ಸಮಪರ್ಕ ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ
•ರಂಗಂಪೇಟೆ-ತಿಮ್ಮಾಪುರದ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರ•ರಸ್ತೆ ತಡೆದು ಆಕ್ರೋಶ
Team Udayavani, Jun 18, 2019, 9:53 AM IST
ಸುರಪುರ: ಸಮರ್ಪಕ ನೀರೊದಗಿಸಲು ಆಗ್ರಹಿಸಿ ರಂಗಂಪೇಟ-ತಿಮ್ಮಾಪುರದ ಸಾರ್ವಜನಿಕರು ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.
ಸುರಪುರ: ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ ರಂಗಂಪೇಟ-ತಿಮ್ಮಾಪುರ ಸಾರ್ವಜನಿಕರು ನಾಗರಿಕ ಕಲ್ಯಾಣ ಸಮಿತಿ ನೇತೃತ್ವದಲ್ಲಿ ನಗರಸಭೆ ಕಚೇರಿ ಎದುರು ಪ್ರತಿಭಟಿಸಿದರು.
ರಂಗಂಪೇಟೆಯ ಮರಗಮ್ಮ ದೇವಸ್ಥಾನದಿಂದ ಸುರಪುರದವರೆಗೆ ಮೆರವಣಿಗೆ ನಡೆಸಿದರು.
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಗಾಂಧೀಜಿ ಹಾಗೂ ಬಸ್ ನಿಲ್ದಾಣ ಹತಿರದ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಂತರ ನಗರಸಭೆ ಬಳಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ಪೊಲೀಸರನ್ನು ತಳ್ಳಿ ಕಚೇರಿಯೊಳಗೆ ನುಗ್ಗಿದರು. ಸದಸ್ಯರ, ಪೌರಾಯುಕ್ತರ ನಾಮಫಲಕ, ನಿಯಮಗಳ ಸೂಚನಾ ಫಲಕ ಕಿತ್ತು ಬಿಸಾಡಿದರು. ಕುರ್ಚಿ ಟೇಬಲ್ಗಳನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಕಚೇರಿ ಎದುರಿನ ರಸ್ತೆ ಮೇಲೆ ಮಲಗಿ ರಸ್ತೆ ತಡೆ ನಡೆಸಿದರು.
ರಸ್ತೆ ತಡೆಯಿಂದ ನಗರದ ಎಲ್ಲಾ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಡು ಬಿಸಿಲಿನಿಂದ ಪ್ರಯಾಣಿಕರು ಬಸವಳಿದು ಹೋದರು. ಬಾಟಲಿಯಲ್ಲಿ ತಂದಿದ್ದ ಕಲುಷಿತ ನೀರನ್ನು ಕುಡಿದು ತೋರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಮಡಿವಾಳ ಸಮುದಾಯದ ಕೆಲವರು ಕಚೇರಿಯಲ್ಲಿ ಬಟ್ಟೆ ತೊಳೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸುವ ಮೂಲಕ ನಗರಸಭೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ನೇತೃತ್ವ ವಹಸಿದ್ದ ಮುಂಖಡ ಡಾ| ಸುರೇಶ ಸಜ್ಜನ್ ಮಾತನಾಡಿ, ಇದು ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದ ವಿರುದ್ಧದ ಹೋರಾಟ ಅಲ್ಲ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ನಡೆಯುವ ಪಕ್ಷಾತೀತ ಹೋರಾಟವಾಗಿದೆ. ನಗರಸಭೆ ವಾರ್ಡ್ 28 ವಡ್ಡರ ಕಾಲೋನಿ ಸೇರಿದಂತೆ ರಂಗಂಪೇಟೆ- ತಿಮ್ಮಾಪುರದ ಬಹುತೇಕ ಬಡವಾಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಸಾರ್ವನಿಕರಿಗೆ ನೀರು ಒದಗಿಸಲು ಸ್ಕೇರ್ ಸಿಟಿ ಯೋಜನೆ ಅಡಿ ಸಾಕಷ್ಟು ಅನುದಾನ ಬಂದಿದೆ. ನೀರಿನಂತೆ ಹಣ ಖರ್ಚಾದರು ಜನರಿಗೆ ಮಾತ್ರ ಹನಿ ನೀರು ಕೊಡುತ್ತಿಲ್ಲ. ಟ್ಯಾಂಕರ್ ನೀರು ಸರಬರಾಜಲ್ಲಿ ಲೂಟಿ ಹೊಡೆದಿದ್ದು, ಸರಿಯಾಗಿ ನೀರು ಕೊಡದೆ ಸಾರ್ವಜನಿಕರೊಂದಿಗೆ ಚಲ್ಲಾಟ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಾಕಷ್ಟು ಮನವಿ ಮಾಡಿದರು ಪೌರಾಯುಕ್ತರು ಸ್ಪಂದಿಸುತ್ತಿಲ್ಲ. ಹಾಲಿ ಮತ್ತು ಮಾಜಿ ಶಾಸಕರ ಹೆಸರು ಹೇಳಿ ನೀರು ಸರಬರಾಜನಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಒಟ್ಟಾರೆ ಮೂಲ ಸೌಕರ್ಯ ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಲಗಾಮು ಇಲ್ಲದ ಕುದುರೆಯಂತ್ತಾಗಿದೆ ಎಂದು ದೂರಿದರು.
15 ದಿನಗಳ ಒಳಗಾಗಿ ಬೇಡಿಕೆಗಳನ್ನು ಈಡೇರಿಸಿ ನೀರಿನ ಸಮಸ್ಯೆ ಹೋಗಲಾಡಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ನಡೆಯುವ ಅನಾಹುತಗಳಿಗೆ ಇಲಾಖೆಯ ನೇರ ಹೊಣೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿ, ವಿಭಾಗೀಯ ಮತ್ತು ಸಹಾಯಕ ಆಯುಕ್ತರಿಗೆ ಬರೆದ ಮನವಿಯನ್ನು ತಹಶೀಲ್ದಾತರ್ ಸುರೇಶ ಅಂಕಲಗಿ ಮೂಲಕ ಸಲ್ಲಿಸಿದರು. ಮಲ್ಲಿಕಾರ್ಜುನ ಕಡೇಚೂರ, ಬಸವರಾಜ ಸಜ್ಜನ್, ಶರಣಪ್ಪ ಹೆಡಗಿನಾಳ, ಬಸವರಾಜ ರುಮಾಲ. ಮಲ್ಲೇಶಿ ಪೂಜಾರಿ, ಅಪ್ಸರ್ ಹುಸೇನ್ ದಲಾಲ. ನಾಗೇಶ ಕಾಟಗಿ, ಶೇಖ ಮಹಿಬೂಬ ಒಂಟಿ, ನಾಸೀರ ಹುಸೇನ್ ಕುಂಡಾಲೆ, ರಾಜು ಪುಲ್ಸೆ, ಶ್ರೀಶೈಲ, ಚನ್ನಪ್ಪ ಸೇರಿದಂತೆ ರಂಗಂಪೇಟ-ತಿಮ್ಮಾಪುರದ ವಿವಿಧ ಪಕ್ಷಗಳ ನಗರಸಭೆ ಸದಸ್ಯರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.