ಶಹಾಪುರ: ಜ.15 ರಂದು ಜೋಡು ಪಲ್ಲಕ್ಕಿ ಉತ್ಸವ
ಭೀ.ಗುಡಿ ಬಲಭೀಮೇಶ್ವರ - ದಿಗ್ಗಿ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ
Team Udayavani, Jan 10, 2023, 2:55 PM IST
ಶಹಾಪುರ: ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಅಂಗವಾಗಿ ಸಗರನಾಡಿನ ಆರಾಧ್ಯ ದೇವರಾದ ಭೀಮರಾಯನ ಗುಡಿಯ ಬಲಭೀಮೇಶ್ವರ ಹಾಗೂ ದಿಗ್ಗಿಯ ಸಂಗಮೇಶ್ವರರ ಜೋಡು ಪಲ್ಲಕ್ಕಿಯು ಜನವರಿ 15 ರಂದು ಬೆಳಗ್ಗೆ 5.30 ಕ್ಕೆ ದಿಗ್ಗಿ ಅಗಸಿ ಮೂಲಕ ಎರಡು ಪಲ್ಲಕ್ಕಿಗಳು ಪುರ ಪ್ರವೇಶ ಮಾಡಲಿವೆ.
ನಗರದ ದಿಗ್ಗಿ ಅಗಸಿ, ಗಾಂಧಿ ಚೌಕ ಮಾರ್ಗವಾಗಿ ಮೋಚಿಗಡ್ಡಾ, ಬಸವೇಶ್ವರ ವೃತ್ತದ ಮೂಲಕ ಹಳಿಸಗರ ಮಾರ್ಗವಾಗಿ ಹುರಸಗುಂಡಗಿ ಗ್ರಾಮ ಸಮೀಪದ ಭೀಮಾ ನಂದಿಯಲಿ ಸಾಂಪ್ರದಾಯಿಕ ಗಂಗಾ ಸ್ನಾನ ನಡೆಯಲಿದೆ ಎಂದು ತಾಲೂಕಾಡಳಿತ ತಿಳಿಸಿದೆ.
ಅಲ್ಲದೆ ಅದೇ ದಿನ ರಾತ್ರಿ ಮತ್ತೆ ವಾಪಸ್ ನಗರ ಪ್ರವೇಶಿಸಿ ಸ್ಥಳೀಯ ಮಾರುತಿ ಮಂದಿರ ಕಟ್ಟೆಯಲ್ಲಿ ವಿಶ್ರಾಂತಿ ಪಡೆದು ಎಂದಿನ ಪದ್ಧತಿಯಂತೆ ಅಲ್ಲಿ ಭಕ್ತಾಧಿಗಳಿಂದ ಪೂಜೆ-ಪುನಸ್ಕಾರ ನಡೆದು, ಸಾವಿರಾರು ಭಕ್ತರಿಗೆ ದರ್ಶನ ನೀಡಿ ಅಲ್ಲಿಂದ ಪಾರಂಪರಿಕ ದೀವಟಿಗೆಗಳ ಸಾಲು, ವಿದ್ಯುತ್ ದೀಪಗಳ ಸಾಲಿನೊಂದಿಗೆ ಹಲಗೆ ಸೇರಿದಂತೆ ವಿವಿಧ ವಾದ್ಯಗಳ ನಿನಾದನೊಂದಿಗೆ ಭಕ್ತರ ಭಜನೆ, ಹರ್ಷದ್ಗೋರ, ಜೈಕಾರದೊಂದಿಗೆ ಮೆರವಣಿಗೆ ಹೊರಟು ಮರುದಿನ ಬೆಳಗಿನ ಜಾವ ಅಂದರೆ ಜ. 16 ರ ಬೆಳಗ್ಗೆ ದಿಗ್ಗಿ ಅಗಸಿ ಮೂಲಕ ಎರಡು ಪಲ್ಲಕ್ಕಿಗಳು ತಮ್ಮ ಮೂಲ ಸ್ಥಾನ ಆಯಾ ಮಂದಿರಗಳಿಗೆ ತೆರಳಲಿವೆ.
ಕಳೆದ ಬಾರಿ ಕೋವಿಡ್ ಹಿನ್ನೆಲೆ ಜೋಡು ಪಲ್ಲಕ್ಕಿ ಮೆರವಣಿಗೆ, ಜಾತ್ರೆ ನಡೆಯಲಿಲ್ಲ. ಹಾಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಎಂದಿನಂತೆ ಭಕ್ತರ ಸೇವೆಗೆ ತಾಲೂಕಾಡಳಿತ ಮತ್ತು ಆಯಾ ಮಂದಿರದ ಸೇವಾ ಮಂಡಳಿ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರರು ಹಾಗೂ ಭಕ್ತ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.