ವೈಯಕ್ತಿಕ ಶೌಚಾಲಯ ಬಳಕೆ ಕಡ್ಡಾಯ
Team Udayavani, Oct 26, 2018, 10:26 AM IST
ಯಾದಗಿರಿ: ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಲು ಕೈ ಉಪಯೋಗ ಆಗುತ್ತವೆ. ಆದ್ದರಿಂದ ಊಟ, ಹಣ್ಣು ಸೇರಿದಂತೆ ಯಾವುದೇ ಪದಾರ್ಥ ಸೇವಿಸುವ ಮೊದಲು ಕೈ ತೊಳೆಯಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಜಿಪಂ ಸಿಇಒ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಭೀಮಾನದಿ ತೀರದ ಪುಷ್ಕರ ಉತ್ಸವ ಸ್ಥಳದಲ್ಲಿ ಗುರುವಾರ ಜಿಲ್ಲಾ ಪಂಚಾಯತ್ ವತಿಯಿಂದ ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಏರ್ಪಡಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ನಮ್ಮ ದೇಶದ ಮುಂದಿನ ಭವಿಷ್ಯವಾಗಿದ್ದಾರೆ. ಹಾಗಾಗಿ, ವಿದ್ಯಾರ್ಥಿಗಳು ಕೈ ತೊಳೆಯುವುದನ್ನು ಹಾಸ್ಯದ ರೂಪದಲ್ಲಿ ತೆಗೆದುಕೊಳ್ಳದೇ ಗಂಭೀರವಾಗಿ ತೆಗೆದುಕೊಂಡು ತಮ್ಮ ಕುಟುಂಬದವರಿಗೂ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಕೈ ತೊಳೆಯುವ ವಿಧಾನ ಕುಟುಂಬದವರಿಗೆ, ಅಕ್ಕ ಪಕ್ಕದ ಮನೆಯವರಿಗೆ ಹಾಗೂ ತಮ್ಮ ಗ್ರಾಮಗಳ ಸಾರ್ವಜನಿಕರಿಗೆ ತಿಳಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ಬಳಸಬೇಕು ಎಂದು ಸಲಹೆ ನೀಡಿದ ಅವರು, ಕಾರ್ಯಕ್ರಮ ಆಯೋಜಿಸಲು ವೇದಿಕೆ ಕಲ್ಪಿಸಿದ ಭೀಮಾ ಪುಷ್ಕರ ಸೇವಾ ಸಮಿತಿಗೆ ಕೃತಜ್ಞತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೊಡ ಮಾತನಾಡಿ, ಮನೆಯಲ್ಲಿ ಶೌಚಕ್ಕೆ ಹೋಗಿ ಬಂದ ಮಗುವನ್ನು ಶುಚಿಗೊಳಿಸುವ ಮಹಿಳೆಯರು ಸಾಬೂನಿನಿಂದ ಕೈ ತೊಳೆಯುವುದಿಲ್ಲ. ನಂತರ ಅದೇ ಕೈಗಳಿಂದ ಅಡುಗೆ ಸಿದ್ಧಪಡಿಸುವುದರಿಂದ ಆಹಾರದಲ್ಲಿ ಕೀಟಾಣು ಸೇರಿಕೊಂಡು ತಮಗಷ್ಟೇ ಅಲ್ಲದೆ, ಕುಟುಂಬದವರಿಗೂ ಕಾಯಿಲೆ ಹರಡುವ ಸಂಭವ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಮನೆ ಸುತ್ತಮುತ್ತ ಎಲ್ಲೆಂದರಲ್ಲಿ ಶೌಚ ಮಾಡುವುದರಿಂದ ಪ್ರಾಣಿ, ಪಕ್ಷಿ, ಕೀಟಗಳಿಂದ ಆ ಶೌಚ ಮನೆಯ ಆಹಾರಗಳನ್ನು ಸೇರಿಕೊಳ್ಳುತ್ತದೆ. ಆದ್ದರಿಂದ ಎಲ್ಲರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು ಎಂದು ಸಲಹೆ ನೀಡಿದರು.
ಸ್ವತ್ಛ ಭಾರತ ಮಿಷನ್ ಜಿಲ್ಲಾ ವ್ಯವಸ್ಥಾಪಕ ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿ, ಸರಿಯಾಗಿ ಕೈ ತೊಳೆಯದೆ ಇರುವುದರಿಂದ ಆಹಾರ ಸೇವನೆಯ ಸಂದರ್ಭದಲ್ಲಿ ಕೀಟಾಣುಗಳು ದೇಹ ಸೇರುತ್ತವೆ. ಇದರಿಂದ ಅತಿಸಾರ, ಭೇದಿ, ಅಪೌಷ್ಟಿಕತೆ ಉಂಟಾಗುತ್ತದೆ. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು 2008 ರಿಂದ ಪ್ರತಿವರ್ಷ ಅಕ್ಟೋಬರ್ 15ರಂದು ವಿಶ್ವ ಕೈ ತೊಳೆಯುವ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪುರ ಕೈ ತೊಳೆದುಕೊಳ್ಳುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಲಿಕಾ ಸಂಸ್ಥೆಯ ಧನಲಕ್ಷ್ಮೀ ಮತ್ತು ರೇಖಾ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಕೈ ತೊಳೆಯುವ ವಿಧಾನ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಚಂದ್ರಕಲಾ ಶರಣಗೌಡ ಹೊಸಮನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಸಂತರಾವ್ ವಿ. ಕುಲಕರ್ಣಿ, ಭೀಮಾ ಪುಷ್ಕರ ಸೇವಾ ಸಮಿತಿ ಅಧ್ಯಕ್ಷ ಲೀಲಾಕೃಷ್ಣ ಹಾಗೂ ಜಿಪಂ ಸದಸ್ಯರು ಇದ್ದರು.
ಕಾರ್ಯಕ್ರಮದಲ್ಲಿ ಸ್ವತ್ಛ ಭಾರತ ಮಿಷನ್ ಸಮಾಲೋಚಕ ವೆಂಕಟೇಶ ಪವಾರ್, ಮಹೇಶಕುಮಾರ, ಮಹಾದೇವರೆಡ್ಡಿ, ಶಿವಕುಮಾರ, ನಾರಾಯಣ ಸೇರಿದಂತೆ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಆರ್.ವಿ. ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬಾಲ್ಯ ವಿವಾಹ ತಡೆಗಟ್ಟುವಿಕೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಸ್ವತ್ಛ ಭಾರತ ಅಭಿಯಾನ, ಮಕ್ಕಳ ಸಹಾಯವಾಣಿ-1098 ಕುರಿತ ಕರಪತ್ರ ವಿತರಿಸಲಾಯಿತು.
ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳ ಶೌಚಾಲಯದಲ್ಲಿ ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಶುಚಿತ್ವ ಜಾಗೃತಿ ಕಾರ್ಯಕ್ರಮ ಕೇವಲ ಹೆಸರಿಗಾಗಿ ಆಯೋಜಿಸಿದಂತೆ ಆಗಬಾರದು, ಜಿಲ್ಲಾದ್ಯಂತ ಬದಲಾವಣೆಗೆ ನಾಂದಿಯಾಗಬೇಕು.
ಕಿಶನ ರಾಠೊಡ, ಜಿಪಂ ಸದಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.