ಶಿಷ್ಯರಿಗೆ ಸೂಕ್ತ ಮಾರ್ಗದರ್ಶನ ನೀಡುವಾತ ಗುರು: ಶ್ರೀ
Team Udayavani, Jan 24, 2022, 2:52 PM IST
ಗುರುಮಠಕಲ್: ಗುರುವೆಂದರೆ ತನ್ನ ಶಿಷ್ಯರ ಉನ್ನತಿಗಾಗಿ ಅಗತ್ಯ ಮಾರ್ಗದರ್ಶನ ನೀಡುವ ಶಕ್ತಿ. ಶಿಷ್ಯ ಸನ್ಮಾರ್ಗದಲ್ಲಿ ನಡೆಯಲು ಬೇಕಾದ ಎಲ್ಲ ರೀತಿಯ ಸಹಾಯ ನೀಡುವುದು ಗುರುವಿನ ಹೆಚ್ಚುಗಾರಿಕೆ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.
ತಾಲೂಕಿನ ಯಲ್ಕೇರಿ ಗ್ರಾಮದ ವಾರಣಾಸಿ ಹಿರೇಮಠದಲ್ಲಿ ರವಿವಾರ ವಾರಣಾಸಿ ಹಿರೇಮಠ ಹಾಗೂ ಭಂಗಿಮಠ ಮಳಖೇಡದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ಶ್ರೀಗಳ 83ನೇ ಜನ್ಮದಿನಾಚರಣೆ ಪ್ರಯುಕ್ತ ಶ್ರೀಗಳ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತ್ರಿಕಾಲ ಇಷ್ಟಲಿಂಗ ಪೂಜಾ ನಿರತರಾದ ಗಂಗಾಧರ ಶಿವಾಚಾರ್ಯರು ನಮ್ಮ ಭಾಗದ ಹಿರಿಯ ಯತಿಗಳು. ಅವರು ತಮ್ಮ ಶಿಷ್ಯರಿಗೆ ಸು ದೀರ್ಘವಾಗಿ ಮಾರ್ಗದರ್ಶನ ನೀಡುವ ಮತ್ತು ಇಷ್ಟಲಿಂಗದ ಮಹಿಮೆ ಸಾರಿದವರು. ಅವರಿಂದ ನಮ್ಮ ಭಾಗದಲ್ಲಿ ಹಲವರು ಅಧ್ಯಾತ್ಮದ ಪಥ ಪಡೆದುಕೊಂಡಿದ್ದಾರೆ ಎಂದರು. ನಾಣ್ಯಗಳು, ಹಣ್ಣು-ಹಂಪಲು ಹಾಗೂ ಧಾನ್ಯಗಳ ಮೂಲಕ ಗಂಗಾಧರ ಶಿವಾಚಾರ್ಯರ ತುಲಾಭಾರ ಮಾಡಲಾಯಿತು.
ಬೆಳಗ್ಗೆಯಿಂದ ಗ್ರಾಮದ ವಾರಣಾಸಿ ಹಿರೇಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಲಿನ ಗ್ರಾಮಸ್ಥರು ಮಠಕ್ಕೆ ಆಗಮಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗಳ ದರ್ಶನ ಪಡೆದರು.
ಕೊಟ್ಟೂರೇಶ್ವರ ಶಿವಾಚಾರ್ಯರು, ತಂಗಡಪಲ್ಲಿಯ ಶಿವಯೋಗಿ ಶಿವಾಚಾರ್ಯರು, ನೇರಡಗಂ ಪಂಚಮ ಸಿದ್ಧಲಿಂಗ ಶ್ರೀಗಳು, ಕಲ್ಮಠದ ಶ್ರೀಗಳು, ಸಿದ್ಧನಗೌಡ ದಳಪತಿ, ಸೋಮನಾಥರೆಡ್ಡಿ ಸೋಮನಾಥರೆಡ್ಡಿ ಬೋರಡ್ಡಿ, ನಾಗನಾಥರೆಡ್ಡಿ, ಶರಣಗೌಡ ಮಾಲಿಪಾಟೀಲ್, ಪರ್ವತರೆಡ್ಡಿ ಗಡೇಕಾರ, ವಿಜಯಕುಮಾರ ಅಂಕರೆಡ್ಡಿ, ಸಿದ್ಧನಗೌಡ ಪೊ.ಪಾಟೀಲ್, ಚಂದ್ರಶೇಖರ ಪೊ.ಪಾಟೀಲ್, ನೀಲಕಂಠ ಕಣೇಕಲ, ಸುಭಾಶ, ಪವನ, ಸೋಮಯಯ್ಯಸ್ವಾಮಿ, ಮಲ್ಲಣಗೌಡ ಮಾಸರೆಡ್ಡಿ, ಗುರುಚಾರಿ, ಡಾ| ವೀರಭದ್ರಪ್ಪ ಶಿವರಾಯ, ಶರಣಗೌಡ ಶಿವರಾಯ, ಶಿವರಾಜಪ್ಪ, ಶಿವಶಂಕ್ರಯ್ಯಸ್ವಾಮಿ, ಭೋಜನಗೌಡ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.