![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 12, 2020, 5:48 PM IST
ಯಾದಗಿರಿ: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ ( 86) ಭಾನುವಾರ ನಿಧನ ಹೊಂದಿದರು.
ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಎ.ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಪುರದ ತಾಲೂಕು ಆಸ್ಪತ್ರೆಗೆ ಕರೆತರುವುದರೊಳಗೆ ಮರಣ ಹೊಂದಿದ್ದಾರೆ
ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ನೇಳನದ ಸರ್ವಾಧ್ಯಕ್ಷರಾಗಿದ್ದ ಕೃಷ್ಣ ಅವರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಷಟ್ಪದಿ, ರಗಳೆ, ಕಂದಪದ್ಯ, ಚಂಪೂ ಕಾವ್ಯ, ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.
ಎದೆಗಡಲ ಮುತ್ತುಗಳು, ಗೀತಾಂಜಲಿ, ಕರುಣ ಕಿರೀಟ, ಮಂತ್ರರಾಜ ಗಾಯತ್ರಿ, ಶ್ರೀಮಚ್ಚಂದ್ರಲಾಂಬ, ಅಣುಪುರಾಣ, ಮುಂತಾದ ಗ್ರಂಥಗಳನ್ನು ಎ.ಕೃಷ್ಣ ಸುರಪುರ ಅವರು ರಚಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.