ನಾಟಕ ಕಲೆ ಉಳಿಸಿ-ಬೆಳೆಸಿ: ಶಂಕರಗೌಡ
Team Udayavani, Mar 10, 2022, 2:50 PM IST
ಯಾದಗಿರಿ: ಇತ್ತೀಚಿನ ದಿನಮಾನಗಳಲ್ಲಿ ನಾಟಕಗಳು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಾಟಕ ಕಲೆ ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಹೇಳಿದರು.
ಅಬ್ಬೆತುಮಕೂರಿನಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಿನೆಮಾ, ಧಾರವಾಹಿಗಳ ಭರಾಟೆಯಲ್ಲಿ ನಾಟಕಗಳು ಅಳಿವಿನ ಅಂಚಿನಲ್ಲಿವೆ. ಇದು ಜೀವಂತ ಕಲೆಯಾಗಿದ್ದು, ಅದನ್ನು ಪೋಷಿಸಿಕೊಂಡು ಬಂದರೆ ಕಲಾವಿದರ ಬದುಕಿಗೆ ಆಸರೆಯಾಗಿ ನಿಂತಂತಾಗುತ್ತದೆ ಎಂದು ಹೇಳಿದರು.
ಡಾ| ವೀರೇಶ ಜಾಕಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿ ಇಡಿ ಜಗತ್ತನ್ನು ತಲ್ಲಣಗೊಳಿಸಿತು. ಮೊದಲ ಮತ್ತು ಎರಡನೇ ಅಲೆಯಲ್ಲಿ ಅನೇಕ ಜನರು ಜೀವವನ್ನು ಕಳೆದುಕೊಂಡರು. ವಿಶ್ವಾರಾಧ್ಯರ ಕೃಪೆಯಿಂದ ಮೂರನೇ ಅಲೆಯಲ್ಲಿ ಯಾವುದೇ ಹಾನಿಯಾಗದಿರುವುದು ಒಳ್ಳೆಯ ಲಕ್ಷಣವೆಂದು ಹೇಳಿದರು.
ಪೀಠಾಧಿಪತಿಗಳಾದ ಡಾ| ಗಂಗಾಧರ ಸ್ವಾಮಿಗಳು ಮಾತನಾಡಿ, ನಾಟಕಗಳು ಜನತೆಗೆ ಉತ್ತಮ ಸಂದೇಶವನ್ನು ನೀಡಬಲ್ಲ ಪ್ರಬಲ ಮಾಧ್ಯಮವಾಗಿದೆ. ಅದರಲ್ಲಿಯೂ ಪೌರಾಣಿಕ ನಾಟಕಗಳು ಜನತೆಗೆ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತದೆ ಎಂದರು.
ಹಿರಿಯ ನ್ಯಾಯವಾದಿಗಳಾದ ಎಸ್.ಬಿ. ಪಾಟೀಲ, ಗಂಗಾಧರ ಆವಂಟಿ, ನೋಟರಿ ಎಸ್.ಬಿ.ನಾಯಕ, ವೈದ್ಯರಾದ ಡಾ| ಸಿ.ಎಂ. ಪಾಟೀಲ, ಡಾ| ಮಹಾದೇವರೆಡ್ಡಿ ಗೌಡರೆಡ್ಡಿ ಬಿಳ್ಹಾರ, ಡಾ| ಸುಭಾಶ್ಚಂದ್ರ ಕೌಲಗಿ ಇತರರಿದ್ದರು. ಸದ್ಗುರು ಸಮರ್ಥ ಪರಮಾನಂದ ಶಿವಯೋಗಿಗಳ ಮಹಾತ್ಮೆ ನಾಟಕ ಜನಮನ ಸೂರೆಗೊಂಡಿತು.
ಪ್ರತಿಯೊಬ್ಬರೂ ಬದುಕಿನಲ್ಲಿ ಸದಾಚಾರ ಸಂಪನ್ನರಾಗಿ ಬಾಳಬೇಕು. ಯಾವುದೇ ರಾಗ ದ್ವೇಷಗಳಿಗೆ ಈಡಾದರೆ ಬಾಳು ಹಸನಾಗುವುದಿಲ್ಲ. ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ಒಳ್ಳೆಯ ಆಚಾರಗಳನ್ನು ಅನುಸರಿಸಬೇಕು. ಒಳ್ಳೆಯ ವಿಚಾರಗಳನ್ನು ಅರಿತು ಆಚರಿಸಿದಾಗ ಬಾಳು ಹಸನಾಗುತ್ತದೆ. -ಡಾ| ಗಂಗಾಧರ ಸ್ವಾಮೀಜಿ, ಪೀಠಾಧಿಪತಿ ಶ್ರೀ ವಿಶ್ವರಾಧ್ಯಮಠ ಅಬ್ಬೆತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.