ಗುಣಮಟ್ಟದ ಬೋಧನೆಗೆ ಆದ್ಯತೆ ನೀಡಿ
Team Udayavani, Mar 19, 2022, 5:14 PM IST
ನಾರಾಯಣಪುರ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಹಾಗೂ ಅಗತ್ಯ ಮಾರ್ಗದರ್ಶನ ನೀಡುವ ಶಿಕ್ಷಕರನ್ನು ಸಮಾಜ ಶ್ರೇಷ್ಠ ಭಾವನೆಯಿಂದ ನೋಡುತ್ತದೆ ಎಂದು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ರೆಡ್ಡಿ ಹೇಳಿದರು.
ಸಮೀಪದ ಗೆದ್ದಲಮರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ ಸೇವಾ ದಳದ ಶಾಖೆ ಉದ್ಘಾಟನೆ, ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಸೇವಾದಳ ನಿವೃತ್ತ ಉಪ-ದಳಪತಿ ಹ.ಸಂ. ಕಾಶಿನಕುಂಟಿ ಮಾತನಾಡಿ, ಸೇವೆಗಾಗಿ ಬಾಳು ಎಂಬುದು ನಾ.ಸು. ಹಡೇìಕರ್ ಅವರ ಕನಸಾಗಿತ್ತು. ಗುರು-ಹಿರಿಯರನ್ನು ಗೌರವಿಸುವಿಕೆ, ದೇಶ ಪ್ರೇಮ ಸೇವಾದಳದ ಮುಖ್ಯ ಧ್ಯೇಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ್ರಾಯ ಜಾಲಹಳ್ಳಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡಮನಿ, ಸಿದ್ಧರಾಮರೆಡ್ಡಿ ಸಾಹು, ಬಸಯ್ಯ ದ್ಯಾಪುರಮುತ್ಯಾ, ಬಸನಗೌಡ ವಠಾರ, ಶಂಕರ ಲಮಾಣಿ, ನೀಲಮ್ಮ ನಾಗರಬೆಟ್ಟ, ವೆಂಕಟೇಶ ರಾಠೊಡ ಸಾಹುಕಾರ, ಸಂಗಯ್ಯ ಬಾಚಿಹಾಳ, ಅಮರೇಶ ದೇವರಗಡ್ಡಿ, ನಿಂಗಣ್ಣ ಬಿರಾದಾರ, ದೇವಣ್ಣ ಬಳಿ, ಸೋಮನಗೌಡ, ಬಸಪ್ಪ ಕಟ್ಟಿಮನಿ, ಸೈಯದ್ ಕಮರುದ್ದಿನ್, ಬಸನಗೌಡ ಬಿರಾದಾರ, ಸಿಆರ್‌ಪಿ ಅಮರೇಶ ಅಂಗಡಿ, ಶಿವರೆಡ್ಡಿ, ಯಲ್ಲಪ್ಪ, ಶಿವಪುತ್ರ, ಭೀಮಣ್ಣ, ದುರಗೇಶ, ಹಣಮಂತ್ರಾಯ, ಮುಖ್ಯ ಶಿಕ್ಷಕ ವಿ.ಎಂ. ಬೆಳ್ಳುಬ್ಬಿ, ಅಮರೇಶ, ತೀರ್ಥಪ್ಪ, ಲಾಲಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.