ಛಲವಾದಿ ಸಮುದಾಯಕ್ಕಿಲ್ಲ ಸ್ಮಶಾನ
Team Udayavani, Jan 3, 2020, 3:02 PM IST
ಯಾದಗಿರಿ: ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿರುವ ಛಲವಾದಿ ಸಮುದಾಯದವರಿಗೆ ಸ್ಮಶಾನವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಜನರು ಇಷ್ಟು ದಿನ ಸಮುದಾಯದವರದ್ದೇ ಖಾಸಗಿ ಸ್ಥಳದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ.
ಕಳೆದ 2019 ಸೆಪ್ಟೆಂಬರ್ ತಿಂಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಗರದ ಹೊರವಲಯದ ಸರ್ವೇ ನಂ.43ರಲ್ಲಿ ಲಭ್ಯ ಇರುವ ಜಮೀನು ಮಂಜೂರು ಮಾಡುವಂತೆ ಸಮುದಾಯದವರು ಮನವಿ ಸಲ್ಲಿಸಿದ್ದಾರೆ. ತಕ್ಷಣ ಸ್ಪಂದಿಸಿದ ಸಮಾಜ ಕಲ್ಯಾಣ ಅಧಿಕಾರಿಗಳು ತಹಶೀಲ್ದಾರ್‌ಗೆ ಅಂದೇ ಪತ್ರ ಬರೆದು ರುದ್ರಭೂಮಿಗೆ ಸ್ಥಳ ಮೀಸಲಿಟ್ಟು ಮಂಜೂರು ಮಾಡುವಂತೆ ಕೋರಿದ್ದರು. ಆದರೆ, ಈ ವರೆಗೂ ಜಮೀನು ಗುರುತಿಸುವ ಕಾರ್ಯವಾಗಿಲ್ಲ ಎಂದು ದಲಿತ ಮುಖಂಡ ಮರೆಪ್ಪ ಚಟ್ಟರಕರ್ ತಿಳಿಸಿದ್ದಾರೆ. ಸಮುದಾಯದವರು ನಗರಕ್ಕೆ ಹತ್ತಿರದಲ್ಲೇ ಜಮೀನು ಬೇಕು ಎನ್ನುವ ಬೇಡಿಕೆಯಿಟ್ಟಿದ್ದಾರೆ. ಆದರೆ ಜಮೀನು ನಗರದ ಹೊರ ವಲಯದಲ್ಲಿದೆ. ಹಾಗಾಗಿ ಇನ್ನೂ ನಿರ್ಣಯವಾಗಿಲ್ಲ ಎನ್ನುವ ಮಾಹಿತಿಯನ್ನುಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಈ ಹಿಂದಿನಿಂದಲೂ ಭೀಮಾನದಿ ದಡದಲ್ಲಿ ಸಾರ್ವಜನಿಕ ಸ್ಮಶಾನ ಇದ್ದು, ಬಹುತೇಕ ಜನ ಸುಮಾರು ವರ್ಷಗಳಿಂದ ಶವ ಸಂಸ್ಕಾರ ಮಾಡುತ್ತಿರುವುದರಿಂದ ಕೆಲ ಸಾರಿ ಶವ ಸಂಸ್ಕಾರ ಮಾಡಲು ತಗ್ಗು ತೋಡಿದಾಗ ಈ ಹಿಂದೆ ಸಂಸ್ಕಾರ ಮಾಡಿದ ದೇಹದ ಎಲುಬುಗಳೇ ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಹಲವು ವರ್ಷಗಳ ಹಿಂದೆ ಕೋಲಿ, ಕುರುಬ ಸಮಾಜದವರು ಗಂಜ್ ಪ್ರದೇಶ ಸೇರಿದಂತೆ ಕೆಲವು ಕಡೆ ಖಾಸಗಿ ಸ್ಥಳಗಳನ್ನು ಖರೀದಿಸಿ ಶವ ಸಂಸ್ಕಾರಕ್ಕೆ ಉಪಯೋಗಿಸಿಕೊಳ್ಳುತ್ತಿದ್ದು, ಆ ಪ್ರದೇಶದ ಸುತ್ತಲೂ ಮನೆಗಳು ನಿರ್ಮಾಣ ಆಗುತ್ತಿರುವುದರಿಂದ ಕೆಲವೊಮ್ಮೆ ಶವ ಸಂಸ್ಕಾರಕ್ಕೆ ಅಡೆತಡೆ ಎದರಾಗುವಂತಾಗಿದೆ. ಜಿಲ್ಲಾಡಳಿತ ಸ್ಮಶಾನಗಳ ಅಗತ್ಯತೆ ಅರಿತು ಅಗತ್ಯವಿರುವೆಡೆ ಸಾರ್ವಜನಿಕರ ಸ್ಮಶಾನಗಳಿಗೆ ಸ್ಥಳ ಗುರುತಿಸಲು ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.