ಸ್ವಾಮಿ ವಿವೇಕಾನಂದ ಶ್ರೇಷ್ಠ ಸಂತ: ಲಕ್ಷ್ಮಣ
Team Udayavani, Jan 15, 2022, 2:50 PM IST
![21vivekananda](https://www.udayavani.com/wp-content/uploads/2022/01/21vivekananda-620x344.jpg)
![21vivekananda](https://www.udayavani.com/wp-content/uploads/2022/01/21vivekananda-620x344.jpg)
ಶಹಾಪುರ: ಭಾರತದ ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಮೊಟ್ಟ ಮೊದಲ ಬಾರಿಗೆ ಪಾಶ್ಚಾತ್ಯ ದೇಶಗಳಿಗೆ ಮನದಟ್ಟು ಮಾಡುವ ಮೂಲಕ ನಮ್ಮ ದೇಶದ ಗರಿಮೆಯನ್ನು ಹೆಚ್ಚಿಸಿದ ದೇಶದ ಮಹಾನ್ ಸಂತರಾಗಿದ್ದಾರೆ. ಯುವ ಜನಾಂಗಕ್ಕೆ ಇವರು ಪ್ರೇರಣೆಯಾಗಿದ್ದಾರೆ ಎಂದು ಶಿಕ್ಷಕ ಲಕ್ಷ್ಮಣ ಲಾಳಸಗೇರಿ ತಿಳಿಸಿದರು.
ಭೀಮರಾಯನ ಗುಡಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದಿಂದ ನಡೆದ 159ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ, ಯುವ ಜನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಯುವ ಸಮೂಹದ ಐಕಾನ್, ಅವರ ಚರಿತ್ರೆ ಪ್ರತಿಯೊಬ್ಬರು ಓದಲೇಬೇಕಾದದು, ಆದ್ದರಿಂದ ಅಪಾರ ಅರಿವು, ಜ್ಞಾನ ಪ್ರಾಪ್ತಿಯಾಗಲಿದೆ ಎಂದರೆ ತಪ್ಪಿಲ್ಲ. ಅಪಾರ ದೇಶ ಪ್ರೇಮ ಹೊಂದಿದ ಅವರು, ದೇಶದ ಉನ್ನತಿಗೆ ಹಲವಾರು ಸಂತ ಶ್ರೇಷ್ಠರ ಜೊತೆ ಸಮಾಲೋಚನೆ ನಡೆಸುವ ಮೂಲಕ ದೇಶದ ಗರಿಮೆಯನ್ನು ಎಲ್ಲೆಡೆ ಪಸರಿಸಿದ ಮಹಾನ್ ಸಂತರಾಗಿದ್ದಾರು. ಅವರ ವಿಚಾರಗಳು ಯುವಕರಿಗೆ ದಾರಿ ದೀಪವಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ದೇವಿಂದ್ರಪ್ಪ ಮಡಿವಾಳಕರ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ರಾಮಚಂದ್ರರಾವ್ ಗುಂಡೇಕರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪಂಪಾಪತಿ ಶಿರ್ಣಿ, ಡಾ| ರವೀಂದ್ರನಾಥ ಹೊಸ್ಮನಿ, ಸಂತೋಷ ಜುನ್ನಾ, ಸೋಮಶೇಖರ ಜಾಗಟಿ, ದಯಾನಂದ ಟಿ., ಡಾ| ವರ್ಷಾ, ಅಶ್ವಿನಿ, ಪ್ರಿಯಾಂಕಾ, ರಮೇಶ ಪೂಜಾರಿ ಉಪಸ್ಥಿತರಿದ್ದರು. ಶಿವಾನಂದ ಗೋಗಿ ನಿರೂಪಿಸಿದರು. ಶಿವರಾಜ ಬೀರನೂರ ಸ್ವಾಗತಿಸಿ, ವಂದಿಸಿದರು.