ಪೂಜಾರಿ ಕೊಲೆ ಪ್ರಕರಣ ಖಂಡಿಸಿ ಧರಣಿ
Team Udayavani, Nov 25, 2017, 4:51 PM IST
ಶಹಾಪುರ: ತಾಲೂಕಿನ ಮಹಲ್ ರೋಜಾ ಗ್ರಾಮದ ಶ್ರೀ ಯಮನೂರಪ್ಪ ದೇವಸ್ಥಾನದ ಪೀಠಾಧಿಧೀಶ ಹಣಮಂತ್ರಾಯ ಪೂಜಾರಿ (ಮುತ್ಯಾ) ಅವರನ್ನು ಬರ್ಬರ ಹತ್ಯೆಗೈಯಲು ಕುಮ್ಮಕ್ಕು ನೀಡಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕೋಲಿ ಸಮಾಜದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ, ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ಹಲವಡೆ ಕೋಲಿ ಸಮಾಜದವರ ಮೇಲೆ ನಿರಂತರ ದೌರ್ಜನ್ಯ, ಕೊಲೆಗಳು ನಡೆಯುತ್ತಿವೆ. ಶರಣ ಹಣಮಂತ್ರಾಯ ಪೂಜಾರಿ ಅವರನ್ನು ಕಳೆದ 15 ದಿನಗಳ ಹಿಂದೆಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಗೆ ಸಂಬಂಧಿಸಿದವರನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕಾರಣ ಪೊಲೀಸರು ಕೂಡಲೇ ಸಮುದಾಯದ ಜನರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಅಲ್ಲದೆ ಹಣಮಂತ್ರಾಯ ಪೂಜಾರಿ ಅವರ ಕೊಲೆಯಲ್ಲಿ ಭಾಗಿಯಾದ ಇನ್ನುಳಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಕೋಲಿ ಸಮುದಾಯ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ ಮಾತನಾಡಿ, ಹಣಮಂತ್ರಾಯ ಪೂಜಾರಿ (ಮುತ್ಯಾ) ಅವರನ್ನು ಬರ್ಬರ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಸಮರ್ಪಕ ಮಾಹಿತಿ ಆಧರಿಸಿ ದೂರು ಸಲ್ಲಿಸಿದ್ದರೂ ಪೊಲೀಸರು ಆರೋಪಿಗಳನ್ನು ಬಂಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನಯ್ಯ ಹಾದಿಮನಿ, ಮಲ್ಲರಡ್ಡಿ ವಿಭೂತಿಹಳ್ಳಿ, ಭೀಮರಾಯ ಮಮದಾಪುರ, ರವೀಂದ್ರನಾಥ ನರಸನಾಯಕ, ನಾಗಪ್ಪ ತಹಶೀಲ್ದಾರ್, ಗೋಪಾಲ ಸುರಪುರ, ಪಿಡ್ಡಪ್ಪ ಯಡಗಿಮದ್ರಿ, ಮರೆಪ್ಪ ಚಂಡು, ಬಸವರಾಜ ಕಂದಳ್ಳಿ ರಾಮಾಂಜನೇಯ ಬೋನೇರ, ಸಾಯಬಣ್ಣ ಚಂಡು, ನಾಗಪ್ಪ ಯಡಗಿಮದ್ರಿ, ಮಲ್ಲಪ್ಪ ಮಣಿಗಿರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಸಿಬಿ ಕಮಾನದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಅನಾವರಣಗೊಂಡಿತು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸೋಮಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್, ನಗರ ಸಿಪಿಐ ನಾಗರಾಜ ಜೆ, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.
ಸಂಚಾರ ಅಸ್ತವ್ಯಸ್ತ ನಗರದ ಪ್ರಮುಖ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದ ಪರಿಣಾಮ, ಬಸ್ ಮತ್ತು
ಖಾಸಗಿ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಹೀಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಬೈಕ್
ಸವಾರರು, ಶಾಲಾ ಮಕ್ಕಳು ಸೇರಿದಂತೆ ಬಸ್, ಕಬ್ಬು ಸಾಗಣೆ ಲಾರಿಗಳು ರಸ್ತೆಯುದ್ದಕ್ಕೂ ನಿಂತಿರುವುದು ಕಂಡು ಬಂದಿತು.
ತನಿಖೆ ನಂತರ ಕ್ರಮ ಕೊಲೆ ಮಾಡಿದ ಆರೋಪಿ ಅಂದೇ ಶರಣಾಗಿದ್ದಾನೆ. ಆದರೆ ದೂರಿನ್ವಯ ಇನ್ನೂ ಮೂರು ಆರೋಪಿಗಳಿದ್ದಾರೆ ಎಂದು ತಿಳಿಸಲಾಗಿದೆ. ಆ ಆರೋಪಿಗಳ ಹೆಸರು ತಿಳಿಸಲು ಬರುವುದಿಲ್ಲ. ಪ್ರಕರಣ ತೀವ್ರ ತನಿಖೆ ಹಂತದಲ್ಲಿದೆ. ಕಾರಣ ಆರೋಪಿಗಳ ಹೆಸರು ಬಹಿರಂಗ ಪಡಿಸಲ್ಲ. ತನಿಖೆ ನಂತರ ಆರೋಪಿಗಳು ಈ ಪ್ರಕರಣದಲ್ಲಿ
ಭಾಗಿಯಾಗಿದ್ದಾರೆ ಎಂಬ ಸುಳಿವು ದೊರೆತ ನಂತರವೇ ಅವರನ್ನು ಬಂಧಿಸಲಾಗುವುದು.
ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸ್ಪಿ ಯಾದಗಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.