ಪ್ರವಾಹದ ವಿರುದ್ಧ ಮತ್ತೆ ಈಜುವ ಅನಿವಾರ್ಯ…!
Team Udayavani, Sep 6, 2019, 1:34 PM IST
ಸಂಗ್ರಹ ಚಿತ್ರ
ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯದಲ್ಲಿ ಸಂಗ್ರಹಗೊಂಡ ನೀರು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿರುವ ಕಾರಣ ಕಕ್ಕೇರಾ ಸಮೀಪದ ನೀಲಕಂಠರಾಯನಗಡ್ಡಿಯ ಎಂಟು ಜನ ಗ್ರಾಮಸ್ಥರು ಕಕ್ಕೇರಾ ಪಟ್ಟಣಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಪ್ರವಾಹದ ವಿರುದ್ಧ ಈಜಿಕೊಂಡು ಬಂದು ತೆರಳಿದ್ದ ಘಟನೆ ನಡೆದಿದೆ.
ಅತಿಯಾದ ಮಳೆಯ ಪರಿಣಾಮ ನೀಲಕಂಠರಾಯನಗಡ್ಡಿಯ ಗ್ರಾಮಸ್ಥರಾದ ಲಕ್ಷ್ಮಣ, ಕನಕಪ್ಪ, ಹಣಮಂತ,ದೊಡ್ಡ ಹಣಮಂತ, ರಾಮಣ್ಣ,ಯಂಕಪ್ಪ, ಸೋಮಣ್ಣ, ನೀಲಪ್ಪ ಪ್ರವಾಹದ ವಿರುದ್ಧ ಈಜಿಕೊಂಡು ಅಗತ್ಯ ವಸ್ತುಗಳನ್ನು ತರಲು ಹೋಗಿದ್ದಾರೆ.
ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.85 ಲಕ್ಷ ಕ್ಯುಸೆಕ್ ಹರಿಸುತ್ತಿದ್ದು, ನೀಲಕಂಠರಾಯನಗಡ್ಡಿ ನಡುಗಡ್ಡೆಯಾಗಿದೆ.ಇದರಿಂದ ಹೊರ ಸಂಪರ್ಕ ಕಡಿದುಕೊಂಡಿರುವ ಗ್ರಾಮಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಲು ಈಜಿಕೊಂಡು ಬಂದಿದ್ದಾರೆ. ಹಿಂದೆ ಆಗಸ್ಟ್ ನಲ್ಲಿ ಕೃಷ್ಣಾ ನದಿಗೆ 6 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಹೈಡ್ರೊ ಪವರ್ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಈಗ ಜನ ಮಳೆಯಿಂದ ಮತ್ತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharstra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.