ನವಶಕ್ತಿ ಸಮಾವೇಶ ಯಶಸ್ಸಿಗೆ ಕರೆ
Team Udayavani, Feb 23, 2018, 5:28 PM IST
ಸುರಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಗರದ ಸಜ್ಜನ್ ಮೈದಾನಾನದಲ್ಲಿ ಫೆ. 25ರಂದು ನಡೆಯುವ ನವಶಕ್ತಿ ಸಮಾವೇಶ ಯಶಸ್ವಿಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕು ಎಂದು ಯಾದಗಿರಿ ಬಿಜೆಪಿ ಜಿಲ್ಲಾ ಉಸ್ತುವಾರಿ ಮತ್ತು ಶಿಸ್ತು ಸಮಿತಿ ಅಧ್ಯಕ್ಷ ಎನ್. ಶಂಕ್ರಪ್ಪ ಹೇಳಿದರು.
ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮೂರು ದಿನಗಳವರಗೆ ಅಮಿತ ಶಾ ಪಕ್ಷದ ಬೂತ್ ಮಟ್ಟದ ಅನೇಕ ಸಭೆಗಳನ್ನು ನಡೆಸಲಿದ್ದಾರೆ. ಈ ವೇಳೆ ರೈತರು, ಕಾರ್ಮಿಕರೊಂದಿಗೆ ಚರ್ಚಿಸಲಿದ್ದಾರೆ. ನವಶಕ್ತಿ ಸಮಾವೇಶದ ಯಶಸ್ವಿಗೆ ಎಲ್ಲಾ ಸಿದ್ಧತೆಗಳು ನಡೆದಿವೆ
ಎಂದು ತಿಳಿಸಿದರು.
ರವಿವಾರ ಬೆಳಗ್ಗೆ 11:00 ಗಂಟೆಗೆ ಅಮಿತ್ ಶಾ ಸುರಪುರಕ್ಕೆ ಆಗಮಿಸುವರು. ಹೆಲಿಪ್ಯಾಡಿನಿಂದ ನೇರವಾಗಿ ಸಮವೇಶದ
ವೇದಿಕೆ ತೆರಳಿ ಸುರಪುರ-ಯಾದಗಿರಿ ಕ್ಷೇತ್ರಗಳ ಬೂತ್ ಮಟ್ಟದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಚುನಾವಣೆಯ ಕೆಲ ತಂತ್ರ ಮತ್ತು ಗೆಲುವಿನ ರೂಪರೇಷಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಮಾವೇಶದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಬಿಜೆಪಿ ಪ್ರಮುಖರು ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು.
ನಂತರ ಅವರು ಯಾನಾಗುಂದಿಗೆ ತೆರಳಿ ಮಾತೆ ಮಾಣೀಕೇಶ್ವರಿಯ ದರ್ಶನ ಪಡೆಯುವರು. ಗುರುಮಠಕಲ್ ದಲ್ಲಿ ಟೋಕರಿ, ಕೂಲಿ ಕಬ್ಬಲಿಗ ಗಂಗಾಮತ ಸಮಾಜದ ಸಮಾವೇಶದಲ್ಲಿ ಪಾಲ್ಗೊಳ್ಳುವರು. ನಂತರ ಕಲಬುರಗಿಗೆ ತೆರಳುವರು. ಫೆ. 26ರಂದು ಕಲಬುರಗಿಯಲ್ಲಿ ಮೂರು ಜಿಲ್ಲೆಗಳ 19 ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶ ನಡೆಸಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ರಾಜುಗೌಡ, ಚಂದ್ರಶೇಖರಗೌಡ ಮಾಗನೂರ, ಅಮರಣ್ಣ ಹುಡೇದ್, ಹೆಚ್.ಸಿ. ಪಾಟೀಲ್, ಕೊತ್ತ ಅಶೋಕಗೌಡ, ಶ್ರೀನಿವಾಸರಾವ್, ಪ್ರಮುಖರಾದ ಡಾ| ವೀರಬಸವಂತರಡ್ಡಿ ಮುದ್ನಾಳ, ಯಲ್ಲಪ್ಪ ಕುರುಕುಂದಿ, ಬಸವರಾಜ ಸ್ಥಾವರಮಠ, ಡಾ| ಭೀಮಣ್ಣ ಮೇಟಿ, ಮೇಲಪ್ಪ ಗುಳಗಿ ಇದ್ದರು.
ಬಿಜೆಪಿ ಜಯ ನಿಶ್ಚಿತ ಕೊಲೆ, ಭ್ರಷ್ಟಾಚಾರ, ಹಲ್ಲೆ ಸೇರಿದಂತೆ ಹಗರಣಗಳ ಸರಮಾಲೆ ಹೊತ್ತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ದುರಾಡಳಿತ ದಿಂದ ರಾಜ್ಯದ ಜನತೆ ರೋಸಿಹೋಗಿದೆ. ಕಾಂಗ್ರೆಸ್‌ನ್ನು ಕಿತ್ತು ಒಗೆಯಲು ರಾಜ್ಯದ ಜನತೆ ಸಂಕಲ್ಪ ಮಾಡಿದ್ದಾರೆ. ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಜನತೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಗೆಲುವು ನಿಶ್ವಿತ ಎಂದು ಎನ್. ಶಂಕ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.