ರಾಘವೇಂದ್ರ ಶ್ರೀ ಪಟಾಭಿಷೇಕ ಮಹೋತ್ಸವ
Team Udayavani, Mar 12, 2019, 12:04 PM IST
ಯಾದಗಿರಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಎಂದು ಪ್ರಸಿದ್ಧರಾಗಿದ್ದಾರೆ.
ಅವರಲ್ಲಿ ಬೇಡಿಕೊಂಡು ಬಂದ ಭಕ್ತರ ಸಂಕಷ್ಟಗಳನ್ನ ಪರಿಹರಿಸುವ ಮಹಾನ್ ದೇವಾಂಶ ಸಂಭೂತರಾಗಿದ್ದರು ಎಂದು ಪಂ. ರಾಘವೇಂದ್ರಾಚಾರ್ಯ ಬಳಿಚಕ್ರ ಹೇಳಿದರು.
ನಗರ ಶ್ರೀ ರಾಘವೇಂದ್ರ ಪರಿಮಳ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ
ಮತ್ತು ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಶ್ರೇಷ್ಠ ಸನ್ಯಾಸಿಯಾಗಿದ್ದ ಶ್ರೀಗಳು, ಹಲವು ಗ್ರಂಥಗಳನ್ನು ರಚಿಸಿ ಜ್ಞಾನವನ್ನು ಪಸರಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಇನ್ನೋರ್ವ ಉಪನ್ಯಾಸಕ ಪಂ. ನರಸಿಂಹಾಚರ್ಯ ಪುರಾಣಿಕ ಮಾತನಾಡಿ, ಉತ್ತರಾದಿ ಮಠದ ಪೂಜ್ಯಶ್ರೀ ಸತ್ಯಾತ್ಮತೀರ್ಥರು ವೈರಾಗ್ಯ ಮತ್ತು ಮಹಾನ್ ತಪಸ್ವಿಯಾಗಿದ್ದಾರೆ. ಅವರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಪಂಡಿತರ ತಂಡವನ್ನು ಸೃಷ್ಟಿಸಿದ್ದಾರೆ. ಸದಾ ಸಮಾಜದ ಹಿತವನ್ನು ಬಯಸುವ ಅವರು ಯುವಕರಲ್ಲಿ ಧಾಮಿಕ ಜಾಗೃತಿ ಮುಡಿಸಿದ್ದಾರೆ ಎಂದು ಹೇಳಿದರು.
ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ನಿಮಿತ್ತ ಬೆಳಗ್ಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀ ರಾಯರ ಅಷ್ಟೋತ್ತರ
ಮತ್ತು ಭಕ್ತ ಸಮೂಹದಿಂದ ವಿಶೇಷ ಪುಷ್ಪಾರ್ಚನೆ ಮಾಡಲಾಯಿತು. ಮಧ್ಯಾಹ್ನ ರಥೋತ್ಸವ ಹಾಗೂ ತೀರ್ಥ ಪ್ರಸಾದ ಜರಗಿತು. ಈ ಸಂದರ್ಭದಲ್ಲಿ ವಿಪ್ರ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.