ರಂಗಂಪೇಟೆಗೆ ಪಬ್ಲಿಕ್ ಶಾಲೆ ಮಂಜೂರು
Team Udayavani, Jan 7, 2019, 11:35 AM IST
ಸುರಪುರ: ರಂಗಂಪೇಟೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಾಥಮಿಕದಿಂದ ಪಿಯುವರೆಗೆ ನಡೆಯುತ್ತಿರುವ ಕನ್ನಡ, ಉರ್ದು ಆಂಗ್ಲ ಮಾಧ್ಯಮ ಸೇರಿದಂತೆ ಎಲ್ಲಾ ಶಾಲೆಗಳನ್ನು ಒಟ್ಟೂಗೂಡಿಸಿ ಪಬ್ಲಿಕ್ ಶಾಲೆ ಎಂದು ಗುರುತಿಸಿ ಸರ್ಕಾರ ಮಂಜೂರಾತಿ ನೀಡಿದೆ ಎಂದು ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಡೇಕಲ್ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ 1ನೇ ತರಗತಿಯಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ನಡೆಯುತ್ತಿರುವ 176 ಶಾಲೆಗಳನ್ನು ಪಬ್ಲಿಕ್ ಶಾಲೆಗಳೆಂದು ಘೋಷಿಸಿದೆ. ಆ ಪೈಕಿ ರಂಗಂಪೇಟೆ ಶಾಲೆ ಸೇರಿರುವುದು ಗಮನಾರ್ಹ ಸಂಗತಿ.
ಈ ಆವರಣದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಬೀಚ್ ಮೊಹಲ್ಲಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ. ಸರ್ಕಾರಿ ಪ್ರೌಢಶಾಲೆ ಪದವಿ ಪೂರ್ವ ಕಾಲೇಜು ಇವೆಲ್ಲವು ಒಂದೇ ಪ್ರಾಂಗಣದಲ್ಲಿ ನಡೆಯುತ್ತಿವೆ. ಈ ಪ್ರಾಂಗಣದಲ್ಲಿನ ಎಲ್ಲಾ ಸಂಸ್ಥೆ ಸೇರಿ 1,300 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಬೋಧನಾ ಗುಣಮಟ್ಟ ಸುಧಾರಣೆಗಾಗಿ ಸ್ಮಾರ್ಟ್ ಕ್ಲಾಸ್, ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ವಿಷಯಗಳಿಗೆ ಪ್ರಯೋಗಾಲಯ, ಕಂಪ್ಯೂಟರ್, ಕ್ರೀಡಾ ಕೋಣೆ, ಶೌಚಾಲಯ, ಕುಡಿಯುವ ನೀರು ಮೂಲಭೂತ ಸೌಲಭ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ವೃತ್ತಿ, ಶಿಕ್ಷಣ, ಕಲೆ, ಸಂಗೀತ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಯೋಗ ಶಿಕ್ಷಣ ಅನುಷ್ಠಾನಗೊಳಿಸಲಾಗುವು.
ಡಯಟ್ ಹಿರಿಯ ಉಪನ್ಯಾಸಕರು ನೋಡಲ್ ಅಧಿಕಾರಿಯಾಗರಲಿದ್ದಾರೆ. ಡಿಡಿಪಿಐ. ಬಿಇಒ ಮತ್ತು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗಗಳ ಮುಖ್ಯಸ್ಥರು ಮೇಲ್ವಿಚಾರಕರಾಗಿರಿವರು. ಪಿಯು ಕಾಲೇಜು ಪ್ರಾಂಶುಪಾಲರು ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.
ಮೂಲ ಸೌಕರ್ಯಕ್ಕಾಗಿ 5 ಲಕ್ಷ, ಪೀಠೊಪಕರಣಕ್ಕಾಗಿ ಶಾಸಕರಿಂದ 7.2 ಲಕ್ಷ ರೂ. ಕಟ್ಟಡ ರೀಪೇರಿಗಾಗಿ 10 ಲಕ್ಷ ರೂ. ಮಂಜೂರಿಯಾಗಿದೆ. ಆರ್.ಐ.ಡಿ.ಎಫ್ ಯೋಜನೆಯಲ್ಲಿ ಹೆಚ್ಚುವರಿ 2 ಕೋಣೆ ಹಾಗೂ ಜಿಪಂಯಿಂದ 2 ಕೋಣೆಗಳ ಕಾಮಗಾರಿ ನಡೆಯುತ್ತಿದೆ. ಹಳೆಯದಾದ ಮಾದರಿಯ ಪ್ರಾಥಮಿಕ ಶಾಲೆಯನ್ನು ನೆಲಸಮಗೊಳಿಸಿ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ 55 ಹೊಸ ಕೋಣೆಗಳ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕ್ರಿಯಾ ಯೋಜನೆಯೊಂದಿಗೆ ನಕ್ಷೆ ಸಿದ್ಧಗೊಳಸಿಲಾಗಿದೆ.
ನಗರಕ್ಕೆ ಪಬ್ಲಿಕ್ ಶಾಲೆ ಮಂಜೂರಿಯಾಗಿ ರುವುದು ಸಂತಸ ತಂದಿದೆ. ಎಲ್ಲಾ ಸಕಲ ಸೌಲಭ್ಯಗಳೊಂದಿಗೆ ನಮ್ಮ ಮಕ್ಕಳು
ಗುಣಮಟ್ಟದ ಶಿಕ್ಷಣ ಪಡೆಯಲಿ. ಎಸ್‌ಡಿಎಂಸಿ, ಅಧ್ಯಕ್ಷ ರಾಜು ಪುಲ್ಸೆ. ನಮ್ಮ ಶಾಲೆಯನ್ನು ಪಬ್ಲಿಕ್ ಶಾಲೆಯನ್ನಾಗಿ
ಪರಿವರ್ತಿಸಿರುವ ಸರ್ಕಾರದ ಕಾರ್ಯ ಶ್ಲಾಘನೀಯವಾಗಿದೆ. ಪಬ್ಲಿಕ್ ಶಾಲೆ ನಿರ್ಮಾಣದಿಂದ ನಮ್ಮ ಮೇಲೆ ಹೆಚ್ಚಿನ
ಜವಾಬ್ದಾರಿ ಬೀಳಲಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಸಕಲ ಸೌಲಭ್ಯಕ್ಕೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.
ಬಸವರಾಜ ಕೊಡೇಕಲ್, ಪಿಯು ಕಾಲೇಜು ಪ್ರಭಾರಿ ಪ್ರಾಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.