Yadagiri; ರಾಜ್ಯ ಸರ್ಕಾರದ ಜಾತಿಗಣತಿ ಅವೈಜ್ಞಾನಿಕ: ಜಯ ಮೃತ್ಯುಂಜಯ ಸ್ವಾಮೀಜಿ
Team Udayavani, Mar 1, 2024, 2:16 PM IST
ಯಾದಗಿರಿ: ಜಾತಿ-ಜಾತಿಗಳ ನಡುವೆ ಗೊಂದಲ ಮೂಡಿಸಿ, ಒಗ್ಗಟ್ಟನ್ನು ದುರ್ಬಲಗೊಳಿಸುವ ಹುನ್ನಾರ ರಾಜ್ಯ ಸರ್ಕಾರದ್ದಾಗಿದ್ದು, ಇದನ್ನು ಪಂಚಮಸಾಲಿಪೀಠ ಹಾಗೂ ವೈಯಕ್ತಿಕವಾಗಿ ನಾನು ಸಹ ವಿರೋಧಿಸುತ್ತೇನೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಅವೈಜ್ಞಾನಿಕ ಸಮೀಕ್ಷೆಯ ತಳಹದಿಯಲ್ಲಿ ವರದಿ ಸಲ್ಲಿಕೆ ಮಾಡಿರುವುದು ಸೂಕ್ತ ಅಲ್ಲ, ಈಗಿರುವ ಮುಖ್ಯಮಂತ್ರಿಗಳು ತಿಳಿದವರು, ಸಾಕಷ್ಟು ಜ್ಞಾನ ಉಳ್ಳವರಾಗಿದ್ದಾರೆ. ದಯವಿಟ್ಟು ಜಾತಿಗಣತಿ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಲಿಂಗಾಯತ ಸಮಾಜವನ್ನು ನಾಲ್ಕನೇ ಸ್ಥಾನದಲ್ಲಿರಿಸಿ, ಅವಮಾನ ಮಾಡುವ ಹುನ್ನಾರ ಯಾವ ಮಠಾಧೀಶರು ಸಹಿಸಿಕೊಳ್ಳುವುದಿಲ್ಲ, ಎಲ್ಲಾ ಜಾತಿ-ಜನಾಂಗದವರನ್ನು ಅಣ್ಣ ತಮ್ಮಂದಿರ ರೀತಿ ಕಂಡ ಸಮುದಾಯವನ್ನು ಈ ವರದಿ ಮೂಲಕ ಅವಮಾನಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2015 ರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ರೂಪದಲ್ಲಿ ರಾಜ್ಯ ಸರ್ಕಾರ ರಚಿಸಿದ ತಂಡವು ಜಾತಿ ಗಣತಿ ವರದಿ ನೀಡುವ ಮೂಲಕ ಸಮುದಾಯಗಳ ನಡುವೆ ವೈಷಮ್ಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಸಮೀಕ್ಷೆಯು, ಸಮೀಕ್ಷೆಯಾಗಿದ್ದರೆ ಅಷ್ಟೇ ಚಂದ, ಆದರೆ ಸಮೀಕ್ಷೆ ಜಾತಿ ಗಣತಿ ವರದಿಯಾಗಿ ಪರಿವರ್ತನೆಗೊಂಡು ಗೊಂದಲಕ್ಕೆ ಆಸ್ಪದ ಕೊಡಬಾರದು. ರಾಜ್ಯ ಸರ್ಕಾರದಲ್ಲಿರುವ ಏಳು ಮಂತ್ರಿಗಳು ಹಾಗೂ ಶಾಸಕರು ಧ್ವನಿ ಎತ್ತು ಸಮಾಜಕ್ಕಾದ ಅನ್ಯಾಯ ಸರಿಪಡಿಸಬೇಕೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.