ರೈತರಿಂದ ರಸ್ತೆ ತಡೆದು ಪ್ರತಿಭಟ®; ಡಿಸಿ ಭರವಸೆಗೆ ತಣಿದ ರೈತರು
ಕಾಲುವೆ ನೀರಿನ ಹಕ್ಕನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು ಎಂದು ಕಳವಳ
Team Udayavani, Jan 23, 2021, 5:46 PM IST
ಸಿರವಾರ: ತಾಲೂಕಿನ ಜಕ್ಕಲದಿನ್ನಿ, ಗಣದಿನ್ನಿ, ಭಾಗ್ಯನಗರ ಕ್ಯಾಂಪ್, ಜಾಲಾಪೂರು ಕ್ಯಾಂಪ್‌ಗ್ಳಿಗೆ ಸೇರಿದಂತೆ ತುಂಗಾಭದ್ರಾ ಎಡದಂಡೆ ನಾಲೆಯ 92ನೇ
ಡಿಸ್ಟ್ರಿಬ್ಯೂಟರ್‌ನ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಕೆಳಭಾಗದ ರೈತರು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ರಸ್ತೆ ತಡೆದು
ಶುಕ್ರವಾರ ಪ್ರತಿಭಟಿಸಿದರು.
ಗಂಗಾಧರ ನಾಯಕ ಮಾತನಾಡಿ, ತುಂಗಾಭದ್ರಾ ಅಣೆಕಟ್ಟಿನಲ್ಲಿ ಅಗತ್ಯ ನೀರು ಸಂಗ್ರಹ ಹಾಗೂ ಎಡದಂತೆ ನಾಲೆಗಳಗೆ ಸಮರ್ಪಕ ನೀರು ಹರಿಸಲಾಗುತ್ತಿದ್ದರೂ ಕೊನೆ ಭಾಗದ ಉಪ ಕಾಲುವೆಗಳಿಗೆ ಇನ್ನು ನೀರು ಹರಿಯುತ್ತಿಲ್ಲ ಎಂದು ದೂರಿದರು.
ಪಟ್ಟಣ ಸೇರಿದಂತೆ ಜಕ್ಕಲದಿನ್ನಿ, ಭಾಗ್ಯನಗರ ಕ್ಯಾಂಪ್, ಗಣದಿನ್ನಿ ರೈತರು ಬೆಳೆದಿರುವ ಹತ್ತಿ, ಮೆಣಸಿನಕಾಯಿ , ಜೋಳದ ಬೆಳೆಗಳು ಒಣಗುತ್ತಿವೆ.
ಮೇಲ್ಭಾಗದ ರೈತರು ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿದ್ದು, ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ರೈತರು ಆರೋಪಿಸಿದರು. ಮಾಜಿ ಶಾಸಕ ಹಂಪಯ್ಯ ನಾಯಕ ಮಾತನಾಡಿ, ಹಾಲಿ ಶಾಸಕರು ಇಷ್ಟೆಲ್ಲ ಹೋರಾಟ ನಡೆದರೂ ಸ್ಥಳಕ್ಕೆ ಬಾರದೇ ನಿರ್ಲಕ್ಷÂವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಧಿಕಾರಿ ಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ನೀಡುವವರೆಗೂ ಪ್ರತಿಭಟನೆಹಿಂಪಡೆಯುವುದಿಲ್ಲ ಎಂದರು.
ಜೆ. ಶರಣಪ್ಪಗೌಡ ಮಾತನಾಡಿ, ಸಂಗ್ರಹ ನೀರು ಹೆಚ್ಚಿದ್ದರೂ ನಮಗೆ ತಲುಪುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮುಂದೆ ನಾವು ಕಾಲುವೆ ನೀರಿನ ಹಕ್ಕನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಸಂಪೂರ್ಣ ಬಂದ್: ಪ್ರತಿಭಟನೆಗೆ ಬೆಂಬಲಿಸಿ ವರ್ತಕರು ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದರು. ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಸಂಪೂರ್ಣ ಅ ಸ್ತವ್ಯಸ್ತಗೊಂಡು ಬಸ್, ಖಾಸಗಿ, ದ್ವಿಚಕ್ರ ಸವಾರರು ಪರದಾಡುವಂತಾಯಿತು.
ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್, ಸಿಂಧನೂರು ಸಿಪಿಐ ಜಿ. ಚಂದ್ರಶೇಖರ ನೇತೃತ್ವದಲ್ಲಿ ಬಂದೋಬಸ್ತ್
ಒದಗಿಸಲಾಗಿತ್ತು.
ಪ್ರತಿಭಟನೆಯಲ್ಲಿ ಚುಕ್ಕಿ ಸೂಗಪ್ಪ ಸಾಹುಕಾರ,ಶಂಕರಗೌಡ ಹರವಿ, ಶಿವಶರಣಗೌಡ ಲಕ್ಕಂದಿನ್ನಿ, ಜಕ್ಕಲದಿನ್ನಿ ಮಲ್ಲಿಕಾರ್ಜುನ, ಜೆ. ದೇವರಾಜಗೌಡ,
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ಮೇಟಿ, ಜಿ. ಲೋಕರೆಡ್ಡಿ, ಚಂದ್ರು ಕಳಸ, ಎನ್.ಉದಯಕುಮಾರ,
ಚುಕ್ಕಿ ಶಿವಕುಮಾರ, ಬ್ರಿಜೇಶ ಪಾಟೀಲ್, ಅರಿಕೇರಿ ಶಿವಶರಣ, ಪಿ.ಅಮರೇಶ ಚಾಗಭಾವಿ, ರಮೇಶ ದರ್ಶನಕರ್, ಕಲ್ಲೂರು ಬಸವರಾಜ, ಎಸ್.
ದಾನನಗೌಡ, ರಾಜಪ್ಪಗೌಡ ಭಾಗ್ಯನಗರ, ಎಂ. ರಾಧಾಕೃಷ್ಣ, ಕಡದಿನ್ನಿ ಬೀರಪ್ಪ, ನಾಗನಗೌಡ ಅತ್ತನೂರು, ರಮೇಶ ಚಿಂಚಿರಕಿ, ಚಾಗಭಾವಿ
ಉದಯಕುಮಾರ, ಚನ್ನೂರು ಚನ್ನಪ್ಪ, ಎಂ. ಪ್ರಕಾಶ, ಕರವೇ ರಾಘವೇಂದ್ರ, ಡಿ. ಯಮನೂರಪ್ಪ, ಎಂ. ಶ್ರೀನಿವಾಸ, ವೈ. ಶ್ರೀನಿವಾಸ, ಗಣೇಕಲ್ ವೀರೇಶ,
ಪತ್ತಾರ ನಾಗಪ್ಪ, ನೀಲಗಲ್ ವಿರುಪಾಕ್ಷಪ್ಪ, ಬಸವರಾಜ ದಳಪತಿ ಜಾಲಾಪುರ, ನೀಲಗಲ್ ಚಂದ್ರಶೇಖರ, ರಮೇಶ್ ಅಂಗಡಿ, ನಾಗರಾಜ ಬೊಮ್ಮನಾಳ
ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.