ದೇಶಿ ಕ್ರೀಡೆ ಉಳಿಸಿ-ಬೆಳೆಸಿ
Team Udayavani, Feb 2, 2019, 11:32 AM IST
ಶಹಾಪುರ: ತಾಲೂಕಿನ ಕಾಡಂಗೇರಾ (ಬಿ) ಗ್ರಾಮದಲ್ಲಿ ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಗ್ರಾಪಂ ಸದಸ್ಯ ಹಣಮಂತ ಉಲಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಜಾಗೃತವಾಗಲಿದೆ. ಶರಣರ ಹೆಸರಲ್ಲಿ ದೇಶಿ ಕ್ರೀಡೆ ಕಬಡ್ಡಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ. ದೇಶಿ ಕ್ರೀಡೆ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅವುಗಳಿಗೆ ಮಹತ್ವ ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಶರಣ ಮಡಿವಾಳ ಮಾಚಿದೇವರು ಸಮಾಜ ಸುಧಾರಕರು. ವಚನ ಭಂಡಾರ ರಕ್ಷಿಸಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ. ಅಂದು ಅವರು ವಚನಗಳನ್ನು ರಕ್ಷಿಸದಿದ್ದರೆ, ಇಂದು ಬಸವಣ್ಣ, ಅಕ್ಕ ಮಹಾದೇವಿ ಯಾರೊಬ್ಬರ ಶರಣರ ಹೆಸರು ಕಂಡು ಬರುತ್ತಿರಲಿಲ್ಲ. ಅವರ ಸೇವೆ ಅಮೋಘ ಎಂದರು.
ಬಸವಾದಿ ಶರಣರ ಬಟ್ಟೆ ತೊಳೆಯುವ ಕಾಯಕ ಮಾಡಿದ ಮಾಚಿದೇವ ಪರಶಿವನ ಅನುಗ್ರಹದಿಂದ ಜನಿಸಿದ ವೀರಭದ್ರ ಇನ್ನೊಂದು ರೂಪವಾಗಿದ್ದಾನೆ. ಅಲ್ಲದೇ ಬದುಕಿನಲ್ಲಿ ಶರಣರ ವಿಚಾರಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದೇವಿಂದ್ರಪ್ಪ ಬಂಗಾರಿ, ಸಿದ್ದಪ್ಪ ದುಗನೂರು, ಸಿದ್ದಪ್ಪ ಸುಕಲಿ, ಹುಚ್ಚಪ್ಪ ಗಳ್ಳೆನೋರ, ಸಿದ್ದಯ್ಯ ಕಾವಲಿ, ಸಿದ್ರಾಮ ಗೋಡಿಹಾಳ, ಶಿವರಾಜ ಗೋಡಿಹಾಳ, ರಂಗಯ್ಯ ಗೋಡಿಹಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.