ಅಂದ ಕಳೆದುಕೊಂಡ ಗುರುಮಠಕಲ್‌ ಉದ್ಯಾನ


Team Udayavani, Nov 19, 2019, 2:40 PM IST

yg-tdy-1

ಗುರುಮಠಕಲ್‌: ಸಾರ್ವಜನಿಕರಿಗೆ ಗೊತ್ತಿರದ ಅನೇಕ ಸಂಗತಿಗಳು ಇಲ್ಲಿವೆ. ಪ್ರತಿ ನಗರ ಹಸಿರಾಗಿರಬೇಕು. ಆದರೆ ಸಾರ್ವಜನಿಕರ ಉದ್ಯಾನದಲ್ಲಿ ನೀರಿಲ್ಲದೇ ಒಣಗಿದಂತೆ ಕಾಣುತ್ತದೆ. ಪಟ್ಟಣದ 23ನೇ ವಾರ್ಡ್‌ ಲಕ್ಷ್ಮೀ ನಗರದ ಬಡಾವಣೆ ಉದ್ಯಾನದಲ್ಲಿ ವಿದ್ಯುತ್‌ ಸಂಪರ್ಕವಿಲ್ಲ. ಸಮರ್ಪಕ ನಿರ್ವಹಣೆ ಇಲ್ಲ, ಹಸಿರು ಹುಲ್ಲಿನ ಹಾಸಿಗೆಯಂತೂ ಇಲ್ಲವೇ ಇಲ್ಲ. ಒಂದು ಸಮಯದಲ್ಲಿ ಆಕರ್ಷಣೀಯವಾಗಿದ್ದ ಉದ್ಯಾನ ಇದೀಗ ಅಂದಕಳೆದುಕೊಂಡು ಕಾಲಗರ್ಭಕ್ಕೆ ಸೇರುವ ಹಂತ ತಲುಪಿದೆ. ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉದ್ಯಾನ ನಿರ್ವಹಣೆಗಾಗಿ ಪುರಸಭೆ ಸಾವಿರಾರು ರೂ. ಖರ್ಚು ಮಾಡುತ್ತಿದೆ. ಆದಾಗ್ಯೂ ಸ್ವಚ್ಛತೆ ಮರೀಚಿಕೆಯಾಗಿದೆ.

ಸ್ವಚ್ಛತೆಗಿಲ್ಲ ಆದ್ಯತೆ: ಮಕ್ಕಳ ಉದ್ಯಾನ ಅನೈರ್ಮಲ್ಯದ ತಾಣವಾಗಿದೆ. ಉದ್ಯಾನದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ಗಿಡಗಳು ಅಡ್ಡಾ ದಿಡ್ಡಿ ಬೆಳೆದು ನಿಂತ ಪರಿಣಾಮ ಫುಟಾತ್‌ ಪಕ್ಕದಲ್ಲಿ ಸಂಚರಿಸುವ ಸಾರ್ವಜನಿಕರ ಮುಖಕ್ಕೆ ಬಡಿಯುವಂತಾಗಿದೆ. ಉದ್ಯಾನದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲ. ಜನರು ಇಲ್ಲಿ ತಿಪ್ಪೆ ಹಾಕಿದ್ದಾರೆ. ನೀರು ಸಂಗ್ರಹಾಗಾರ ಇದ್ದರೂ ನಿರುಪಯುಕ್ತವಾಗಿದೆ. ಇಲ್ಲಿ ಮನೆ ಕಟ್ಟಲು ಉಪಯೋಗಿಸುವ ಸೆಂಟ್ರಿಂಗ್‌ ವಸ್ತುಗಳು ಇಟ್ಟಿದಾರೆ.

ಇನ್ನೊಂದೆಡೆ ಹಸಿರು ಹುಲ್ಲಿನ ಹಾಸಿಗೆಯಾಗುವ ಬದಲು ಸಂಪೂರ್ಣ ಒಣಗಿದ ಭೂಮಿಯಾಗಿದೆ. ಮಕ್ಕಳ ಆಟೋಟಕ್ಕೆ ಇರುವ ಉಪಕರಣಗಳನ್ನು ಪುರುಷರು, ಮಹಿಳೆಯರು ಉಪಯೋಗಿಸುತ್ತಿರುವುದು ಉದ್ಯಾನನಿರ್ವಹಣೆ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆವರಣಗೋಡೆ ಅಥವಾ ಸೂಕ್ತ ತಂತಿ ಬೇಲಿ ನಿರ್ಮಿಸಬೇಕು. ಉದ್ಯಾನದಲ್ಲಿ ನೀರಿನ ತೊಟ್ಟಿ, ಮೋಟಾರ್‌ ಪಂಪ್‌ ಅಳವಡಿಕೆ, ಹಣ್ಣು, ಹೂವು, ಆಯುರ್ವೇದ ಗಿಡಗಳನ್ನು ನೆಡಬೇಕು. ನಾಮಫಲಕ ಹಾಕಿ ಉದ್ಯಾನದ ಬಗ್ಗೆ ಸಮಗ್ರ ಮಾಹಿತಿ ಪ್ರಕಟಿಸಬೇಕು. ನಡೆದಾಡಲು ಸೂಕ್ತ ದಾರಿ, ಕುಳಿತುಕೊಳ್ಳಲು ಕಾಂಕ್ರಿಟ್‌ ಆಸನ, ವಿದ್ಯುತ್‌ ದೀಪಗಳ ಅಳವಡಿಸಬೇಕು. ಅಲ್ಲಲ್ಲಿ ಮಕ್ಕಳಿಗಾಗಿ ಉದ್ಯಾನವನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಬೇಕು. ಉದ್ಯಾನದಲ್ಲಿ ಸಮಯಕ್ಕೆ ಸರಿಯಾಗಿ ನೀರು ಹಾಕಿ ಬೆಳೆಸದ ಹಿನ್ನೆಲೆಯಲ್ಲಿ ಸಸ್ಯಗಳು ಒಣಗಿವೆ. ಹೀಗಾಗಿ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಉದ್ಯಾನದ ಪುನಶ್ಚೇತನಕ್ಕೆ ಕಾಳಜಿ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ವಿಶ್ರಾಂತಿಗಾಗಿ ಉದ್ಯಾನ ಅಗತ್ಯವಿದೆ. ಮಕ್ಕಳ ಆಟಕ್ಕಾಗಿ ಮೈದಾನ ಇದ್ದರೆ ಬಡಾವಣೆಯಲ್ಲಿರುವ ಜನರಿಗೆ ಅನುಕೂಲವಾಗುತ್ತದೆ. ಉದ್ಯಾನದಲ್ಲಿ ತಿಪ್ಪೆ ಹಾಕಿದ್ದರಿಂದ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. – ಅಸಮ್ಮೊದ್ದೀನ್‌, ಸ್ಥಳೀಯರು

 

-ಚೆನ್ನಕೇಶವುಲು ಗೌಡ

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadgir: ಬಸ್ ಪಲ್ಟಿ… ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಚನ್ನಾರೆಡ್ಡಿ ತುನ್ನೂರ್

Yadgir: ಬಸ್ ಅಪಘಾತ… ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಚನ್ನಾರೆಡ್ಡಿ ತುನ್ನೂರ್

Yadagiri: ಪಲ್ಟಿಯಾದ ಬಸ್; ಪ್ರಯಾಣಿಕರು ಪ್ರಾಣಪಾಯದಿಂದ ಪಾರು

Yadagiri: ಪಲ್ಟಿಯಾದ ಬಸ್; ಪ್ರಯಾಣಿಕರು ಪ್ರಾಣಪಾಯದಿಂದ ಪಾರು

13-yadgiri

Yadgir: ಬೈಕ್‌ -ಬಸ್‌ ಭೀಕರ ಅಪಘಾತ‌; ಮೂವರು ಮಕ್ಕಳು ಸೇರಿ ಬೈಕ್‌ ನಲ್ಲಿದ್ದ ಐವರ ದುರ್ಮರಣ

Miscreants set fire to the idol of Goddess Mariyamma at Yadagiri

Yadagiri: ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Yadagiri: Worm found in hostel food

Yadagiri: ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.