ಸಮಾಜಕ್ಕೆ ಸಜ್ಜನ್ ಕೊಡುಗೆ ಅಪಾರ
Team Udayavani, Jan 8, 2018, 4:30 PM IST
ಸುರಪುರ: ಮನುಷ್ಯ ಸ್ವಂತಕ್ಕಾಗಿ ಬದುಕದೆ ಪರಹಿತಕ್ಕಾಗಿ ಸಮಾಜದ ಒಳಿತಿಗಾಗಿ ಶ್ರಮಿಸುವುದು ಶ್ರೇಯಸ್ಕರವಾದ್ದು, ಈ ನಿಟ್ಟಿನಲ್ಲಿ ತನಗಾಗಿ ಬದುಕದೆ ಸಮಾಜದ ಏಳ್ಗೆಗಾಗಿ ಶ್ರಮಿಸಿದ ಕೀರ್ತಿ ಸುರೇಶ ಸಜ್ಜನ್ ಅವರಿಗೆ ಸಲ್ಲುತ್ತದೆ ಎಂದು ಎಂದು ದೇವಾಪುರದ ಜಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಸುರೇಶ ಸಜ್ಜನ್ ಅವರಿಗೆ ತಾಲೂಕು ವೀರಶೈವ ಸಮಿತಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ತಾಲೂಕಿನಲ್ಲಿ ಸಮಾಜ ಬಾಂಧವರು ಸಾಕಷ್ಟು ಸ್ಥಿತಿವಂತರಿದ್ದರು. ಆದರೆ ಸಮಾಜವನ್ನು ಮುನ್ನಡೆಸಿಕೊಂಡು ಹೋಗಲು ಯಾರು ಮುಂದೆ ಬರಲಿಲ್ಲ. ಆರ್ಥಿಕವಾಗಿ ಸಮಿತಿಯ ಸ್ಥಿತಿ ಗತಿ ಸದೃಢವಾಗಿರಲಿಲ್ಲ. ಕಲ್ಯಾಣ ಮಂಟಪ ಕಾಮಗಾರಿ ನೆಲಬಿಟ್ಟು ಮೇಲೆದ್ದಿರಲಿಲ್ಲ.ಇಂತಹ ಸಂದಿಗ್ಧತೆಯಲ್ಲಿ
ಸುರೇಶ ಅಜ್ಜನ್ ಸಮಾಜಕ್ಕೆ ಆಪತ್ ಬಾಂದವನಾಗಿ ಬಂದು ನನ್ನ ನೇತೃತ್ವದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.
ಕಲ್ಯಾಣ ಮಂಟಪ ನಿರ್ಮಾಣ ಉಚಿತ ಪ್ರಸಾದ ನಿಲಯದ ಪುನಃಶ್ಚೇತನ, ಹುಣಸಗಿ, ಕೆಂಭಾವಿ, ಕಕ್ಕೆರಾಗಳಲ್ಲಿ ಬಸವೇಶ್ವರ ಪತ್ತಿನ ಸಹಕಾರಿ ಬ್ಯಾಂಕ್‌ಗಳ ಸ್ಥಾಪನೆ, ಬಸವೇಶ್ವರ ಶಿಕ್ಷಣ ಸಂಸ್ಥೆ, ಐಟಿಐ ಕಾಲೇಜು ಸ್ಥಾಪನೆ ಸೆರಿದಂತೆ ಸಮಾಜವನ್ನು ಅಭಿವೃದ್ಧಿಪತದತ್ತ ಕೊಂಡೊಯುವಲ್ಲಿ ಸಜ್ಜನ್ ಅವರ ಸೇವೆ ಮತ್ತು ಪಾತ್ರ ಪ್ರಶಂಸನಿಯವಾಗಿದೆ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಡಾ| ಸುರೇಶ ಸಜ್ಜನ್ ಮಾತನಾಡಿ, ಅಧ್ಯಕ್ಷನಾಗಿ ನಾನೇನೆ ತೀರ್ಮಾನ ತೆಗೆದುಕೊಂಡರು ಸಮಾಜ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆಯ ಹಿಂದೆ ಸಮಿತಿ ಮತ್ತು ಸಮಾಜದ ಸಹಕಾರ ಸ್ಮರಣೀವಾಗಿದೆ. ನಾನು ನೆಪ ಮಾತ್ರ ಇದಕ್ಕೆಲ್ಲ ಸಮಾಜವೇ ಕಾರಣ. ಹೀಗಾಗಿ ನಾನು ಸಮಾಜಕ್ಕೆ ಋಣಿಯಾಗಿದ್ದು, ನನ್ನ ತಾಯಿ ಮತ್ತು ಹೆಂಡತಿ ಸಹಕಾರ ಕೂಡ ಮರೆಯುವಂತ್ತಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ನನ್ನ ತಂದೆ ರಾಜಶೇಖರಪ್ಪ ಸ್ಮರಣಾರ್ಥವಾಗಿ ಸಮಿತಿಯಿಂದ ನರ್ಸಿಂಗ್, ಮತ್ತು ಎಂಜಿನಿಯರಿಂಗ್ ಕಾಲೆಜು ಆರಂಭಿಸುವುದು ನನ್ನ ಸಂಕಲ್ಪವಾಗಿದೆ. ಇದಕ್ಕಾಗಿ 10 ಲಕ್ಷ ದೇಣಿಗೆ ನೀಡುತ್ತೇನೆ. ಇದಕ್ಕೆ ತಾಲೂಕಿನ ಸಮಾಜ ಬಾಂಧವರು ಸಹಕಾರ ನೀಡಬೇಕು ಎಂದು ಕೋರಿದರು.
ಸಮಾಜದ ಗೌರವಾಧ್ಯಕ್ಷ ಬಸಲಿಂಪ್ಪ ಪಾಟಿಲ ಅಧ್ಯಕ್ಷತೆ ವಹಿಸಿದ್ದರು. ಬಸಣ್ಣ ಸಾಹು ಬೂದೂರ, ಹೆಚ್.ಸಿ. ಪಾಟೀಲ, ಅಪ್ಪಾಸಾಹೇಬ ಪಾಟಿಲ ಮಾತನಾಡಿದರು.
ಕಡ್ಲೆಪ್ಪನವರ ಮಠದ ಪ್ರಭುಲಿಂಗಸ್ವಾಮೀಜಿ, ರುಕ್ಮಾಪುರದ ಗುರುಶಾಂತಮೂರ್ತಿ ಶಿವಾಚಾರ್ಯ, ಲಕ್ಷ್ಮೀಪುರ ಶ್ರೀಗಿರಿಮಠದ ಬಸವಲಿಂಗ ದೇವರು, ಮುದ್ದೂರ ಕಂಠಿ ಮಠದ ಮಲ್ಲಿಕಾರ್ಜುನ ದೇವರು, ಕಡಕೋಳಮಠದ ಬಸಣ್ಣ ಶರಣರು, ಬಾಲಯ್ಯ ಶರಣರು ಸಾನಿಧ್ಯ ವಹಿಸಿದ್ದರು. ವಿವಿಧ ಗ್ರಾಮಗಳ ಸಮಾಜ ಬಾಂಧವರು ನೌಕರರು, ಸಜ್ಜನ್ ಅಭಿಮಾನಿಗಳು ಹೆಚ್ಚಿನ ಸನ್ಮಾನಿಸಿ ಶುಭಾಶಯ ಕೋರಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.