ಕಾಲೂಕು ಕೇಂದ್ರ ಘೋಷಣೆಗೆ ಮನವಿ
Team Udayavani, Sep 11, 2017, 5:41 PM IST
ಕೆಂಭಾವಿ: ಸರಕಾರ ಕೆಂಭಾವಿ ಪಟ್ಟಣವನ್ನು ತಾಲೂಕು ಎಂದು ಘೋಷಣೆ ಮಾಡದೇ ಇರುವುದು ಸರಿಯಲ್ಲ. ಕೆಂಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುದನೂರು, ಅಗ್ನಿ, ಅರಕೇರಾ (ಜೆ), ಬೈಚಬಾಳ ಗ್ರಾಪಂಗಳ ಅಧ್ಯಕ್ಷರು ಆಯಾ ಗ್ರಾಮಸ್ಥರ ಪರವಾಗಿ ನಿರ್ಣಯ ಕೈಗೊಂಡು ಕೆಂಭಾವಿ ತಾಲೂಕಿಗೆ ಬೆಂಬಲಿಸಿದ್ದಾರೆ. ಕೆಂಭಾವಿಯಲ್ಲಿ ವಿಶೇಷ ತಹಶೀಲ್ದಾರ ಕಾರ್ಯಾಲಯವನ್ನು ಸ್ಥಾಪಿಸಿ ತಾಲೂಕು ಘೋಷಣೆ ಮಾಡಬೇಕೆಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತೆರಳಿ ಸೆ. 6ರಂದು ರಾಜ್ಯ ಸರಕಾರ ಹೊರಡಿದ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲಾಯಿತು.
ಈ ಮೇಲ್ಕಾಣಿಸಿದ ಗ್ರಾಮಗಳು ಕೆಂಭಾವಿಗೆ ಸಮೀಪವಾಗುತ್ತಿದ್ದು, ಪೊಲೀಸ್ ಠಾಣೆ ಮತ್ತು ಎಲ್ಲಾ ವ್ಯವಹಾರಗಳು ಕೆಂಭಾವಿಯಿಂದ ನಡೆಯುತ್ತವೆ, ಕಾರಣ ಭಾವಿ ತಾಲೂಕು ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳ
ಮುಖಾಂತರ ಮುಖ್ಯ ಮಂತ್ರಿಗಳಿಗೆ ಆಗ್ರಹಿಸಲಾಯಿತು.
ಕೆಂಭಾವಿ ವಲಯಕ್ಕೆ ಸಾಮಾಜಿಕ ನ್ಯಾಯ ಸರಕಾರದಿಂದ ದೊರೆವುತ್ತಿಲ್ಲ ಎಂದು ನಿಯೋಗದ ಸದಸ್ಯರು ಆಕ್ರೋಶ
ವ್ಯಕ್ತಪಡಿಸಿದರು.
1957ರಿಂದ ಕೆಂಭಾವಿ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಮುಖ್ಯಮಂತ್ರಿಗಳು ಸಹ ಹೊಸ ತಾಲೂಕುಗಳ ರಚನೆ ಮಾಡುವಾಗ ನಿಮ್ಮ ಪಟ್ಟಣವನ್ನು ತಾಲೂಕು ಮಾಡುವದಾಗಿ ಹೇಳಿ, ಜಿಲ್ಲಾಧಿಕಾರಿಗಳಿಂದ ವರದಿ ಸಹ ತರಸಿಕೊಂಡಿದ್ದರು. ವರದಿಯಲ್ಲಿ ಜಿಲ್ಲಾಧಿಕಾರಿಗಳ 14 ಗ್ರಾಪಂಗಳ ಸೇರ್ಪಡೆಯೊಂದಿಗೆ ಶಿಫಾರಸ್ಸು ಮಾಡಿದ್ದು ಇತ್ತು. ಸಮಿತಿ ಶಿಫಾರಸ್ಸಿನಲ್ಲಿರದ ಗ್ರಾಮಗಳನ್ನು ತಾಲೂಕು ಘೋಷಣೆ ಮಾಡಿ ಅರ್ಹತೆ ಇರುವ ಕೆಂಭಾವಿ ಪಟ್ಟಣವನ್ನು ಘೋಷಣೆಯಿಂದ ಕೈ ಬಿಟ್ಟಿದ್ದು ಸರಿಯಲ್ಲ ಎಂದು ನಿಯೋಗ ತಿಳಿಸಿತು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಮಂಜುನಾಥ, ಕೆಂಭಾವಿ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, 14 ಗ್ರಾಪಂಗಳನ್ನು ಒಳಪಡುತ್ತಿದ್ದು ದೊಡ್ಡ ಹೊಬಳಿ ಕೇಂದ್ರವಾಗಿದೆ. ನಿಮ್ಮ ಮನವಿಯನ್ನು
ಶಿಫಾರಸ್ಸಿನೊಂದಿಗೆ ಸರಕಾರಕ್ಕೆ ಕಳುಹಿಸಲಾಗುವುದು.
ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿ ಪಾಟೀಲ್, ಕೆಂಭಾವಿ ಹಿರೇಮಠದ ಚನ್ನಬಸವ
ಶಿವಾಚಾರ್ಯರರು, ಸಿದ್ರಾಮರಡ್ಡಿ ಯಡಹಳ್ಳಿ, ವಿಜಯರಡ್ಡಿ ಪಾಟೀಲ್, ಶಿವರಾಜ ಬೂದೂರು, ಶರಣಪ್ಪ ಬಂಡೋಳಿ,
ನಿಂಗನಗೌಡ ಅಮಲಿಹಾಳ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ಮಶಾಕಸಾಬ್ ಸಾಸನೂರು, ಸಿದ್ದನಗೌಡ ಪಾಟೀಲ್, ಸಿದ್ರಾಮರಡ್ಡಿ ಗೂಗಲ್, ಮುದಕಣ್ಣ ಚಿಂಚೋಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.