ಅಗ್ನಿ ಅವಘಡ ತಪ್ಪಿಸಲು ಮುನ್ನೆಚ್ಚರಿಕೆ ಅಗತ್ಯ: ಸಂಧ್ಯಾನಕರ್
Team Udayavani, Feb 26, 2022, 3:30 PM IST
ಶಹಾಪುರ: ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದಾಗ ಅದನ್ನು ತಪ್ಪಿಸಲು ಹಲವು ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಹೊಂದಿರುವುದು ಅಗತ್ಯವಾಗಿದೆ ಎಂದು ಅಗ್ನಿಶಾಮಕದಳದ ಠಾಣಾಧಿಕಾರಿ ಮಚ್ಛೇಂದ್ರನಾಥ ಸಂಧ್ಯಾನಕರ್ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಭಾಗಿತ್ವದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡ ಅರಿವು ಮತ್ತು ಅನಾಹುತ ತಡೆಗಟ್ಟುವಿಕೆಯ ಪ್ರಾತ್ಯಕ್ಷಿಕೆ ಪ್ರದರ್ಶನ ಹಮ್ಮಿಕೊಂಡ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಅಗ್ನಿ ಅವಘಡಗಳ ಬಗ್ಗೆ ಮಾತನಾಡಿದ ಅವರು, 2010ರಲ್ಲಿ ಬೆಂಕಿ ಅವಘಡವೊಂದು ರಾಜಧಾನಿ ಕಾರ್ಟನ್ ಪ್ರದೇಶದಲ್ಲಿ ನಡೆದು, ಒಂಬತ್ತು ಜನರ ಸಜೀವ ದಹನ ಹೊಂದಿದ್ದು, ಮುಂದೆ ಇಂತಹ ಕಹಿ ಘಟನೆ ನಡೆಯಬಾರದೆಂದು ಸರ್ಕಾರ ಅಗ್ನಿ ಅವಘಡ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಮಾಹಿತಿಗೆ ತರಬೇಕೆನ್ನುವ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಗ್ನಿಅನಾಹುತವಾಗದಂತೆ ಪ್ರತಿಮನೆಗಳಲ್ಲಿಯೂ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು, ಗ್ಯಾಸ್ ಸಿಲೆಂಡರ್ ಬಳಸುವಾಗ ವಿದ್ಯುತ್ ಸಂಪರ್ಕದ ಕಾಳಜಿ, ಕಟ್ಟಿಗೆ ಒಲೆ ಬಳಸುವಾಗ ಎಚ್ಚರಿಕೆ ಅಗತ್ಯವೆಂದರು.
ಅಗ್ನಿಶಾಮಕ ದಳದ ಸಿಬ್ಬಂಶಿವಪುತ್ರಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂಯಿಂದ ಅಗ್ನಿ ಆರಿಸುವ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಿತು, ವೇದಿಕೆ ಮೇಲೆ ಮುಖ್ಯಗುರು ತಿಪ್ಪಣ್ಣ ಧೋತ್ರೆ, ಸುಧಾಕರ ಗುಡಿ, ಸಾಹೇಬ ಲಾಲ, ಲಕ್ಷ್ಮಣ ಲಾಳಸೇರಿ, ಅಗ್ನಿ ಶಾಮಕದಳದ ಬಸರೆಡ್ಡಿ, ಶಿವಾನಂದ, ರಾಜಶೇಖರ, ರಾಮಶೆಟ್ಟಿ ಸೇರಿದಂತೆ ಪ್ರೌಢಶಾಲೆಯ ಶಿಕ್ಷಕರು ಮತ್ತು ಪೇಠ ಶಹಾಪುರ ಹಿ.ಪ್ರಾ. ಶಾಲೆಯ ಶಿಕ್ಷಕರು ಇದ್ದರು.
ಅಗ್ನಿಶಾಮಕ ದಳದ ವಾಹನಗಳು ಮತ್ತು ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳು ಇರುವುದೇ ಜನರ ರಕ್ಷಣೆಗೆ, ಅವುಗಳ ತುರ್ತು ಕೆಲಸಗಳ ಬಗ್ಗೆ ಸರ್ವರ ಕಾಳಜಿ ಮುಖ್ಯವಾಗಬೇಕು. ನಮ್ಮ ವಾಹನಗಳಿಗೆ ರಸ್ತೆಗಳಲ್ಲಿ ಮುಕ್ತ ಅವಕಾಶ ನೀಡಬೇಕು. ಪ್ರತಿ ನಿಮಿಷವು ಮುಖ್ಯವೆಂಬುದು ಎಲ್ಲರಲ್ಲಿ ಬರಬೇಕು. -ಶಿವಪುತ್ರಪ್ಪ, ಅಗ್ನಿಶಾಮಕ ದಳದ ಸಿಬ್ಬಂದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.