ಬದಲಾವಣೆ ಬಯಸುತ್ತಿದ್ದಾರೆ ಯಾದಗಿರಿ ಜನ: ಬೀರನಕಲ್
Team Udayavani, Nov 15, 2021, 4:54 PM IST
ಯಾದಗಿರಿ: ಯಾದಗಿರಿ ಮತಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಅಭಿವೃದ್ಧಿ ಬಯಸಿ ಜನರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಹೇಳಿದರು.
ಟಿ. ವಡಗೇರಾ ಗ್ರಾಮದಲ್ಲಿ ಜೆಡಿಎಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಜನರು ಬೇಸತ್ತಿದ್ದು, ಪ್ರತಿಯೊಂದು ಹಳ್ಳಿಯಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದರು. ದಿನನಿತ್ಯ ತೈಲ ಬೆಲೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಒಂದಾದ ಮೇಲೋಂದು ಹಗರಣಗಳು ಮತ್ತು ಜನಸಾಮಾನ್ಯರು ಕಷ್ಟ ಅನುಭವಿಸುವ ಕಾಯ್ದೆಗಳನ್ನು ಜಾರಿಗೆ ತರುತ್ತಾ ರಾಜ್ಯದಲ್ಲಿ ಬಿಜೆಪಿ ಜನರನ್ನು ಹೈರಾಣಾಗಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು ಕೇವಲ ಕಾಟಾಚಾರಕ್ಕಾಗಿ ಹಗರಣಗಳ ಕುರಿತು ಮಾತನಾಡುತ್ತಾ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಇಲ್ಲಿಯವರೆಗೆ ಬಂದಿರುವ ಯಾವ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಯದೇ ಸರ್ಕಾರಗಳು ಜನರಿಗೆ ಕಣ್ಣೊರೆಸುವ ಕೆಲಸ ಮಾಡುತ್ತಿದ್ದರೂ ಯಾವೊಬ್ಬರು ಪ್ರಶ್ನಿಸುತ್ತಿಲ್ಲವೆಂದು ಹೇಳಿದರು.
ಈ ಸಂದರ್ಭದಲ್ಲಿ ಧರ್ಮಣ್ಣ ಟಿ. ವಡಗೇರಾ, ಮಲ್ಲಣ್ಣ ಟಿ. ವಡಗೇರಾ, ನಾಗಪ್ಪ, ಮೌನೇಶ, ಪರಮಣ್ಣ ಪೂಜಾರಿ, ಮುದುಕಪ್ಪ ತಳ್ಳಳ್ಳಿ, ಭೀಮರಾಯ ಬೊಮ್ಮನಹಳ್ಳಿ, ಖಂಡಪ್ಪ ಪಟ್ಟೆದಾರ ಸೇರಿದಂತೆ ನೂರಾರು ಯುವಕರು ಜೆಡಿಎಸ್ ಪಕ್ಷ ಸೇರ್ಪಡೆಯಾದರು. ತಿಮ್ಮಯ್ಯ ಪುರ್ಲೆ, ಅಯ್ಯಣ್ಣ ಕನ್ಯಾಕೌಳೂರು, ನಾಗರತ್ನ ಮೂರ್ತಿ ಅನಪೂರ, ಡಾ| ಶಫೀ ತುನ್ನೂರು, ಮಲ್ಲಿಕಾರ್ಜುನಗೌಡ ಬೀರನಕಲ್, ರಫಿಕ್ ಪಟೇಲ್ ಉಳ್ಳೆಸೂಗೂರು, ಹಣಮಂತ್ರಾಯಗೌಡ ತೇಕರಾಳ, ರಾಜಕುಮಾರ ಸಾಹುಕಾರ ಖಾನಾಪುರ, ರಾಜಶೇಖರ ದೊರೆ ಅನವಾರ, ಚಾಂದಪಾಷ ಕುರಕುಂದಿ ಸೇರಿದಂತೆ ಇತರರಿದ್ದರು.
ಕಳೆದ ಹಲವು ದಶಕಗಳಿಂದ ಯಾದಗಿರಿಯಲ್ಲಿ ಅಭಿವೃದ್ಧಿನಿಂತ ನೀರಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಜನರು ಜೆಡಿಎಸ್‌ನತ್ತ ವಾಲುತ್ತಿದ್ದು, ಬದಲಾವಣೆ ಬಯಸಿ ನಿತ್ಯ ನಿರಂತರವಾಗಿ ಜನರು ಜೆಡಿಎಸ್ ಸೇರ್ಪಡೆಯಾಗುತ್ತಿರುವುದು ಖುಷಿಯ ಸಂಗತಿ. ಪಕ್ಷ ಸಂಘಟನೆಯಲ್ಲಿ ನಿತ್ಯವು ತೊಡಗಿಸಿಕೊಂಡು ಜಿಲ್ಲೆಯಲ್ಲಿ ಒಂದು ಅತಿದೊಡ್ಡ ಸಂಘಟನಾತ್ಮಕ ಪಕ್ಷವಾಗಿ ಜೆಡಿಎಸ್ ನಿರ್ಮಿಸುವಲ್ಲಿ ಕಾರ್ಯಕರ್ತರು ಕೂಡ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. -ಹನುಮೇಗೌಡ ಬೀರನಕಲ್, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.