ಕುರುಬರ ಸಮಾಜದಿಂದ ಪ್ರತಿಭಟನೆ
Team Udayavani, Dec 22, 2021, 4:20 PM IST
ಸಿಂಧನೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸ ಮಾಡಿ, ನಾಡಧ್ವಜ ಸುಟ್ಟು ಹಾಕಿರುವ ಘಟನೆ ಖಂಡಿಸಿ ತಾಲೂಕು ಕುರುಬರ ಸಂಘದಿಂದ ಮಂಗಳವಾರ ಬೃಹತ್ ಪ್ರತಿಭಟನೆಯ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಾಜದ ತಾಲೂಕಾಧ್ಯಕ್ಷ ಪೂಜಪ್ಪ ಪೂಜಾರಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸ ಮಾಡಿ, ನಾಡಧ್ವಜ ಸುಟ್ಟು ಹಾಕಿರುವ ಎಂಇಎಸ್ ಪುಂಡರ ವಿರುದ್ಧ ನಮ್ಮ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ದಾರ್ಶನಿಕರ ಭಾವಚಿತ್ರ, ಪುತ್ಥಳಿ ಧ್ವಂಸ ಮಾಡುವದು ಸರಿಯಲ್ಲ. ಇದು ಹೇಡಿಗಳ ಕೃತ್ಯ. ಸರಕಾರ ರಾಜ್ಯದಲ್ಲಿ ಎಂಎಎಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಗುರುಗಳಾದ ನಂಜುಂಡಯ್ಯ ಗುರುವಿನ್, ಮಾದಯ್ಯ ಗುರುವಿನ್, ಬೀರಪ್ಪ ಪೂಜಾರಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭಾ ಸದಸ್ಯರಾದ ಕೆ.ರಾಜಶೇಖರ್, ಚಂದ್ರು ಮೈಲರ್, ಮುಖಂಡರಾದ ವೆಂಕೋಬಣ್ಣ ಸಾಸಲಮರಿ, ಸುರೇಶ್ ಹಚ್ಚೊಳ್ಳಿ, ದುರುಗಪ್ಪ ಕಟಾಲಿ, ರಾಮಣ್ಣ ಮಾವಿನಮಡಗು, ಪಕ್ಕೀರಪ್ಪ, ಶರಣಪ್ಪ ಚನಳ್ಳಿ, ವೆಂಕಟೇಶ್ ಭಂಗಿ, ಗದ್ದೆಪ್ಪ, ವೆಂಕಟೇಶ್ ಬಾದರ್ಲಿ, ವಸಂತ್ ಕುಮಾರ್ ಭಂಗಿ, ಸುರೇಶ್ ಸಿದ್ದಾಪುರ, ಶಿವರಾಜ್ ಬಿಂಗಿ, ಟಿ.ಶಿವು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.