೂತನ ತಾಲೂಕು ಹುಣಸಗಿಗೆಎಲ್ಲ ಸರ್ಕಾರಿ ಕಚೇರಿ ಸೇವೆ ಒದಗಿಸುವ ಜತೆಗೆಶೀಘ್ರ ಮಿನಿ ವಿಧಾನಸೌಧ ಭಾಗ್ಯ ಕಲ್ಪಿಸಿ ಸಮಸ್ಯೆಪರಿಹರಿಸಬೇಕಾಗಿದೆ ಎನ್ನುತ್ತಾರೆ ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಚೆನ್ನೂರು.
ಜನರಿಗೆ ಹಲವು ಸಮಸ್ಯೆ ಇದೆ.ಹಲವು ಇಲಾಖೆ ಸೇವೆ ಇನ್ನೂಕಲ್ಪಿಸಲ್ಲ. ಪ್ರತಿಯೊಂದು ಇಲಾಖೆಶೀಘ್ರದಲ್ಲಿ ಪ್ರಾರಂಭಿಸಬೇಕು. ಮಿನಿವಿಧಾನಸೌಧ ಆದಷ್ಟು ಬೇಗ ಆಗಬೇಕು.ಎಲ್ಲ ಸೌಲಭ್ಯ ಈಡೇರಿಸದಿದ್ದಲ್ಲಿಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. –ಶಿವಲಿಂಗಸಾಹು ಪಟ್ಟಣಶೆಟ್ಟಿ,ಕರವೇ ತಾಲೂಕು ಅಧ್ಯಕ್ಷ, ಹುಣಸಗಿ
-ಬಾಲಪ್ಪ.ಎಂ. ಕುಪ್ಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.