ಕೂಲಿ ಸಮಾಜ ಎಸ್ಟಿಗೆ ಸೇರಿಸಲು ಮನವಿ
Team Udayavani, Apr 12, 2022, 3:12 PM IST
ಸೈದಾಪುರ: ಕೂಲಿ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ತಾಪಂ ಮಾಜಿ ಸದಸ್ಯ ಚಂದಪ್ಪ ಕಾವಲಿ ನೇತೃತ್ವದಲ್ಲಿ ಕೂಲಿ ಸಮಾಜದ ಮುಖಂಡರು ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿಗೆ ಅವರಿಗೆ ಕಲಬುರಗಿ ನಗರದಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೂಲಿ ಸಮಾಜದ ಮುಖಂಡ ಚಂದಪ್ಪ ಕಾವಲಿ, ನಮ್ಮ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವುದು ಅನೇಕ ಆಯೋಗಗಳಿಂದ ತಿಳಿದು ಬಂದ ವಿಷಯ. ಆದರಿಂದ ನಮ್ಮ ಸಮುದಾಯವನ್ನು ಎಸ್ಟಿ ಸೇರಿಸಬೇಕು ಎಂದು ಅನೇಕ ದಶಕಗಳಿಂದ ಹೋರಾಟ ನಡೆದಿದೆ. ಅದೇ ರೀತಿಯಾಗಿ ರಾಜ್ಯ ಸರ್ಕಾರವು ಕೇಂದ್ರ ಬುಡಕಟ್ಟು ಅಭಿವೃದ್ಧಿ ಇಲಾಖೆಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದಿರುವುದು ನೋವಿನ ಸಂಗತಿ. ಆದ್ದರಿಂದ ತಾವುಗಳು ಕೇಂದ್ರ ಮಟ್ಟದಲ್ಲಿ ಎಸ್ಟಿ ಸೇರ್ಪಡೆಗೆ ಇರುವ ಅಡೆತಡೆ ಬಗೆಹರಿಸಿ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಅಮರೇಶ್ವರಿ ಚಿಂಚನಸೂರು, ಶಂಕ್ರಪ್ಪಗೌಡ ಬಾಲಛೇಡ್, ಕೂಲಿ ಸಮಾಜದ ಮುಖಂಡ ಸುರೇಶ ಆನಂಪಲ್ಲಿ, ಬಿಜೆಪಿ ಯುವ ಮುಖಂಡ ವಿಜಯಕುಮಾರ ಚಿಂಚನಸೂರ, ಅಂಜನೇಯ ಕಾವಲಿ, ಸಾಬಣ್ಣ ಬಾಗ್ಲಿ, ಚಂದ್ರಶೇಖರ ಬಾಡಿಯಾಲ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.