ಸುರಪುರ: ಅಮಿತ್ ಶಾಗೆ ಅದ್ಧೂರಿ ಸ್ವಾಗತ
Team Udayavani, Feb 26, 2018, 5:33 PM IST
ಸುರಪುರ: ನಗರದ ದಿವಳಗುಡ್ಡ ಹತ್ತಿರದ ಸಜ್ಜನ್ ಮೈದಾನದಲ್ಲಿ ರವಿವಾರ ಬಿಜೆಪಿ ಹಮ್ಮಿಕೊಂಡಿದ್ದ ನವ ಶಕ್ತಿ ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಕ್ಷದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಮಾಜಿ ಸಚಿವ ರಾಜುಗೌಡ, ಬಬ್ಲೂಗೌಡ, ರಾಜಾ ಹಣಮಪ್ಪ ನಾಯಕ ತಾತಾ, ಬಿ.ಎಂ. ಹಳ್ಳಿಕೋಟಿ, ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅಮಿತ್ ಶಾ ಅವರಿಗೆ ಶಾಲೂ ಹೊದಿಸಿ ಸ್ವಾಗತಿಸಿದರು.
ಟೈಲರ್ ಮಂಜಿನಲ್ಲಿ ಶಾ ಅವರು ಸ್ವಲ್ಪ ಹೊತ್ತು ತಂಗಿದರು. ಈ ವೇಳೆ ನಗರದ ಖ್ಯಾತ ವಾಣಿಜ್ಯೋಧ್ಯಮಿ ಕಿಶೋರಚಂದ ಜೈನ್ ಕಟುಂಬದಿಂದ ಶಾ ದಂಪತಿಯನ್ನು ಸನ್ಮಾನಿಸಲಾಯಿತು. ನಂತರ ವಾಹನದಲ್ಲಿ ದಿವಳಗುಡ್ಡ ಹತ್ತಿರದ ಸಜ್ಜನ್ ಮೈದಾನದಲ್ಲಿ ಏರ್ಪಡಿಸಿದ್ದ ಸಮಾವೇಶದ ವೇದಿಕೆಗೆ ತೆರಳಿದರು. ವೀರಶೈವ ಕಲ್ಯಾಣ ಮಂಟಪದಿಂದ ವೇದಿಕೆವರೆಗೆ ಅಂದಾಜು 2 ಸಾವಿರಕ್ಕೂ ಅಧಿಕ ಕಾರ್ಯಕರ್ತರು ರಸ್ತೆಯ ಎರಡು ಬದಿಗಳಲ್ಲಿ ಸುಮಾರು 1 ಕಿ.ಮೀ ವರೆಗೆ ಪಕ್ಷದ ಧ್ವಜ ಹಿಡಿದು ಸಾಲಾಗಿ ನಿಂತ್ತು ಸ್ವಾಗತ
ಕೋರಿದರು.
ನಿಗಧಿಯಂತೆ ಬೂತ್ ಮಟ್ಟದ ಕಾರ್ಯಕರ್ತರಿಗೆ ಮಾತ್ರ ಸಮಾವೇಶದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಸೇರಿದ್ದ ಜನಸ್ತೋಮ ಶಾ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ದಂಡು ಸಮಾವೇಶದ
ಒಳಗೆ ನುಗ್ಗಿದರು. ಪೊಲೀಸರು ನಿಯಂತ್ರಿಸಲಾಗದೆ ಅಸಹಾಯಕರಾದರು. ಜನರಿಗೆ ತೊಂದರೆ ಕೊಡಬೇಡಿ, ಅವರು ನನ್ನ ಮಾತು ಕೇಳಲಿ ಎಂದು ಅಮಿತ್ ಶಾ ಪೊಲೀಸರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ, ಪಾರಪ್ಪ ಗುತ್ತೇದಾರ, ಲಕ್ಷ್ಮೀಕಾಂತ ಪಂಚಮಗಿರಿ, ದೊಡ್ಡ ದೆಸಾಯಿ ದೇವರಗೋನಾಲ, ಮಾನಪ್ಪ ದಾಡಿ ಹುಲಕಲ್, ಕೊಪ್ಪಳ, ಸಿಂಧನೂರ, ಲಿಂಗಸೂಗೂರ ಸೇರಿದಂತೆ ಹಲವು ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.