ಸರ್ಕಾರಿ ಶಾಲೆಗಳ ವಿಲೀನಕ್ಕೆ ವಿರೋಧಿಸಿ ಪ್ರತಿಭಟನೆ
Team Udayavani, Nov 23, 2018, 10:43 AM IST
ಯಾದಗಿರಿ: ಸರ್ಕಾರ ರಾಜ್ಯದಲ್ಲಿ 14,347 ಸರ್ಕಾರಿ ಶಾಲೆಗಳ ವಿಲೀನಿಕರಣದ ಪಟ್ಟಿಯನ್ನು ಕೈ ಬಿಟ್ಟು, ಸರ್ಕಾರಿ ಶಾಲೆಗಳಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದೆಂದು ಒತ್ತಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ತಮ್ಮ ಹಿಡನ್ ಅಜೆಂಡಾ ಮೂಲಕ ನಡೆಸಿರುವ ಹುನ್ನಾರ ಬಹಳ ಸ್ಟಷ್ಟವಾಗಿ ಗೋಚರಿಸುತ್ತದೆ. ಇನ್ನೊಂದೆಡೆ ಆರ್‌ಟಿಇ ಎಂಬ ಭೂತವನ್ನು ರಾಜ್ಯದಲ್ಲಿ ಜಾರಿಗೆ ತಂದಿರುವುದರಿಂದ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡಬೇಕಾದ ಮಕ್ಕಳು, ಖಾಸಗಿ ಶಾಲೆಗಳತ್ತ ಆಕರ್ಷಿತರಾಗಿ ವಾರ್ಷಿಕ ಲಕ್ಷಕ್ಕೂ ಮೇಲ್ಪಟ್ಟ ಮಕ್ಕಳು ಆಂಗ್ಲ ಶಾಲೆಗಳಿಗೆ ಸೇರುತ್ತಿದ್ದಾರೆ ಎಂದರು.
ಖಾಸಗಿ ಶಾಲೆಗಳಲ್ಲಿ ಆರ್‌ಟಿಇಯಡಿ ದಾಖಲಾದ ಮಕ್ಕಳ ಶಿಕ್ಷಣ ವೆಚ್ಚವನ್ನು ಕೋಟ್ಯಂತರ ರೂಪಾಯಿ ಖಾಸಗಿ ಶಾಲೆಗಳಿಗೆ ನೀಡಿ ಸರ್ಕಾರಿ ಶಾಲೆಗಳನ್ನು ಮೂಲೆ ಗುಂಪಾಗಿಸಲಾಗುತ್ತಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸದೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಲ್ಯಾಬ್, ಆಟಿಕೆ ಸಾಮಗ್ರಿಗಳು, ಸರಿಯಾದ ಬೋಧನಾ ಸಿಬ್ಬಂದಿ ನೇಮಿಸದೆ ಇರುವ ಒಬ್ಬ ಶಿಕ್ಷಕರೇ ಎಲ್ಲಾ ಮೀಟಿಂಗ್‌ಗಳು, ಬಿಸಿಯೂಟದ ವ್ಯವಸ್ಥೆ ಮತ್ತು ಬೋಧನೆ ಮಾಡಬೇಕಾಗಿದೆ. ಆದರೆ ಇದೆಲ್ಲ ಬಿಟ್ಟು ವಿಲೀನ ಪ್ರಕ್ರಿಯೆ ಸರ್ಕಾರ ಆರಂಭಿಸಿದರೆ ತೀವ್ರ ತರಹದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ವಿಜಯಕುಮಾರ್ ಮಗ್ಧಂಪೂರ, ಹಣಮಂತ ಪೂಜಾರಿ, ಶಿವರಾಜ ಗುತ್ತೇದಾರ, ಮಾರುತಿ ಮುದ್ನಾಳ, ಅಬ್ದುಲ್ ರಿಯಾಜ್, ಶರಣಮ್ಮ ಹಿರೇಮಠ, ಸ್ನೇಹ ಡಿ. ರಸಾಳ್ಕರ್, ವಿಜಯಕುಮಾರ ಮಗ್ಧಂಪೂರ, ಸೋಪಣ್ಣ ಹಳಿಸಗರ, ರವಿನಾಯಕ ಬೈರಮರಡಿ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ, ಮಲ್ಲುಸ್ವಾಮಿ ಗುಡಿಮs…, ದೇವಿಂದ್ರಪ್ಪ ವಾರಿ, ನಾಗೇಶ್ ಗದ್ದಿಗೆ, ಶರಣು ಬೈರಮಡ್ಡಿ, ಗದ್ದೆಪ್ಪ ಎಚ್., ತಿಮ್ಮಣ್ಣ ಕಾಳೆಬೆಳಗುಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.