ಶೇಂಗಾ ಬೆಲೆ ಕುಸಿತಕ್ಕೆ ಸಂಕಟ
Team Udayavani, Mar 5, 2018, 6:03 PM IST
ಯಾದಗಿರಿ: ಜಿಲ್ಲೆಯಲ್ಲಿ ಬೆಳೆದ ಶೇಂಗಾ ಬೆಳೆ ಗುಣಮಟ್ಟವಿಲ್ಲದ ಕಾರಣ ಕರ್ನಾಟಕ ಆಯಿಲ್ ಫೆಡರೇಷನ್ ಅವರು ಶೇಂಗಾ ಖರೀದಿಗೆ ಮುಂದಾಗಿಲ್ಲ. ಇನ್ನೊಂದೆಡೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಾದ್ಯಂತ ನೀರಾವರಿ ಕ್ಷೇತ್ರದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶ, ಖುಷ್ಕಿ ಕ್ಷೇತ್ರದಲ್ಲಿ 37 ಸಾವಿರ ಸೇರಿದಂತೆ ಒಟ್ಟು 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ ನೀರಾವರಿ ಕ್ಷೇತ್ರದಲ್ಲಿ 45,415 ಹೆಕ್ಟೇರ್ ಪ್ರದೇಶ, ಖುಷ್ಕಿ ಕ್ಷೇತ್ರದಲ್ಲಿ 15,939 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 61,354 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ.
ಯಾದಗಿರಿ ತಾಲೂಕಿನಲ್ಲಿ 23,759, ಶಹಾಪುರ ತಾಲೂಕಿನ 17,920, ಸುರಪುರ ತಾಲೂಕಿನಲ್ಲಿ 19,675 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದ್ದು, ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಶೇಂಗಾ ಲಗ್ಗೆ ಇಟ್ಟಿದೆ. ಆದರೆ ಬಡವರ ಪಾಲಿನ ಬದಾಮಿ ಎಂದೇ ಹೆಸರುವಾಸಿಯಾಗಿರುವ ಶೇಂಗಾ ಬೆಳೆಗೆ ಮಾರು ಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ.
ಕಳೆದ ವರ್ಷ ಶೇಂಗಾ ಬೆಲೆ ಗರಿಷ್ಠ 5,031 ರೂ., ಮಾದರಿ ಧಾರಣಿ 4,859 ರೂ, ಕನಿಷ್ಠ ಬೆಲೆ 3,738 ರೂ. ವರೆಗೆ ಇತ್ತು.
ಈ ವರ್ಷ ಶೇಂಗಾ ಬೆಲೆ ಗರಿಷ್ಠ 4,422 ರೂ. ಮಾದರಿ ಧಾರಣಿ 4,019 ರೂ. ಕನಿಷ್ಠ ಬೆಲೆ 3,609 ರೂ. ಇದೆ. ಆದರೆ ಈ ವರ್ಷ ಮಾತ್ರ ಶೇಂಗಾ ಬೆಲೆ ಸಾವಿರ ರೂ. ವರೆಗೆ ಕುಸಿತಗೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.
ಎಪಿಎಂಸಿಗೆ ನಿತ್ಯ ನೂರಾರು ರೈತರು ಶೇಂಗಾ ಬೆಳೆ ಮಾರಾಟ ಮಾಡಲು ಆಗಮಿಸುತ್ತಿದ್ದಾರೆ. ಹೀಗಾಗಿ ಎಪಿಎಂಸಿ
ಆವರಣದಲ್ಲಿ ಜನದಟ್ಟಣೆ ಅಧಿಕವಾಗಿದ್ದು, ಶೇಂಗಾಗೆ ಸೂಕ್ತ ಬೆಲೆ ಇಲ್ಲದ ಪರಿಣಾಮ ಬಿತ್ತನೆಗೆ ಖರ್ಚು ಮಾಡಿದ ಹಣವೂ ಬರುತ್ತದೆಯೇ ಇಲ್ಲವೋ ಅನುಮಾನ ರೈತರಲ್ಲಿ ಮೂಡಿದೆ.
ಕಳೆದ ವರ್ಷ ಶೇಂಗಾ ಬೆಲೆ ಹೆಚ್ಚಳದಿಂದ ರೈತರು ಸಂತಸಗೊಂಡು ಈ ವರ್ಷವೂ ಸಹ ಶೇಂಗಾ ಬೆಳೆದಿದ್ದಾರೆ. ಆದರೆ ಶೇಂಗಾ ಬೆಲೆ ಕುಸಿತದಿಂದ ಕೈಬಂದ ತುತ್ತು ಬಾಯಿಗೆ ಬರದಂತಾಗಿದೆ.
ಈಗಾಗಲೇ ಚಿತ್ರದುರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕೆಓಎಫ್‌ನವರು 4,250 ಬೆಂಬಲ ಬೆಲೆಯೊಂದಿಗೆ ಕೇಂದ್ರ ಸರಕಾರದ ಸಹಾಯ ಧನ 200 ರೂ. ಸೇರಿದಂತೆ ಒಟ್ಟು 4,450 ರೂ.ಗೆ ಶೇಂಗಾವನ್ನು ಖರೀದಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಗುಣಮಟ್ಟದ ಶೇಂಗಾವಿಲ್ಲದ ಕಾರಣ ಕೆಓಎಫ್ ನವರು ಖರೀದಿಗೆ ಮುಂದಾಗಿಲ್ಲ. ಕಾರಣ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೇ ಎಂದು ಕಾಯ್ದು ನೋಡಬೇಕಿದೆ.
ಗುಣಮಟ್ಟದ ಕೊರ ಎಪಿಎಂಸಿಗೆ ಶೇಂಗಾ ಹೆಚ್ಚಾಗಿ ಬಂದಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷವೂ ಶೇಂಗಾ ಬೆಲೆಯಲ್ಲಿ ಕುಸಿತ ಕಂಡಿದೆ. ಗುಣಮಟ್ಟದ ಶೇಂಗಾವಿಲ್ಲದ ಕಾರಣ ಕೆಓಎಫ್‌ನವರು ಸಹ ಶೇಂಗಾ ಖರೀದಿಗೆ ಮುಂದಾಗಿಲ್ಲ. ಪ್ರಕಾಶ ಅಯ್ನಾಳಕರ್, ಸಹಾಯಕ ನಿರ್ದೇಶಕ ಎಪಿಎಂಸಿ ಯಾದಗಿರಿ ಬಿತ್ತನೆಗೆ ಹಾಕಿದ ಹಣ ಕೂಡ ಸಿಗುತ್ತಿಲ್ಲ ಸರ್, ಕಳೆದ ವರ್ಷಕ್ಕಿಂತ ಈ ವರ್ಷ ಶೇಂಗಾ ಬೆಲೆಯಲ್ಲಿ ಕ್ವಿಂಟಾಲ್‌ಗೆ ಒಂದು ಸಾವಿರ ರೂ. ಕಡಿಮೆಯಾಗಿದೆ. ಹೀಗಾದರೆ ಬಿತ್ತನೆಗೆ ಮಾಡಿದ ಹಣವೂ ವಾಪಸ್ ಬರುವುದು
ಗ್ಯಾರಂಟಿ ಇಲ್ಲದಂತಾಗಿದೆ. ಏನು ಮಾಡಬೇಕೆಂಬುದು ತೋಚುತ್ತಿಲ್ಲ. ವಿನೋದ ಕೆಂಭಾವಿ, ರೈತ
ರಾಜೇಶ ಪಾಟೀಲ್ ಯಡ್ಡಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.