ಗ್ರಾಮೀಣ ರಂಗಭೂಮಿ ಕೊಡುಗೆ ಅಪಾರ

Team Udayavani, Oct 10, 2017, 4:51 PM IST

yad-2.jpg

ಶಹಾಪುರ: ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಗ್ರಾಮೀಣ ಜಾನಪದ ರಂಗಭೂಮಿ ಕೊಡುಗೆ ಅಪಾರವಾಗಿದೆ. ಪ್ರಸ್ತುತ ಆಧುನಿಕ ಸಂಕೀರ್ಣ ಸಾಮಾಜಿಕ ಸಂದರ್ಭದಲ್ಲಿ ರಂಗ ಕಲೆಗಳು ಇಂದಿಗೂ ಜೀವಂತವಾಗಿಡಲು ಗ್ರಾಮೀಣ ಸಮುದಾಯಗಳು ಶ್ರಮಿಸುತ್ತಿವೆ ಎಂದು ಕಲಬುರ್ಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ್‌ ಹೇಳಿದರು.

ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘ ಆಯೋಜಿಸಿದ್ದ ನಾಟಕೋತ್ಸವ ಮತ್ತು ನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೋರನಹಳ್ಳಿ ಗ್ರಾಮ ಪರಿಸರದಲ್ಲಿದ್ದುಕೊಂಡು ರಂಗಕಲೆ ಹಾಗೂ ಸಂಗೀತ ಮತ್ತು ಸಾಹಿತ್ಯ ಮುಂತಾದವುಗಳ ಬಗ್ಗೆ ಅಪಾರ ಕಳಕಳಿ ಹೊಂದಿರುವ ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘದ ಮೂಲಕ ರಂಗ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ರಾಘವೇಂದ್ರ ದೇಸಾಯಿ ಅವರ ಕಾರ್ಯ ಶ್ಲಾಘನೀಯವಾದದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ರಂಗ ಚಟುವಟಿಕೆಗಳನ್ನು ಆಯೋಜಿಸಲು ಕಲಬುರ್ಗಿ ರಂಗಾಯಣದಿಂದ ಸರ್ವ ರೀತಿಯಿಂದ ಪ್ರೊತ್ಸಾಹ, ಸಹಾಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. 

ಮಾಜಿ ಸಚಿವ ರಾಜ ಮದನಗೋಪಾಲ ನಾಯಕರಿಗೆ ಪುಷ್ಪಾ ಸರಸ್ವತಿ ಸಾಂಸ್ಕೃತಿಕ ಚೇತನ ಪ್ರಶಸ್ತಿ, ಸಂಯುಕ್ತ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ಶ್ರೀಕಾಂತಚಾರ್ಯ ಮಣ್ಣೂರವರಿಗೆ ಪುಷ್ಪಾ ಸರಸ್ವತಿ ಸಾಂಸ್ಕೃತಿಕ ಚೇತನ ಪ್ರಶಸ್ತಿ, ರಂಗಕರ್ಮಿ ಎಲ್‌.ಬಿ,ಕೆ ಆಲ್ದಾಳ ಅವರಿಗೆ ಪುಷ್ಪಾ ರಂಗ ಕಲಾರತ್ನ ಪ್ರಶಸ್ತಿ, ಡಾ| ಸುಜಾತ ಜಂಗಮಶೆಟ್ಟಿ ಅವರಿಗೆ ಪುಷ್ಪಾ ರಂಗ ಕಲಾರತ್ನ ಪ್ರಶಸ್ತಿ, ವಿಶ್ವವಾಣಿ ಪತ್ರಿಕೆ ಸ್ಥಾನಿಕ ಸಂಪಾದಕ ಮಹಿಪಾಲರೆಡ್ಡಿ ಮೂನ್ನೂರ ಅವರಿಗೆ ಪುಷ್ಪಾ ಸಾಮಾಜಿಕ ಸೇವಾ ರತ್ಮ ಪ್ರಶಸ್ತಿ, ಸಾಹಿತಿ ಡಿ.ಎನ್‌.
ಅಕ್ಕಿಯವರಿಗೆ ಪುಷ್ಪಾ ಸರಸ್ವತಿ ಸಾಹಿತ್ಯ ಚೇತನ ಪ್ರಶಸ್ತಿ, ಸಾಹಿತಿ ಚಂದ್ರಕಾಂತ ಕರದಳ್ಳಿಯವರಿಗೆ ಪುಷ್ಪಾ ಸಾಹಿತ್ಯ ಸರಸ್ವತಿ ಚೇತನ ಪ್ರಶಸ್ತಿ, ಬುದ್ದಘೋಷ್‌ ದೇವಿಂದ್ರ ಹೆಗಡೆಯವರಿಗೆ ಪುಷ್ಪಾ ಸರಸ್ವತಿ ಸಾಂಸ್ಕೃತಿಕ ಚೇತನ ಪ್ರಶಸ್ತಿ, ಹಿರಿಯ ನಾಟಕ ನಿರ್ದೇಶಕ ಅಂಬ್ಲಿಪ್ಪ ಕಲ್ಲೂರ ಅವರಿಗೆ ಪುಷ್ಪಾ ರಂಗ ಕಲಾರತ್ನ ಪ್ರಶಸ್ತಿ, ಸಾಮಾಜಿಕ ಕಾರ್ಯಕರ್ತ ಜಿ. ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಪುಷ್ಪಾ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ, ಚಿತ್ರ ಕಲಾವಿದ ರುದ್ರಪ್ಪ ಎಸ್‌. ತಳವಾರ ಅವರಿಗೆ ಪುಷ್ಪಾ ಸರಸ್ವತಿ ಕಲಾ ಚೇತನ ಪ್ರಶಸ್ತಿ, ಪರಿಸರವಾದಿ ಶಿವಬಸಪ್ಪ ಸಗರ ಅವರಿಗೆ ಪುಷ್ಪಾ ಪರಿಸರ ಸ್ಫೂರ್ತಿ ಪ್ರಶಸ್ತಿ, ಯುವ ಕವಿ ವಿಶಾಲ ಸಿಂಧೆ ಅವರಿಗೆ ಪುಷ್ಪಾ ಯುವ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ದೋರನಹಳ್ಳಿಯ ಶಿವಮಾನಪ್ಪ ಎ. ನಿಲಾಂಕರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಮಾನಂದ ಅವಧೂತರು, ಮಾಜಿ ಸಚಿವ ವೀರಬಸಂತರೆಡ್ಡಿ ಮುದ್ನಾಳ, ಜಿಪಂ ಸದಸ್ಯ ವಿನೋದಗೌಡ ಮಾಲಿ ಪಾಟೀಲ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಡಾ| ಭೀಮಣ್ಣ ಮೇಟಿ, ಸ್ವತ್ಛ ಭಾರತ ಅಭಿಯಾನ ವ್ಯವಸ್ಥಾಪಕ ವಿಠ್ಠಲ್‌ ಭಟ್‌ ಜೋಷಿ, ಪಿಡಿಒ ಗೋವಿಂದ ರಾಠೊಡ, ನಿಜಗುಣ ದೋರನಹಳ್ಳಿ, ಮುಖ್ಯಗುರು ಎಂ.ಎಸ್‌. ಪಾಟೀಲ್‌, ನಾಗಪ್ಪ ಕಣೆಕಲ್‌, ನಾಟಕ ಸ್ಪರ್ಧೆಗಳ ನಿರ್ಣಾಯಕರಾದ ಶಿವಶರಣಪ್ಪ ಕಮರವಾಡಿ, ಶಿವಣ್ಣ ಇಟ್ಟಿನ್‌ ಚಿತ್ತಾಪುರ ಮುಂತಾದವರು ಉಪಸ್ಥಿತರಿದ್ದರು. ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘದ ಅಧ್ಯಕ್ಷ ರವಿ ಬಿ. ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಚಂದ್ರಕಲಾ ಗೂಗಲ್‌, ಮಹೇಶ ಪತ್ತಾರ ನಿರೂಪಿಸಿದರು. ಬಸನಗೌಡ ಹೇರುಂಡಿ ಸ್ವಾಗತಿಸಿದರು.

ಆನಂದ ತೀರ್ಥಚಾರ್ಯ ಜೋಷಿ ಪ್ರಾಸ್ತಾವಿಕ ಮಾತನಾಡಿದರು. ಸಾಹೇಬರೆಡ್ಡಿ ವಡಿಗೇರಾ ಪರಿಚಯಿಸಿದರು. ಭಾಗೀರತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿ.ಬಿ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 5001 ರೂ.ನಗದು, ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು. ಸಮಾರಂಭದಲ್ಲಿ ಎಸ್‌.ವಿ.ಎನ್‌ ಡ್ಯಾನ್ಸ್‌ ಅಕಾಡೆಮಿ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ನಿಂಗರಾಜ ಅವರಿಂದ ಭರತ ನಾಟ್ಯ, ಶ್ರೀನಿವಾಸ ಅವರಿಂದ ಏಕಪಾತ್ರ ಅಭಿನಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಟಾಪ್ ನ್ಯೂಸ್

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ

Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ

ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ

Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.