ಯಕ್ಷಿಂತಿ ಗ್ರಾಮದ 200 ಮನೆ ಸ್ಥಳಾಂತರಿಸಲು ಮನವಿ
Team Udayavani, Aug 13, 2019, 2:25 PM IST
ಶಹಾಪುರ: ಯಕ್ಷಿಂತಿ ಮನೆಗಳು ಜಲಾವೃತವಾಗಿವೆ.
ಶಹಾಪುರ: ತಾಲೂಕಿನ ಯಕ್ಷಿಂತಿ ಗ್ರಾಮದ ಸುಮಾರು ಎರಡು ನೂರು ಮನೆಗಳ ಸ್ಥಿತಿ ಗಂಭೀರವಾಗಿದ್ದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರವಾಹ ಬಂದಾಗೊಮ್ಮೆ ಕೃಷ್ಣಾ ನದಿ ನೀರಿನಿಂದ ಇಲ್ಲಿನ ಜನರ ಸ್ಥಿತಿ ಅಧೋಗತಿಗೆ ತಲುಪುತ್ತದೆ. ಗ್ರಾಮಸ್ಥರ ಬದುಕು ತಹಬಂದಿಗೆ ಬರಲು ಕನಿಷ್ಠ ಐದಾರು ತಿಂಗಳು ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಜನರಿದ್ದಾರೆ. ಪ್ರಸ್ತುತ ಪ್ರವಾಹದಿಂದ ಯಕ್ಷಿಂತಿ ಗ್ರಾಮದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಮನೆಗಳೆಲ್ಲ ಕೃಷ್ಣಾ ನೀರಿನಲ್ಲಿ ಮುಳುಗಿದ್ದು, ಗ್ರಾಮದಲ್ಲಿ ಜಾನುವಾರುಗಳು ಅನಾಥವಾಗಿ ತಿರುಗುತ್ತಿವೆ. ಕೆಲವೊಬ್ಬರು ಯಕ್ಷಿಂತಿ ಗ್ರಾಮಸ್ಥರನ್ನು ಹತ್ತಿಗೂಡೂರ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಜಾನುವಾರುಗಳು ಮಾತ್ರ ಗ್ರಾಮದಲ್ಲಿ ಅನಾಥವಾಗಿವೆ.
ಕೆಲವೊಬ್ಬರು ಜಾನುವಾರುಗಳನ್ನು ಗ್ರಾಮದಲ್ಲಿ ಬಿಟ್ಟು ಹೊಡೆದಿದ್ದು, ಇನ್ನೂ ಕೆಲವರು ಹಸು, ಎಮ್ಮೆಗಳನ್ನು ಟ್ರ್ಯಾಕ್ಟರ್‌ನಲ್ಲಿ ಹೊತ್ತೂಯ್ದಿದ್ದಾರೆ. ಕೆಲವು ಗ್ರಾಮದಲ್ಲಿ ಸಂಚರಿಸುತ್ತಿವೆ. ಪ್ರಾಣಿಗಳು ಸಮರ್ಪಕ ಆಹಾರವಿಲ್ಲದೆ ತಮ್ಮ ಮಾಲೀಕರು ಇಲ್ಲದೆ ನರಳುತ್ತಿವೆ. ಗ್ರಾಮದಲ್ಲಿ ಕನಿಷ್ಠ 50 ಹಸು ಕರುಗಳಿದ್ದ, ಅವುಗಳನ್ನು ತಾಲೂಕು ಆಡಳಿತ ರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸುಮಾರು 200 ಮನೆಗಳು ಜಲಾವೃತವಾಗಿದ್ದು, ಜನರು ಮನೆಗಳಿಗೆ ಕೀಲಿ ಹಾಕಿಕೊಂಡು ಗ್ರಾಮ ತೊರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.