ಮತದಾನ ಬಹಿಷ್ಕಾರ ನಿರ್ಧಾರ ಅಚಲ
Team Udayavani, Apr 17, 2018, 5:47 PM IST
ಸೈದಾಪುರ: ಮತದಾನ ನಿಮ್ಮ ಹಕ್ಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರವಿರಬೇಡಿ ಎಂದು ಗ್ರಾಮಸ್ಥರ ಮನವೊಲಿಸಲು ಮುಂದಾದ ಗುರುಮಠಕಲ್ ಮತಕ್ಷೇತ್ರದ ಚುನಾವಣಾಧಿಕಾರಿ ಪರಮೇಶ್ವರ ನಾಯ್ಕ ಅವರ ಮಾತಿಗೆ ಒಪ್ಪದ ಬದ್ದೇಪಲ್ಲಿ ಗ್ರಾಮಸ್ಥರು ಬೇಡಿಕೆ ಈಡೇರುವವರೆಗೆ ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಬದ್ದೇಪಲ್ಲಿಗೆ ರವಿವಾರ ರಾತ್ರಿ ಭೇಟಿ ನೀಡಿದ ಚುನಾವಣಾ ಅಧಿಕಾರಿ ಪರಮೇಶ್ವರ ನಾಯ್ಕ ಅವರು ಸಭೆ ನಡೆಸಿ ಮತದಾನ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬದ್ದೇಪಲ್ಲಿ ಗ್ರಾಮಸ್ಥರು, ನಮ್ಮ ಗ್ರಾಮ ಹಾಗೂ ತಾಂಡಾವನ್ನು ನೂತನ ಗುರುಮಠಕಲ್ ತಾಲೂಕಿಗೆ ಸೇರಿಸಿರುವುದನ್ನು ಕೈಬಿಟ್ಟು ಯಾದಗಿರಿ ತಾಲೂಕಿನಲ್ಲಿಯೇ ಮುಂದುವರಿಸಬೇಕು. ಅಲ್ಲಿಯವರೆಗೂ ತಾವು ಮತದಾನ ಮಾಡುವುದೇ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದರು. ಗ್ರಾಮೀಣ ಜನರಿಗೆ ಆಡಳಿತ ಕೇಂದ್ರ ಸಮೀಪದಲ್ಲಿದ್ದು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಹೊಸ ತಾಲೂಕು ರಚನೆ ಮಾಡಲಾಗುತ್ತದೆ.
ಆದರೆ ದೂರದ ಮೂಲೆಯಲ್ಲಿರುವ ಯಾವುದೋ ಗ್ರಾಮವನ್ನು ಹೊಸ ತಾಲೂಕಿಗೆ ಸೇರಿಸಿ ಅಂತಲ್ಲ. ಕೇವಲ ಗ್ರಾಪಂ ಆಧಾರವಾಗಿಟ್ಟುಕೊಂಡು ಬದ್ದೇಪಲ್ಲಿ ಗ್ರಾಮ ಹಾಗೂ ತಾಂಡಾವನ್ನು ಗುರುಮಠಕಲ್ ತಾಲೂಕಿಗೆ ಸೇರಿಸಿದ ಜಿಲ್ಲಾಡಳಿತ ಆಕ್ಷೇಪಣೆ ಅರ್ಜಿ ಸಲ್ಲಿಸಿದರೂ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಧರಣಿ ಸತ್ಯಾಗ್ರಹ ಮಾಡಿದರೂ ಸ್ಪಂದನೆ ನೀಡಿಲ್ಲ. ಹೀಗಾಗಿ ಚುನಾವಣೆ ಬಹಿಷ್ಕಾರ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.
ಚುನಾವಣಾ ಅಧಿಕಾರಿ ಪರಮೇಶ್ವರ ನಾಯ್ಕ ಅವರು ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಸಾಕಷ್ಟು ಮನವಿ ಮಾಡಿದರೂ ಜನರು ತಮ್ಮ ನಿಲುವು ಬದಲಿಸಲಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.