ಸುರಪುರ ತಾಲೂಕಿನಲ್ಲಿ 15 ಕೋವಿಡ್ ಪ್ರಕರಣ ಪತ್ತೆ
Team Udayavani, Jul 10, 2020, 12:23 PM IST
ಸುರಪುರ: ತಾಲೂಕಿನಲ್ಲಿ ಗುರುವಾರ ಒಂದೇ ದಿನ 15 ಪ್ರಕರಣಗಳು ಪತ್ತೆಯಾಗಿವೆ. ಪೊಲೀಸ್ ಕಾನಸ್ಟೇಬಲ್ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸದ್ಯಕ್ಕೆ ನಗರದ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ .
ನಗರದ ಸಾರಿಗೆ ಘಟಕದಲ್ಲಿ 1 ಮತ್ತು ಪೊಲೀಸ್ ಪೇದೆ ಒಬ್ಬ ಸೇರಿ 4, ದಿವಳಗುಡ್ಡ 7, ಸೂಗೂರು 4, ಹುಣಸಗಿ 1 ಹೀಗೆ ಒಟ್ಟು 15 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲರನ್ನು ನಗರದ ನಿಷ್ಠಿ ಇಂಜಿನಿಯಂರಿಂಗ್ ಕಾಲೇಜು ಐಸೋಲೇಶನ್ ವಾರ್ಡ್‌ಗೆ ಸೇರಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಆರ್.ವಿ. ನಾಯಕ ತಿಳಿಸಿದರು. ಕಾನ್ ಸ್ಟೇಬಲ್‌ಗೆ ಸೋಂಕು ತಗಲಿದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತ ಪೇದೆ ಸಂಪರ್ಕ ಇರುವುದರಿಂದ ಆರೋಗ್ಯ ತಪಾಸಣೆಗೆ ಎಲ್ಲ ಕಾನಸ್ಟೇಬಲ್ ಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರ ರಕ್ಷಣೆ ಮತ್ತು ದೂರು ಸ್ವೀಕಾರಕ್ಕೆ ಹಳೆ ಪೊಲೀಸ್ ಠಾಣೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಿವೈಎಸ್‌ಪಿ 94808-03637 ಮತ್ತು ತಮ್ಮನ್ನು ಸಂಪರ್ಕಿಸುವಂತೆ ಸಿಪಿಐ ಎಸ್. ಎಂ. ಪಾಟೀಲ(94808-03583) ತಿಳಿಸಿದರು. ಕೋರ್ಟ್ ಪೂರ್ಣ ಸ್ಯಾನಿಟೈಸರ್ ಮಾಡಲಾಗಿದೆ. ಕಾನಸ್ಟೇಬಲ್‌ನ ಪ್ರಾಥಮಿಕ ಸಂಪರ್ಕದಲ್ಲಿರುವ ಕೋರ್ಟ್ ಸಿಬ್ಬಂದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.