ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ
ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರತಿಯೊಂದು ಮನೆ-ಮನೆಯಿಂದ ಅಲ್ಪಸ್ವಲ್ಪ ಕಾಣಿಕೆ ಸಲ್ಲಬೇಕು.
Team Udayavani, Jan 16, 2021, 6:40 PM IST
ಯಾದಗಿರಿ: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಕಾರ ನೀಡಬೇಕು ಎಂದು ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಮಹಾಸ್ವಾಮಿ ಹೇಳಿದರು. ನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ಹೆಡಗಿಮದ್ರಾದ ಶಾಂತವೀರ ಮಲ್ಲಿಕಾರ್ಜುನ ಶಿವಾಚಾರ್ಯರ ಜತೆಗೂಡಿ ಚಾಲನೆ ನೀಡಿ ಅವರು
ಮಾತನಾಡಿದರು.
ದಶಕಗಳ ಕನಸು ನನಸಾಗುವ ದಿನಗಳು ಹತ್ತಿರ ಬರುತ್ತಿದ್ದು, ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರತಿಯೊಂದು ಮನೆ-ಮನೆಯಿಂದ ಅಲ್ಪಸ್ವಲ್ಪ ಕಾಣಿಕೆ ಸಲ್ಲಬೇಕು. ಆಗ ಮಾತ್ರ ನಮ್ಮ ಜನ್ಮ ಧನ್ಯವಾಗುತ್ತದೆ ಎಂದರು.
ಈ ವೇಳೆ ದೇವಿ ದೇವಸ್ಥಾನದ ಅಧ್ಯಕ್ಷ ಶಂಕ್ರಪ್ಪಗೌಡ ಬೆಳಗುಂದಿ, ಅಭಿಯಾನದ ಜಿಲ್ಲಾ ಸಂಚಾಲಕ ಮೂರ್ತಿ, ಸಹ ಸಂಚಾಲಕರಾದ ರಾಜೇಂದ್ರ, ನಗರ ಸಂಚಾಲಕ ಸೂಗಪ್ಪ ಮಂದುಲ್, ಸಹ ಸಂಚಾಲಕ ಅಂಬಯ್ಯ ಶಾಬಾದಿ, ಪ್ರಭು ಮುತ್ತಗಿ, ಮಲ್ಲು ಚಾಪಲ್, ವೆಂಕಟರೆಡ್ಡಿ ಅಬ್ಬೆತುಮಕೂರು, ರಮೇಶ್ ದೊಡ್ಡಮನಿ, ಕೃಷ್ಣಾರೆಡ್ಡಿ ಬಬಲಾದಿ ಸೇರಿದಂತೆ ಸ್ವಯಂ ಸೇವಕರು, ಕಾರ್ಯಕರ್ತರು ಇದ್ದರು.
ರಾಮಮಂದಿರ ನಿರ್ಮಾಣಕ್ಕೆ ರಾಜುಗೌಡ 5ಲಕ್ಷ ರೂ. ವಿತರಣೆ
ಹುಣಸಗಿ: ಪಟ್ಟಣದ ಹಳ್ಳದ ಹನುಮಾನ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಶಾಸಕ
ನರಸಿಂಹನಾಯಕ (ರಾಜುಗೌಡ) ಚಾಲನೆ ನೀಡಿ ಕೃಷಿಯಿಂದ ಬಂದ ಆದಾಯದಲ್ಲಿ 5 ಲಕ್ಷ ರೂ. ಚೆಕ್ ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ
ದೇಣಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ಶ್ರೀರಾಮ ಮಂದಿರ ಸರ್ವ ಜನಾಂಗದ ಸ್ವತ್ತು. ಹಿಂದೂಪರ ಹಾಗೂ ಭಕ್ತರು ತಮಗೆ ತಿಳಿದಷ್ಟು, ಶಕ್ತಗನುಸಾರ ದೇಣಿಗೆ ನೀಡಬಹುದು ಎಂದರು. ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಅಭಿಯಾನ ಹಿಂದೂಪರ ಸಂಘಟನೆಗಳಿಂದ ದೇಶಾದ್ಯಂತ ನಡೆದಿದೆ. ಈ ಅಭಿಯಾನ ಯಾವುದೇ ಜಾತಿ, ಜನಾಂಗ ಹಾಗೂ ಪಕ್ಷದ ಪರವಾಗಿಲ್ಲ. ಇದೊಂದು ದೇಶಾಭಿಮಾನ ಎಂದರು.
ನಂತರ ಅಭಿಯಾನ ಪಟ್ಟಣದ ವಿವಿಧ ಬೀದಿಗಳ ಮೂಲಕ ಬಸ್ ನಿಲ್ದಾಣ ಹತ್ತಿರದ ಶ್ರೀರಾಮ ಮಂದಿರ ನಿರ್ಮಾಣ ನಿ ಧಿ ಸಮರ್ಪಣಾ ಕಾರ್ಯಾಲಯಕ್ಕೆ
ಬಂದು ತಲುಪಿತು. ಈ ವೇಳೆ ಶಾಸಕ ರಾಜುಗೌಡ ಕಾರ್ಯಾಲಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮರಿಹುಚ್ಚೇಶ್ವರ ಸ್ವಾಮೀಜಿ, ಚೆನ್ನಬಸವ ಶಿವಚಾರ್ಯರು, ಸಿದ್ದಲಿಂಗಯ್ಯ ಶಾಸ್ತ್ರಿ, ಜಿಪಂ ಸದಸ್ಯ ಬಸವರಾಜ ಸ್ಥಾವರಮಠ, ಎಪಿಎಂಸಿ
ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಹಿಂದೂಪರ ಸಂಘಟನೆ ಮುಖಂಡರಾದ ಬಸವರಾಜ ಮೇಲಿನಮನಿ, ಆನಂದ ಬಾರಗೀಡದ, ರಮೇಶ ಮಿರಜಕರ್, ಮಹೇಶ
ಸ್ಥಾವರಮಠ, ದೇವು ಬೈಚಬಾಳ, ಮಲ್ಲಿಕಾರ್ಜುನ ದೇಸಾಯಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.