ತಹಶೀಲ್ದಾರ್ ಕಚೇರಿ ಕಟ್ಟಡಕ್ಕಿಲ್ಲ ನಾಮಫಲಕ!
Team Udayavani, Apr 26, 2022, 3:27 PM IST
ಗುರುಮಠಕಲ್: ತಾಲೂಕು ರಚನೆಯಾಗಿ 6 ವರ್ಷಗಳಾದರೂ ತಹಶೀಲ್ದಾರ್ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ತಾತ್ಕಲಿಕವಾಗಿ ಪುರಸಭೆ ಸಮುದಾಯ ಭವನಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರಗೊಂಡಿದೆ.
ಹಳೆ ಕಚೇರಿಯಿಂದ ಸ್ಥಳಾಂತರಿಸಿದ ಮಾಹಿತಿ ಜನರಿಗೆ ತಿಳಿಸಿಲ್ಲ ಮತ್ತು ಕಾರ್ಯ ನಿರ್ವಾಹಿಸುತ್ತಿರುವ ಕಚೇರಿಗೂ ನಾಮಫಲಕವಿಲ್ಲದೇ ತಹಶೀಲ್ದಾರ್ ಕಚೇರಿಯನ್ನು ಜನರು ಹುಡುಕುವಂತಾಗಿದೆ ಎಂದು ಜನರು ದೂರಿದ್ದಾರೆ.
ಗುರುಮಠಕಲ್ ತಾಲೂಕು 70 ಗ್ರಾಮಗಳನ್ನು ಹೊಂದಿದೆ. ಇದರಲ್ಲಿ 2 ಮುಖ್ಯ ಹೋಬಳಿಗಳಿವೆ. ಆದರೆ ತಾಲೂಕಿನಿಂದ ಬರುವ ಜನರಿಗೆ ತಹಶೀಲ್ದಾರ್ ಕಚೇರಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಯಾಕೆಂದರೆ ಸ್ಥಳಾಂತರಗೊಂಡಿರುವ ಮಾಹಿತಿ ಮತ್ತು ಕಟ್ಟಡಕ್ಕೆ ನಾಮಫಲಕ ಇಲ್ಲದಿರುವ ಕಾರಣ ಜನರಿಗೆ ಗೊಂದಲವಾಗಿದೆ.
ತಹಶೀಲ್ದಾರ್‌ರು ಮತ್ತು ಉಪತಹಶೀಲ್ದಾರ್‌ರ ಕಾರ್ಯಗಳು ಹೊಸ ಸಮುದಾಯ ಭವನದಲ್ಲಿ ನಡೆಯುತ್ತಿದ್ದು, ಪಹಣಿ ಮತ್ತು ನೆಮ್ಮದಿ ಕೇಂದ್ರ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಹಳೆ ಕಟ್ಟಡ ಕಚೇರಿಗೆ ಬಂದು ತಹೀಲ್ದಾರ್ ರನ್ನು ಭೇಟಿ ಮಾಡಬೇಕು ಎಂದು ಕೇಳಿದರೆ ಸಿಬ್ಬಂದಿ ಹೊಸ ಕಚೇರಿಗೆ ಹೋಗಿ ಎಂದು ತಿಳಿಸುತ್ತಾರೆ ಹೊರತು ಎಲ್ಲಿದೆ ಎಂಬುದು ಕೇಳಿದರೆ ಸಿಬ್ಬಂದಿಗಳು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ, ಜನರಿಗೆ ಕೇಳಿ ವಿಚಾರಿಸಿದರೆ ಕಾಕಲವಾರ ರಸ್ತೆಯ ಕ್ರಾಸ್‌ನಲ್ಲಿ ಇದೆ ಎಂದು ತಿಳಿಸುತ್ತಾರೆ. ಅಲ್ಲಿಗೆ ಹೋಗುವ ಮಾರ್ಗ ಕುರತು ಸರಿಯಾದ ಬೋರ್ಡ್ ಇಲ್ಲದಿರುವುದರಿಂದ ನಾನು ಗೊಂದಲಕ್ಕೆ ಒಳಗಾಗಿ ಹುಡುಕುವುದರಲ್ಲಿ ಸುಸ್ತು ಆಗಿದ್ದೇನೆ. -ಮೌಲ್ಲಾಲಿ, ನಸಾಲವಾಯಿ ಗ್ರಾಮಸ್ಥ
ಪುರಸಭೆ ಸಮುದಾಯ ಭವನದಲ್ಲಿ ತಹಶೀಲ್ದಾರ್ ಕಚೇರಿ ಸ್ಥಳಾಂತರಿಸಲಾಗಿದೆ. ಕಟ್ಟಡ ಮುಖ್ಯ ದ್ವಾರದಲ್ಲಿ ಬರೆಯಬೇಕಾಗಿದೆ. ಇನ್ನೂ ಮೂರು ದಿನಗಳಲ್ಲಿ ನಾಮಫಲಕ ಆಳವಡಿಸಲಾಗುವುದು. -ಶರಣಬಸವ, ಗುರುಮಠಕಲ್ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.