ಜನರ ಕಲ್ಯಾಣಕ್ಕೆ ಜನಪರ ಯೋಜನೆ: ವೆಂಕಟರೆಡ್ಡಿ
Team Udayavani, Jun 13, 2022, 2:35 PM IST
ಯಾದಗಿರಿ: ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಅದರ ಲಾಭ ಪಡೆದು ಆರ್ಥಿಕವಾಗಿ ಬದಲಾವಣೆ ಸಾಧಿಸಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಕರೆ ನೀಡಿದರು.
ಇಲ್ಲಿನ ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಜನಸಂಪರ್ಕ ಕಚೇರಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಯಾದಗಿರಿ ಜಿಲ್ಲೆ 2018-2019ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಭಾವಿಗಳಿಗೆ ಅಳವಡಿಸುವ ಸಬ್‌ಮರ್ಷಿಬಲ್ ಪಂಪ್ಸ್, ಮೋಟಾರು ಹಾಗೂ ವಿವಿಧ ಸಾಮಗ್ರಿಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಜಲಸಂಪನ್ಮೂಲ ಹೇರಳವಿದೆ, ಗ್ರಾಮೀಣ ಭಾಗದ ಸಣ್ಣ ಪುಟ್ಟ ರೈತರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಮೂಲಕ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಹೆಚ್ಚಾಗಿ ಮಾಡಿಕೊಂಡಿದ್ದಾರೆ. ಬರುವ ದಿನಗಳಲ್ಲಿ ಸರ್ಕಾರದ ನಿಗಮದಿಂದ ಮತಕ್ಷೇತ್ರದ ಹೆಚ್ಚಿನ ರೈತರಿಗೆ ಕೊಳವೆ ಬಾವಿಗಳನ್ನು ಮಂಜೂರಿ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 15 ರೈತರಿಗೆ ಸಬ್ ಮರ್ಷಿಬಲ್ ಪಂಪ್ಸ್, ಮೋಟಾರು ಯಂತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿರುಪಾಕ್ಷರೆಡ್ಡಿ ಆಲೂರ, ಚಂದ್ರಾಯಗೌಡ ಗೋಗಿ, ಸಿದ್ಲಿಂಗಪ್ಪ ನಾಯಕ್ ಬೆಳಗುಂದಿ, ಸಿದ್ದಣಗೌಡ ಕಾಡಂನೋರ, ಖಂಡಪ್ಪ ದಾಸನ್, ಚಂದಪ್ಪ ಕಾವಲಿ ರಾಮಸಮುದ್ರ, ನಿಗಮದ ವ್ಯವಸ್ಥಾಪಕ ಸಂತೋಷ ಭರತನೂರ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.