ದೇಶದ ಸಂಸ್ಕೃತಿ ಉಳಿಸಿ-ಬೆಳೆಸಿ

Team Udayavani, Feb 21, 2019, 12:07 PM IST

yad-1.jpg

ಯಾದಗಿರಿ: ನಮ್ಮ ದೇಶದ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಅಳವಡಿಸಿಕೊಂಡು ಉಳಿಸಿ, ಬೆಳೆಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು. 

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನ ಮೇಳದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಕುಳಗೇರಿ ಮಾತನಾಡಿ, ಯುವಜನ ಮೇಳಗಳಲ್ಲಿ ಸಾಂಪ್ರದಾಯಿಕ ಕಲೆ, ಭಾರತೀಯ ಸಂಸ್ಕೃತಿ ಅನಾವರಣವಾಗಲಿದೆ. ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದವರನ್ನು ಬೀದರ್‌ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಪ್ರಕಾಶ ಅಂಗಡಿ ಅವರ ಸಗರನಾಡು ಯುವಕ ಸಂಘಕ್ಕೆ ಉತ್ತಮ ಯುವ ಸಂಘಟನೆ ಪ್ರಶಸ್ತಿ ಹಾಗೂ ಆನಂದ ರಾಠೊಡ ಅವರಿಗೆ ಜಿಲ್ಲಾ ಉತ್ತಮ ಯುವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 

ಜಿಲ್ಲೆಯ ಜನಪದ ನೃತ್ಯ, ಕೋಲಾಟ, ಡೊಳ್ಳು ಕುಣಿತ, ಬಯಲಾಟ, ಭಜನೆ ಪದ, ಹಾಗೂ ಇನ್ನಿತರ ಕಲಾ ತಂಡಗಳು ಯುವಜನ ಮೇಳದಲ್ಲಿ ಭಾಗವಹಿಸಿದ್ದವು. ಸೂಗಪ್ಪ ಪಾಟೀಲ, ಪ್ರಕಾಶ ಅಂಗಡಿ, ಉಪನ್ಯಾಸಕ ರುದ್ರಗೌಡ ಉಪಸ್ಥಿತರಿದ್ದರು. ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿದರು.

ಟಾಪ್ ನ್ಯೂಸ್

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YDR-Assult

Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು

Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ

Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ

Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ

Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.