ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿ
Team Udayavani, Sep 10, 2022, 3:53 PM IST
ಕಮಲನಗರ: ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಕನ್ನಡ ಭವನ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ವಿಶಾಲವಾದ ಸಭಾಂಗಣ, ಅಕ್ಕಪಕ್ಕ ಪ್ರಾಂಗಣ, ಶೌಚಾಲಯ ಹೀಗೆ ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಹೀಗಾಗಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾಗಿರುವ ನಿವೇಶನ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ನೇತೃತ್ವದ ನಿಯೋಗ ಬುಧವಾರ ಕಮಲನಗರ ಪಿಡಿಒ ರಾಜಕುಮಾರ ತಂಬಾಕೆ ಅವರಿಗೆ ಮನವಿ ಸಲ್ಲಿಸಿ, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಮಲನಗರದಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕೆಂಬುದು ಕನ್ನಡಾಭಿಮಾನಿಗಳ ದಶಕಗಳ ಕನಸು. ಸಾಹಿತ್ಯಾಸಕ್ತರ ಸ್ವಾಭಿಮಾನದ ಹೆಗ್ಗುರುತಾಗಿದ್ದು, ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಗೌರವಾಧ್ಯಕ್ಷ ಎಸ್.ಎನ್. ಶಿವಣಕರ, ಸಾಹಿತಿ ಜಗನ್ನಾಥ ಚಿಮ್ಮಾ, ಲಿಂಗಾನಂದ ಮಹಾಜನ, ಯಶವಂತ ಬಿರಾದಾರ, ಬಸವರಾಜ ಪಾಟೀಲ್, ಮಹಾದೇವ ಮಡಿವಾಳ, ಬಂಟಿ ರಾಂಪುರೆ, ಧನರಾಜ ಭವರಾ, ಪ್ರಭು ಕಳಸೆ, ಶಿವರಾಜ ಜಲಸಿಂಗೆ, ಮಡಿವಾಳಪ್ಪ ಮಹಾಜನ, ಸಾಯಿನಾಥ ಕಾಂಬಳೆ, ಸಂತೋಷ ಸುಲಾಕೆ, ಡಾ| ಎಸ್.ಎಸ್. ಮೈನಾಳೆ, ವಿಶಾಲ ಮಹಾಜನ, ಅಜರೋದ್ದಿನ್ ಬಾಗವಾನ್, ಉಮಾಕಾಂತ ಮಹಾಜನ, ನಾಗೇಶ ಸಂಗಮೆ, ಶಿವರಾಜ ಪಾಟೀಲ್, ಮನೋಜ ಹಿರೇಮಠ, ಸುಭಾಷ ಬಿರಾದಾರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.