ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಸರ್ವರ ಸಹಭಾಗಿತ್ವ ಅಗತ್ಯ
Team Udayavani, Oct 2, 2019, 2:57 PM IST
ಶಹಾಪುರ: ಪರಸ್ಪರ ಸಹಕಾರಗಳಿಂದ ಸರ್ಕಾರದ ಕಾರ್ಯ ಯೋಜನೆಗಳು ಅನುಷ್ಠಾನಗೊಳಿಸಲು ವ್ಯಾಪಾರಸ್ಥರು,ಅಂಗಡಿ ಮಾಲೀಕರು ಮುಕ್ತ ಮನಸ್ಸಿನನಿಂದ ಭಾಗಿಯಾಗಿ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಅನುಸಾರ ಪ್ಲಾಸ್ಟಿಕ್ ನಿಷೇಧತ್ತ ಹೆಜ್ಜೆ ಹಾಕುವ ಮೂಲಕ ಕಾನೂನನ್ನು ಗೌರವಿಸಬೇಕು ಎಂದು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಹೇಳಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ವ್ಯಾಪಾರಸ್ಥರ ಹಾಗೂ ಅಂಗಡಿ ಮುಗ್ಗಟ್ಟುಗಳ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರಣ ಸರ್ಕಾರ ಜನರ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕಾರ್ಯಯೋಜನೆ ರೂಪಿಸಿದೆ. ನಾಗರಿಕರು ಈ ಕುರಿತು ಜಾಗೃತಿ ಹೊಂದಬೇಕಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಲು ಸರ್ವರ ಸಹಕಾರ ಸಹಭಾಗಿತ್ವ ಅಗತ್ಯವಿದೆ ಎಂದರು.
ಪರಿಸರ ಇಂಜಿನಿಯರ್ ಹರೀಶ ಸಜ್ಜನ ಶೆಟ್ಟಿ ಮಾತನಾಡಿ, ಈಗಾಗಲೇ ಹಲವಾರು ಬಾರಿ ವಿವಿಧ ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಲ್ಲದೇ ಪ್ರತಿ ದಿನ ಮನೆ ಮನೆಗೆ ತ್ಯಾಜ್ಯ ಸಂಗ್ರಹ ವಾಹನದಲ್ಲಿಯೂ ಪ್ಲಾಸ್ಟಿಕ್ ನಿಷೇಧ ಕುರಿತು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಆಡಿಯೋ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ನಗರ ಯೋಜನಾ ಪ್ರಾ ಧಿಕಾರದ ಮಾಜಿ ಅಧ್ಯಕ್ಷ, ಕಿರಾಣಿ ಅಂಗಡಿ ಮಾಲೀಕ ಗುಂಡಪ್ಪ ತುಂಬಗಿ ಸೇರಿದಂತೆ ಇತರೆ ವ್ಯಾಪಾರಸ್ಥರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.