ಪಠ್ಯಪುಸ್ತಕ ಸರಬರಾಜು ವಿಳಂಬ
Team Udayavani, Jun 1, 2018, 1:00 PM IST
ಯಾದಗಿರಿ: ಜಿಲ್ಲಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೋಮವಾರ ಆರಂಭಗೊಂಡಿದ್ದು, ಇನ್ನೂ ಕೆಲವು ಪಠ್ಯ ಪುಸ್ತಕಗಳು ಸರಬರಾಜು ಆಗದಿರುವುದು ಬೆಳಕಿಗೆ ಬಂದಿದೆ. 3ನೇ ತರಗತಿಯ ಪರಿಸರ, ಇಂಗ್ಲಿಷ್, 8ನೇ ತರಗತಿಯ ಗಣಿತ ಭಾಗ-2, ಸಮಾಜ ವಿಜ್ಞಾನ, 9ನೇ ತರಗತಿಯ ವಿಜ್ಞಾನ ಭಾಗ-2, ಗಣಿತ ಭಾಗ -1 ಮತ್ತು ಭಾಗ-2, 10ನೇ ತರಗತಿಯ ಗಣಿತ ಭಾಗ-1 ಸೇರಿದಂತೆ ಉರ್ದು ಮಾಧ್ಯಮದ 1ರಿಂದ 10ನೇ ತರಗತಿಯವರೆಗೆ ಪಠ್ಯ ಪುಸ್ತಕಗಳು ಇನ್ನೂ ಸರಬರಾಜು ಆಗಿಲ್ಲ.
2018-19ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗಾಗಿ ಉಚಿತ ಪಠ್ಯ ಪುಸ್ತಕ ಬೇಡಿಕೆ 11,86,100 ಇದ್ದು, ಅದರಲ್ಲಿ 8,95,339 ಪುಸ್ತಕಗಳು ಸರಬರಾಜು ಮಾಡಲಾಗಿದೆ. ಯಾದಗಿರಿ ತಾಲೂಕಿಗೆ 3,84,306 ಪುಸ್ತಕಗಳ ಬೇಡಿಕೆ ಇದ್ದು, 2,54,679 ಪುಸ್ತಕಗಳು ಸರಬರಾಜು ಮಾಡಲಾಗಿದೆ. ಶಹಾಪುರ ತಾಲೂಕಿಗೆ 3,66,629 ಪುಸ್ತಕಗಳ ಬೇಡಿಕೆ ಇದ್ದು, 2,88,209 ಪುಸ್ತಕಗಳು ಸರಬರಾಜು ಮಾಡಲಾಗಿದೆ. ಸುರಪುರ ತಾಲೂಕಿನಲ್ಲಿ 4,35,175 ಪುಸ್ತಕಗಳ ಬೇಡಿಕೆ ಇದ್ದು, 3,52,451 ಪುಸ್ತಕಗಳು ಸರಬರಾಜು ಮಾಡಲಾಗಿದೆ.
ಜಿಲ್ಲೆಯ ಖಾಸಗಿ ಶಾಲೆಗಳಿಗಾಗಿ ಮಾರಾಟ ಪಠ್ಯ ಪುಸ್ತಕ ಬೇಡಿಕೆ 2,84,090 ಬೇಡಿಕೆ ಇದ್ದು, ಅದರಲ್ಲಿ 2,42,090
ಪುಸ್ತಕಗಳು ಸರಬರಾಜು ಮಾಡಲಾಗಿದೆ. ಯಾದಗಿರಿ ತಾಲೂಕಿಗೆ 73321 ಪುಸ್ತಕಗಳ ಬೇಡಿಕೆ ಇದ್ದು, 58122 ಪುಸ್ತಕಗಳು ಸರಬರಾಜು ಮಾಡಲಾಗಿದೆ. ಸುರಪುರ ತಾಲೂಕಿನಲ್ಲಿ 1,03,073 ಪುಸ್ತಕಗಳ ಬೇಡಿಕೆ ಇದ್ದು, 91315 ಪುಸ್ತಕಗಳು ಸರಬರಾಜು ಮಾಡಲಾಗಿದೆ. ಶಹಾಪುರ ತಾಲೂಕಿನಲ್ಲಿ 1,07,69 ಪುಸ್ತಕಗಳ ಬೇಡಿಕೆ ಇದ್ದು, 92653
ಪುಸ್ತಕಗಳು ಸರಬರಾಜು ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಸಮವಸ್ತ್ರ ವಿವರ: ಜಿಲ್ಲೆಯಾದ್ಯಂತ 1,68,006 ಬೇಡಿಕೆ ಇದ್ದು, 1,52,989 ಸಮವಸ್ತ್ರಗಳು ಸರಬರಾಜು ಮಾಡಲಾಗಿದೆ. 1,13,753 ಸಮವಸ್ತ್ರಗಳು ವಿತರಣೆ ಮಾಡಲಾಗಿದೆ.
ಯಾದಗಿರಿ ತಾಲೂಕಿನಲ್ಲಿ 26154 -ಗಂಡು, 21418 ಹೆಣ್ಣು ಸೇರಿದಂತೆ 47572 ಸಮವಸ್ತ್ರದ ಬೇಡಿಕೆ ಇದ್ದು, ಅದರಲ್ಲಿ 25950-ಗಂಡು, 21189-ಹೆಣ್ಣು ಸೇರಿದಂತೆ ಒಟ್ಟು 47139 ಸಮವಸ್ತ್ರ ಸರಬರಾಜು ಮಾಡಲಾಗಿದೆ. 11741-ಗಂಡು, 11062-ಹೆಣ್ಣು ಸೇರಿದಂತೆ 22803 ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ.
ಸುರಪುರ ತಾಲೂಕಿನಲ್ಲಿ 32,302 ಗಂಡು, 31,086 ಹೆಣ್ಣು ಸೇರಿದಂತೆ 63,388 ಸಮವಸ್ತ್ರದ ಬೇಡಿಕೆ ಇದ್ದು, 32,433 ಗಂಡು, 25,507 ಹೆಣ್ಣು ಸೇರಿದಂತೆ ಒಟ್ಟು 57,940 ಸಮವಸ್ತ್ರ ಸರಬರಾಜು ಮಾಡಲಾಗಿದೆ. 23,471 ಗಂಡು, 18,488 ಹೆಣ್ಣು ಸೇರಿದಂತೆ ಒಟ್ಟು 41959 ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ.
ಶಹಾಪುರ ತಾಲೂಕಿನಲ್ಲಿ 28,738 ಗಂಡು, 28,308 ಸೇರಿದಂತೆ 57,046 ಸಮವಸ್ತ್ರದ ಬೇಡಿಕೆ ಇದ್ದು, ಅದರಲ್ಲಿ
26,689 ಗಂಡು, 21,221 ಹೆಣ್ಣು ಸೇರಿದಂತೆ 47,910 ಸಮವಸ್ತ್ರ ಸರಬರಾಜು ಮಾಡಲಾಗಿದೆ. 27,241 ಗಂಡು, 21,744 ಹೆಣ್ಣು ಸೇರಿದಂತೆ 48,991 ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದ್ದು, ಉಳಿದ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಶಾಲೆಗಳು ಪ್ರಾರಂಭವಾಗಿದ್ದು, ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರಗಳ ಮಕ್ಕಳಿಗೆ ಒದಗಿಸುವ ಮೂಲಕ ಸಮಸ್ಯೆ ಆಗದಂತೆ ನೋಡಿಕೊಳ್ಳವವರೇ ಕಾಯ್ದು ನೋಡಬೇಕಿದೆ.
ಜಿಲ್ಲೆಯಾದ್ಯಂತ 1096 ಪ್ರಾಥಮಿಕ ಹಾಗೂ 122 ಪ್ರೌಢಶಾಲೆಗಳಿದ್ದು, ಈಗಾಗಲೇ ಬಹುತೇಕ ಶಾಲೆಗಳಿಗೆ
ಪಠ್ಯಪುಸ್ತಕಗಳು ಸರಬರಾಜು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗವುದು.
ಬಸವರಾಜ ಗೌನಳ್ಳಿ, ಡಿಡಿಪಿಐ ಯಾದಗಿರಿ
ರಾಜೇಶ ಪಾಟೀಲ್ ಯಡ್ಡಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.