ಮುಂಬೈಯಿಂದ ಯಾದಗಿರಿಗೆ ಬಂದಿಳಿದ ಜನ
Team Udayavani, Jun 2, 2020, 7:13 AM IST
ಯಾದಗಿರಿ: ಮುಂಬೈಯಿಂದ ಸೋಮವಾರ ಬೆಳಗ್ಗೆ ಬಿಟ್ಟಿದ್ದ ಉದ್ಯಾನ್ ರೈಲು ರಾತ್ರಿ 8:30ರ ಸುಮಾರಿಗೆ ನಗರದ ನಿಲ್ದಾಣಕ್ಕೆ ಬಂದು ತಲುಪಿತು.
ರೈಲಿನ ಮೂಲಕ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿದ್ದ ಜಿಲ್ಲೆಯ 120ಕ್ಕೂ ಹೆಚ್ಚು ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ರೈಲು ಇಳಿಯುವುದಕ್ಕೂ ಮುನ್ನ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸುವಂತೆ ಎಚ್ಚರಿಕೆ ಮೂಡಿಸಲಾಯಿತು. ರೈಲಿನಿಂದ ಇಳಿದ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಸ್ಕ್ರೀನಿಂಗ್ ಮಾಡಿ ಕೈಗೆ ಶೀಲ್ ಹಾಕಲಾಯಿತು. ಪ್ರಯಾಣಿಕರ ವಿವರ ನೋಂದಾಯಿಸಿಕೊಂಡು ರೈಲು ನಿಲ್ದಾಣದ ಆವರಣಲ್ಲಿ ನಿಲ್ಲಿಸಿದ್ದ 3 ಸಾರಿಗೆ ಬಸ್‌ಗಳ ಮೂಲಕ ನೇರವಾಗಿ ಕ್ವಾರಂಟೈನ್ ಗೆ ಕರೆದುಕೊಂಡು ತೆರಳಲಾಯಿತು. ಎಲ್ಲರನ್ನು ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ 14 ದಿನಗಳ ಕಾಲ ಇರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಎಸ್‌ಪಿ ಋಷಿಕೇಶ ಸೋನಾವಣೆ ನಿಲ್ದಾಣದಲ್ಲಿದ್ದು ಪ್ರಯಾಣಿಕರ ಸ್ಕ್ರೀನಿಂಗ್, ವಿವಿರ ನೋಂದಣಿ ಹಾಗೂ ಸ್ಟಾಂಪಿಂಗ್ ಕಾರ್ಯ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.