48.59 ಲಕ್ಷ ರೂ. ಉಳಿತಾಯ ಬಜೆಟ್
Team Udayavani, Feb 23, 2018, 5:37 PM IST
ಯಾದಗಿರಿ: ನಗರಸಭೆ ಸಭಾಂಗಣದಲ್ಲಿ ಗುರುವಾರ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ಆಯವ್ಯಯ (ಬಜೆಟ್) ಮಂಡನೆ ಸಭೆಯಲ್ಲಿ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು 48.59 ಲಕ್ಷ ರೂ., ಉಳಿತಾಯ ಬಜೆಟ್ ಮಂಡಿಸಿದರು. ಆಯವ್ಯಯವನ್ನು ನಗರಸಭೆ ನಿಧಿ ಮತ್ತು ಸರಕಾರದ ಅನುದಾನಗಳೆಂದು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ.
2018-19ನೇ ಸಾಲಿನಲ್ಲಿ ನಗರಸಭೆ ನಿಧಿಯಲ್ಲಿ 484 ಲಕ್ಷ ರೂ., ಆದಾಯ ನಿರೀಕ್ಷಿಸಲಾಗಿದ್ದು, 435 ಲಕ್ಷ ರೂ., ಗಳು ಖರ್ಚಿಗೆ ಅಂದಾಜಿಸಲಾಗಿದೆ. ಸರಕಾರದಿಂದ 1,810 ಲಕ್ಷ ರೂ., ನಿರೀಕ್ಷಿಸಲಾಗಿದ್ದು, 1,810 ಲಕ್ಷ ರೂ., ಖರ್ಚು ಮಾಡಲು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ ನಿಧಿ ಹಾಗೂ ಸರಕಾರದಿಂದ ಒಟ್ಟು 2,295 ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು, 22,456 ಲಕ್ಷ ರೂ., ಖರ್ಚು ಮಾಡಲು ನಿರ್ಧರಿಸಲಾಗಿದ್ದು, ಒಟ್ಟು 48.59 ಲಕ್ಷಗಳ ರೂ., ಉಳಿತಾಯದ ಆಯವ್ಯಯ ಮಂಡಿಸಲಾಗಿದೆ. ಹಿಂದಿನ ಸಾಲಿನ ನಗದು ಹಾಗೂ ಬ್ಯಾಂಕ್ ಶಿಲ್ಕುಗಳು ರೂ. 2,421 ಲಕ್ಷಗಳಾಗಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 4,716 ಲಕ್ಷ ರೂ., ಆಯವ್ಯಯದ ಮೊತ್ತವಾಗಿದೆ ಎಂದರು.
2017-18ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ 1,022 ಲಕ್ಷ ರೂ., ಆದಾಯ ಬಂದಿದ್ದು, 766 ಲಕ್ಷ ರೂ. ಖರ್ಚು ಮಾಡಿ
ಶೇ.75% ರಷ್ಟು ಗುರಿ ಸಾಧಿಸಲಾಗಿದೆ. ಈ ಆಯವ್ಯಯದಲ್ಲಿ ಜನಸಾಮಾನ್ಯರ ಮತ್ತು ನಗರ ಸಭೆ ಸದಸ್ಯರುಗಳ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಹಿಂದಿನ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಈ ವರ್ಷದ ಹಲವಾರು ಹೊಸ ಕಾರ್ಯಕ್ರಮ ರೂಪಿಸಲು ಯೋಚಿಸಲಾಗಿದೆ ಎಂದರು.
ಲಕ್ಷ್ಮೀನಗರ ಹಾಗೂ ಗಂಜ್ ಏರಿಯಾದರಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಐದು ಶುದ್ಧ ಕುಡಿಯುವ ನೀರಿನ ಘಟಕ, 5 ನೀರಿನ ಅರವಟ್ಟಿಗೆಗಳು, ಖಾಸಗಿಯವರ ಸಹಭಾಗಿತ್ವದಲ್ಲಿ 5 ಸಾರ್ವಜನಿಕರ ಶೌಚಾಲಯ ನಿರ್ಮಾಣ. ಸ್ವತ್ಛತೆಗೆ ಪೂರಕವಾಗಿ 2 ಟಿಪ್ಪರ್, 2 ಸಕ್ಕಿಂಗ್ ಮಷಿನ್ ಖರೀದಿಸುವುವದು. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ್ಕಕಾಗಿ ಫೀ ಮತ್ತು ಪುಸ್ತಕಗಳಿಗೆ ಧನ ಸಹಾಯ ನೀಡುವುದು. ಪೌರಕಾರ್ಮಿಕರಿಗಾಗಿ ನಿಧಿ ಸ್ಥಾಪನೆ, ಪ್ರಕೃತಿ ವಿಕೋಪದಿಂದ ಹಾಳಾಗಿರುವ ಆಸ್ತಿಗಳಿಗೆ ಧನ ಸಹಾಯ ನೀಡುವುದು. ಉದ್ಯಾನವನ ನಿರ್ವಹಣೆಗೆ ಕ್ರಮ ವಹಿಸುವದು. ಪೌರ ಕಾರ್ಮಿಕರ ನೇಮಕ. ಬೀದಿ ದನಗಳ ನಿಯಂತ್ರಣಕ್ಕೆ ತಂಡ ರಚನೆ, ವಾಸ್ತು ಶಿಲ್ಪ ಮತ್ತು ಪಕ್ಷಿ ಸಂಗ್ರಹಾಲಯಕ್ಕೆ ಅವಕಾಶ ಮಾಡಿಕೊಡುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ
ಪಂಗಡ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಜನಾಂಗದ ಅಭಿವೃದ್ಧಿಗೆ ಮತ್ತು ಅಂಗವಿಕಲರ ಅಭಿವೃದ್ಧಿಗೆ ಹಣ ನಿಗದಿಗೊಳಿಸಿರುವುದು ಈ ಆಯವ್ಯಯದ ಮುಖ್ಯ ಆಶಯಗಳಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಸರ್ವ ಸದಸ್ಯರು ಉಳಿತಾಯ ಬಜೆಟ್ ಮಂಡನೆಗೆ ಅನುಮೋದನೆ ನೀಡಿದರು. ನಗರದ ಬಹುತೇಕ ವಾರ್ಡ್‌ಗಳಲ್ಲಿ ಕೊಳವೆ ಬಾವಿ, ಸಾರ್ವಜನಿಕ ಶೌಚಾಲಯ ದುರಸ್ತಿ ಹಾಗೂ ಶೌಚಾ ಲಯ ನಿರ್ಮಾಣ ಕಾಮಗಾರಿಗೆ
ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ನಗರಸಭೆ ಸದಸ್ಯರು ನಗರಸಭೆ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಪೌರಾಯುಕ್ತ ಸಂಗಪ್ಪ ಉಪಾಸೆ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿ ಆಗುವುದರೊಳಗೆ ಎಲ್ಲ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಾಡಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್, ನಂ. 21ರಲ್ಲಿ ಕೊಳವೆ ಬಾವಿ ಮೂಲಕ ಟ್ಯಾಂಕ್‌ಗೆ ನೀರು ಸರಬರಾಜು ಕಾಮಗಾರಿಗೆ 10 ಲಕ್ಷ ರೂ., ಟೆಂಡರ್ ಆಗಿ ಒಂದು ವರ್ಷವಾಗಿದೆ. ಆದರೆ ಕೆಲಸ ಮಾತ್ರ ಆಗಿಲ್ಲ ಎಂದು ಸದಸ್ಯರು ಆರೋಪಿಸಿದಾಗ, ಪೌರಾಯುಕ್ತರು ಮಾತನಾಡಿ, ಕೂಡಲೇ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿ ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವುದಾಗಿ ಹೇಳಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ ಸೇರಿದಂತೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.