ಯಡ್ಡಳ್ಳಿಯಲ್ಲಿ ಪುನರುತ್ಥಾನ ಉತ್ಸವ
Team Udayavani, Apr 23, 2019, 5:22 PM IST
ಯಾದಗಿರಿ: ತಾಲೂಕಿನ ಯಡ್ಡಳ್ಳಿಯಲ್ಲಿ ರವಿವಾರ ಕ್ರೈಸ್ತ ಸಮುದಾಯದ ಜನರು ಯೇಸು ಕ್ರಿಸ್ತನ ಪುನರುಸ್ಥಾನ ಉತ್ಸವವನ್ನು ಶ್ರದ್ಧೆ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಿದರು.
ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಕಲ್ವಾರಿ ಬೆಟ್ಟದಲ್ಲಿ ಯೇಸು ಶಿಲುಬೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಈಸ್ಟರ್ ಸಂಡೆ ಪ್ರಯುಕ್ತ ಶ್ರಂಗರಿಸಿದ
ಎತ್ತಿನ ಬಂಡಿ ಮೇಲೆ ಯೇಸುಕ್ರಿಸ್ತನ ಭಾವಚಿತ್ರವಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮೇಥೋಡಿಸ್ಟ್ ಚರ್ಚ್‌ಗೆ ತಲುಪಿತು. ಬಳಿಕ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಯೇಸು ಕ್ರಿಸ್ತನು ಲೋಕದ ಜನರ ಪಾಪಗಳ ನಿವಾರಣೆಗಾಗಿ ಶಿಲುಬೆ ಮೇಲೆ ಘೋರ ಮರಣವನ್ನಪ್ಪಿ ಮೂರನೇ ದಿನದಲ್ಲಿ ಎದ್ದು ಬಂದ ಈ ದಿನವನ್ನು ಕ್ರೈಸ್ತರು ಪುನರುತ್ಥಾನ ದಿನ ಎಂದು ಆಚರಣೆ ಮಾಡುವುದು ಸಂಪ್ರದಾಯ. ಮೆರವಣಿಗೆ ಉದಕ್ಕೂ ಗ್ರಾಮದ ಮಕ್ಕಳು, ಯುವಕರ ಲೇಜಿಮ್, ಕೋಲಾಟ ಹಾಗೂ ಭಜನೆ ಸಾರ್ವಜನಿಕರ ಗಮನ ಸೆಳೆಯಿತು.
ಪಾಸ್ಟರ್ ರೆ| ಜೈವಂತ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜ್ಞಾನಮಿತ್ರ ಆಶನಾಳ, ಶಿರೋಮಣಿ ಕಿಲ್ಲನಕೇರಿ, ಶ್ಯಾಮಸುಂದರ್ ಮಾಸ್ಟರ್ ದಂಡಿನ, ಜ್ಞಾನಮಿತ್ರ ನರಸಣೋರ, ವಿಕ್ಟರ್ ರಾಜು, ಜೈವಂತ ದಂಡಿನ, ರಾಜಪ್ಪ ಆರಬೋಳ, ರವಿರಂಗಣೋರ, ಚಾರ್ಲಿ ಆಶನಾಳ, ಶ್ಯಾಮಸುಂದರ್ ದಂಡಿನ, ಆನಂದಪ್ಪ ಮಿಲಿó ರಗಣೋರ, ಪ್ರಭು ದಂಡಿನ, ರವಿ ನರಸಣ್ಣ, ಯಜ್ಕೇಲ್ ಕಿಲ್ಲನಕೆರಿ, ಸಾಲುಮನ ಯಡ್ಡಳ್ಳಿ ಗ್ರಾಪಂ ಸದಸ್ಯರಾದ ಮುನಿಂದ್ರ ದಂಡಿನ, ಕಮಲ್ಲಮ್ಮ ಯಂಕನೋರ ಸೇರದಂತೆ ನೂರಾರು ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.