ಸಸಿ ನೆಟ್ಟು ಪೋಷಿಸುವುದು ಅಗತ್ಯ: ಕೂಡ್ಲೂರು
Team Udayavani, Aug 24, 2018, 4:39 PM IST
ಸೈದಾಪುರ: ಕೇವಲ ಸಸಿ ನೆಟ್ಟರೆ ಸಾಲದು, ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರಮುಖವಾಗಿದೆ ಎಂದು ಸೀತಾರಾಮ ಕೂಡ್ಲೂರು ಹೇಳಿದರು. ಕೂಡ್ಲೂರು ಗ್ರಾಮದ ಅಂಕಲಗಿ ಅಡವಿ ಸಿದ್ಧಲಿಂಗೇಶ್ವರ ಮಠದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಪ್ರತಿಯೊಬ್ಬರು
ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವುದರ ಮೂಲಕ ಪರಿಸರದಲ್ಲಿ ಸ್ವತ್ಛತೆ ಕಾಪಾಡಬೇಕು. ಶುಚಿ ಪರಿಸರವಿಲ್ಲದೆ ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.
ಇಂದಿನ ಆಧುನೀಕರಣದ ತಾಂತ್ರಿಕ ವ್ಯವಸ್ಥೆಯಿಂದ ಪರಿಸರ ಕುಲುಷಿತವಾಗಿ ಸ್ವತ್ಛ ಗಾಳಿ, ಮಳೆಯಿಲ್ಲದೆ ಮನುಷ್ಯನು ಅನೇಕ ತೊಂದರೆ ಅನುಭವಿಸುತ್ತಿದ್ದಾನೆ. ಜಾಗತಿಕ ತಾಪಮಾನದಲ್ಲಿ ಏರು ಪೇರು ಉಂಟಾಗಿರುವ ಪ್ರಯುಕ್ತ ಅನೇಕ ಜನ-ಜಾನುವಾರು ಸಾಯುವಂತಹ ದುಸ್ಥಿತಿ ಎದುರಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಮನುಷ್ಯನೇ ಹೊರತು ಬೇರಾರು ಅಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಗಿಡಮರಗಳಿಲ್ಲದೆ ಪರಿಸರ ಸೊರಗಿ ಹೋಗಿದೆ. ಜೀವ ಸಂಕುಲವಿಲ್ಲದೆ ಕಾಡುಗಳು ಸೌಂದರ್ಯವನ್ನು ಕಳೆದು ಕೊಂಡಿವೆ. ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಆಗಿರುವುದರಿಂದ ಅವುಗಳಿಂದ ಬಿಡುಗಡೆ ಆಗುವ ವಿಷಾನಿಲ ವಾತಾವರಣವನ್ನು ಸೇರಿ ಗಾಳಿಯನ್ನು ಮಲಿನಗೊಳಿಸುತ್ತಿವೆ.
ಕೈಗಾರಿಕೆಗಳು ಬಿಡುಗಡೆ ಮಾಡುವ ರಾಸಾಯನಿಕ ತಾಜ್ಯ ಅನಿಲಗಳಿಂದ ಜಲಚರ ಪ್ರಾಣಿಗಳು ನಾಶ ಆಗುತ್ತಿವೆ. ಪರಿಸರದಲ್ಲಿ ಪ್ಲಾಸ್ಟಿಕ್‌ಗಳನ್ನು ಬಿಸಾಡುವುದು, ಗುಟ್ಕಾ ತಿಂದು ಅದರ ಚೀಟಿಗಳನ್ನು ಎಲ್ಲಿಂದರಲ್ಲಿ ಬಿಸಾಡುವುದು, ಕೃಷಿಯಲ್ಲಿ ಯಥೇಚ್ಚವಾಗಿ ರಾಸಾಯನಿಕ ವಸ್ತುಗಳನ್ನು ಬಳುಸುವುದು, ಇವುಗಳಿಂದ ಮಣ್ಣಿನ ಗುಣಮಟ್ಟ ಕುಗ್ಗಿ ಭೂಮಿ ಬರಡಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ವೇಳೆ ಶ್ರೀಮಠದ ಲಕ್ಷ್ಮಯ್ಯ ತಾತಾ, ಗೋಪಾಲಸ್ವಾಮಿ, ವೆಂಕಟರಾಯ ಗೋಪಾಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.