ರಸ್ತೆ ಅತಿಕ್ರಮಣ; ತೆರವು ಕಾರ್ಯ ಪರಿಶೀಲಿಸಿದ ಡಿಸಿ
Team Udayavani, Jan 10, 2022, 6:02 PM IST
ಶಹಾಪುರ: ನಗರದ ಮುಖ್ಯ ರಸ್ತೆಗಳ ಪಕ್ಕದ ಚರಂಡಿಗಳ ಮೇಲೆ ತಳ್ಳುಗಾಡಿ ಮೂಲಕ ವ್ಯಾಪಾರ ಸೇರಿದಂತೆ ಅಂಗಡಿ-ಮುಂಗಟ್ಟುಗಳ ಶೆಡ್ ಹಾಕಿ ವ್ಯಾಪಾರ-ವಹಿವಾಟು ನಡೆಸುತ್ತಿರುವುದು ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನು ಪರಿಗಣಿಸಿ ನಗರಸಭೆ ಶುಕ್ರವಾರ, ಶನಿವಾರ ತೆರವು ಕಾರ್ಯಾಚರಣೆ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ರವಿವಾರ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ನಗರಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಪರಿಶೀಲಿಸಿದರು. ನಗರದ ಹಳೇ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ, ಮೋಚಿಗಡ್ಡೆ, ಹಳೇ ಮಾರ್ಕೆಟ್‌ನಲ್ಲಿ ಚರಂಡಿ ಮೇಲೆ ಮತ್ತು ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ- ವಹಿವಾಟು ನಡೆಸುತ್ತಿರುವುದನ್ನು ತೆರವುಗೊಳಿಸಲಾಗಿದೆ.
ಇದರಿಂದ ಚರಂಡಿ ಹೂಳೆತ್ತಲು ಮತ್ತು ಜನ-ವಾಹನ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ಪೌರಾಯುಕ್ತ ಓಂಕಾರ ಪೂಜಾರಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ನಿತ್ಯದ ಬದುಕು ಸಾಗಿಸಲು ತೊಂದರೆಯಾಗುತ್ತಿದ್ದು, ಅವರಿಗೂ ಶಾಶ್ವತ ಪರಿಹಾರ ಕಲ್ಪಿಸಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು.
ದಿನ ಕಳೆದಂತೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ರಸ್ತೆಯನ್ನೇ ಆಕ್ರಮಿಸಿ, ವ್ಯಾಪಾರ-ವಹಿವಾಟು ನಡೆದಿದ್ದು, ಇದರಿಂದ ಅನೇಕ ಸಮಸ್ಯೆ ಉಂಟಾಗುತ್ತಿವೆ. ಸದ್ಯ ನಗರಸಭೆ ಕೈಗೊಂಡ ಕಾರ್ಯಕ್ಕೆ ಸರ್ವರೂ ಸಹಕಾರ ನೀಡಬೇಕು. ಜೊತೆಗೆ ಬೀದಿ ಬದಿ ವ್ಯಾಪರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. -ಭಾಸ್ಕರರಾವ್ ಮೂಡಬೂಳ, ಹಿರಿಯ ನ್ಯಾಯವಾದಿ, ಶಹಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.