ಸೋಂಕಿತರ ಸಂಖ್ಯೆ 877ಕ್ಕೆ ಏರಿಕೆ
Team Udayavani, Jun 20, 2020, 8:21 AM IST
ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ನಾಲ್ವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಸುರಪುರ ತಾಲೂಕು ದಿವಳಗುಡ್ಡದ 27 ವರ್ಷದ ಮಹಿಳೆ (ಪಿ-8227), ಅದೇ ಗ್ರಾಮದ 31 ವರ್ಷದ ಪುರುಷ (ಪಿ-8228), ಯಾದಗಿರಿ ತಾಲೂಕು ಲಿಂಗೇರಿಯ 78 ವರ್ಷದ ಮಹಿಳೆ (ಪಿ-8229), ಅಲ್ಲಿಪುರದ 32 ವರ್ಷದ ಮಹಿಳೆ (ಪಿ-8230) ಸೋಂಕಿಗೆ ತುತ್ತಾಗಿದ್ದು, ಅವರಿಗೆ ಸೋಂಕು ಹೇಗೆ ಬಂತು ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿದೆ.
ಗುರುವಾರವಷ್ಟೇ ದಿವಳಗುಡ್ಡದ 38 ವರ್ಷದ ಪಿ-7894, ಹೊಸ ಸಿದ್ದಾಪುರದ 36 ವರ್ಷದ ಪಿ-7895 ಹಾಗೂ ಯಾದಗಿರಿ ನಗರದ ದುಕಾನವಾಡಿಯ 34 ವರ್ಷದ ಪಿ-7896 ರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಶುಕ್ರವಾರ ಮತ್ತೆ ದಿವಳಗುಡ್ಡದ ಇಬ್ಬರಲ್ಲಿ ಸೋಂಕು ದೃಢವಾಗಿದೆ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 877ಕ್ಕೆ ಏರಿಕೆಯಾಗಿದ್ದು, 489 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ್ದಾರೆ. 6 ಜನ ಗುಣಮುಖ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 6 ಜನ ಗುಣಮುಖರಾಗಿದ್ದು, ಜೂನ್ 19ರವರೆಗೆ ಒಟ್ಟು 489 ಜನ ಗುಣಮುಖರಾಗಿದ್ದಾರೆ.
ನೋವೆಲ್ ಕೋವಿಡ್ ವೈರಸ್ ಪರೀಕ್ಷೆಗಾಗಿ ಕಳುಹಿಸಿದ ಮಾದರಿಗಳ ಪೈಕಿ ಶುಕ್ರವಾರ 100 ನೆಗೆಟಿವ್ ವರದಿ ಸೇರಿ ಈವರೆಗೆ 20402 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 835 ಮಾದರಿಗಳು ಸೇರಿದಂತೆ 1757 ಮಾದರಿಗಳ ವರದಿ ಬರಬೇಕಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1368 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2771 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.
ಜಿಲ್ಲೆಯಲ್ಲಿ 67 ಕಂಟೇನ್ಮೆಂಟ್ ಝೋನ್ ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 171 ಜನ, ಶಹಾಪುರ ಕೋವಿಡ್ ಕೇರ್ ಸೆಂಟರ್‌ನಲ್ಲಿ 56 ಜನ, ಸುರಪುರ ಕೋವಿಡ್ ಕೇರ್ ಸೆಂಟರ್ ನಲ್ಲಿ 50 ಮತ್ತು ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 68 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 20 ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಒಟ್ಟು 666 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.