ರೈತ ಸಕಲ ಜೀವರಾಶಿಗೆ ಅನ್ನ ನೀಡುವ ದೇವರು
Team Udayavani, Jun 27, 2018, 3:58 PM IST
ಶಹಾಪುರ: ಪ್ರಾಮಾಣಿಕ ದುಡಿಮೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವ್ಯಕ್ತಿಗಳ ದರ್ಶನದಿಂದ ಮನದ ಮೈಲಿಗೆ ತೊಳೆದು ಹೋಗುತ್ತದೆ ಎಂದು ಲಿಂಗಸೂಗೂರಿನ ಅನುಭಾವಿ ತಿಮ್ಮಗೌಡ ಚಿಲ್ಕಾರಾಗಿ ಹೇಳಿದರು.
ನಗರದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಲಿಂಗಣ್ಣ ಸತ್ಯಂಪೇಟೆ ಅವರ ವೇದಿಕೆಯಲ್ಲಿ ಆಯೋಜಿಸಿದ್ದ ತಿಂಗಳ ಬಸವ ಬೆಳಕು -76ರ ಸಭೆಯಲ್ಲಿ ಲಿಂ. ಗುರಪ್ಪ ಯಜಮಾನ, ಶಿವಮ್ಮ ತಾಯಿ ಹಾಗೂ ಲಿಂಗಣ್ಣ ಸತ್ಯಂಪೇಟೆ ಅವರ ನೆನಪಿನಲ್ಲಿ ಜರುಗಿದ ಸಭೆಯಲ್ಲಿ ಬಸವ ಬೆಳಕಿನ ಹೊಳೆಯು ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂದು ಊರೂರು ಸುತ್ತಿ ತತ್ವ ಪ್ರಸಾರ ಮಾಡುವ ಮಠಾಧೀಶರ ಕೊರತೆ ಪ್ರಸ್ತುತ ದಿನಗಳಲ್ಲಿ ಕಾಣುತ್ತಿದೆ. ಬಸವಾದಿ ಶರಣರ ವಚನಗಳ ಓದು ನಮಗರಿವಿಲ್ಲದೆ ಬದುಕು ಕಟ್ಟಿ ಕೊಡುತ್ತದೆ. ಪ್ರಾಮಾಣಿಕತೆಯಿಂದ ಇರುವಂತೆ ಪ್ರೇರೇಪಿಸುತ್ತದೆ. ನೇರ ನಿಷ್ಠುರವಾಗಿ ಬದುಕುವುದಲ್ಲದೆ ಇವನಮ್ಮವ ಇವ ನಮ್ಮವ ಎಂಬ ಭಾವನೆ ಮೊಳೆಯುವಂತೆ ಪ್ರೇರೇಪಿಸುವ ಅಗಾಧವಾದ ಶಕ್ತಿ ವಚನಗಳಲ್ಲಿದೆ ಎಂದರು.
ರೈತ ಸಂಘದ ನಾಗರತ್ನಾ ಪಾಟೀಲ ಮಾತನಾಡಿ, ರೈತ ದೇಶದ ಶಕ್ತಿ. ಸಕಲ ಜೀವರಾಶಿಗಳಿಗೂ ಅನ್ನ ನೀಡುವ ದೇವರು. ಆದರೆ ವಾಸ್ತವವಾಗಿ ಬಹುರಾಷ್ಟ್ರೀಯ ಕಂಪನಿಗಳು ಆತನ ಬದುಕನ್ನು ನುಂಗಿ ಹಾಕಿವೆ ಎಂದು ಬೇಸರ ವ್ಯಕ್ತಪಡಿಸಿದರು. ಬಸವ ಜ್ಯೋತಿ ಪ್ರಜ್ವಲನೆಯನ್ನು ನಿವೃತ್ತ ಶಿರಸ್ತೇದಾರ್ ನೀಲಾಂಬಿಕೆ ವಿಶ್ವಾರಾಧ್ಯ ಸತ್ಯಂಪೇಟೆ ವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಭಾರತಿ ಶರಣಬಸ್ಸಪ್ಪಗೌಡ ದರ್ಶನಾಪುರ ವಹಿಸಿದ್ದರು. ರಾಜು ಕುಂಬಾರ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕು. ವೀರಭದ್ರ, ಸಂಗೀತ ಕಲಾವಿದ ಚಂದ್ರಶೇಖರ ಗೋಗಿ ಅವರನ್ನು ಇದೇ ಸಂದರ್ಭದಲ್ಲಿ ಪ್ರತಿಷ್ಠಾನ ಸನ್ಮಾನಿಸಿತು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವಪ್ಪ ಗಾಳೆನೋರ ಸ್ವಾಗತ ಗೀತೆ ಹಾಡಿದರು. ಕೊನೆಯಲ್ಲಿ ಚನ್ನಮಲ್ಲಿಕಾರ್ಜುನ ಗುಂಡಾನೋರ ವಂದಿಸಿದರು.
ಸಭೆಯಲ್ಲಿ ಅಡಿವೆಪ್ಪ ಜಾಕಾ, ಅಮರಣ್ಣ ಗುಡಗುಂಟಿ, ಮೋರೆಪ್ಪ ಕರಿಗೇರ, ಹೊನ್ನಾರೆಡ್ಡಿ ವಕೀಲರು, ಶಿವಯೋಗಪ್ಪ ಮುಡಬೂಳ, ಶಿವರುದ್ರ ಉಳ್ಳಿ, ಜಟ್ಟೆಪ್ಪ ಸತ್ಯಂಪೇಟೆ, ಪಂಪಣ್ಣಗೌಡ ಮಳಗ, ಮಲ್ಲಪ್ಪ ನಾಡಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.