1043ಕ್ಕೆ ಏರಿದ ಸೋಂಕಿತರ ಸಂಖ್ಯೆ
Team Udayavani, Jul 10, 2020, 10:28 AM IST
ಯಾದಗಿರಿ: ಜಿಲ್ಲೆಯಲ್ಲಿ ಸೋಂಕು ಮೂರನೇ ಹಂತಕ್ಕೆ ತಲುಪಿದ್ದು, ಗುರುವಾರ ಮತ್ತೆ 16 ಜನರನಲ್ಲಿ ಹರಡಿದೆ. ಇದೀಗ ಸೋಂಕಿತರ ಸಂಖ್ಯೆ 1043ಕ್ಕೆ ಏರಿದೆ. ಜಿಲ್ಲೆಯ ಸುರಪುರ ತಾಲೂಕಿನಲ್ಲಿಯೇ ವ್ಯಾಪಕವಾಗಿ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು, ಜುಲೈ 1ರಂದು ಕೊರೊನಾಗೆ ತುತ್ತಾಗಿರುವ ಸುರಪುರ ತಾಲೂಕು ಚಿಂಚೋಡಿಯ 34 ವರ್ಷದ ಪುರುಷ ಪಿ-15476ರ ಸಂಪರ್ಕದಿಂದ ಬುಧವಾರವಷ್ಟೇ ಮೂವಗೆ ತಗುಲಿದ್ದ ಸೋಂಕು ಗುರುವಾರ ಮತ್ತೆ ಏಳು ಜನರಿಗೆ ಹರಡಿದೆ.
ಅವರ ಸಂಪರ್ಕದಿಂದ ಸುರಪುರಿನ ದಿವಳಗುಡ್ಡದ 24 ವರ್ಷದ ಪುರುಷ ಪಿ-29032, 46 ವರ್ಷದ ಪುರುಷ ಪಿ-29033, 16 ವರ್ಷದ ಬಾಲಕಿ ಪಿ-29034, 18 ವರ್ಷದ ಬಾಲಕ ಪಿ-29035, 22 ವರ್ಷದ ಮಹಿಳೆ ಪಿ-29036, 80 ವರ್ಷದ ಮಹಿಳೆ ಪಿ-29037, 14 ವರ್ಷದ ಬಾಲಕಿ ಪಿ-29038 ಗೆ ಸೋಂಕು ತಗುಲಿದೆ. ಇನ್ನು ಸುರಪುರ ತಾಲೂಕು ಸುಗೂರ ಗ್ರಾಮದ 66 ವರ್ಷದ ಪುರುಷ ಪಿ-13411 ರ ಸಂಪರ್ಕದಿಂದಲೂ 4 ವರ್ಷದ ಬಾಲಕಿ ಪಿ-29043 ಸೇರಿದಂತೆ ಒಟ್ಟು 4 ಜನ 65 ವರ್ಷದ ಮಹಿಳೆ ಪಿ-29040, 40 ವರ್ಷದ ಮಹಿಳೆ ಪಿ-29041, 45 ವರ್ಷದ ಮಹಿಳೆ ಪಿ-29046ಗೆ ಸೋಂಕು ಒಕ್ಕರಿಸಿದೆ.
ಯಾವುದೇ ಸಂಪರ್ಕ ಪತ್ತೆಯಾಗದ ನಾಲ್ವರು ಸುರಪುರ ಪೊಲೀಸ್ ವಸತಿ ಗೃಹದ 26 ವರ್ಷದ ಪಿ-29039, ಸತ್ಯಂಪೇಟ್‌ನ 48 ವರ್ಷದ ಪುರುಷ ಪಿ-29044, ಸುರಪುರ ಘಟಕದ 28 ವರ್ಷದ ಪುರುಷ ಪಿ-29045 ಹಾಗೂ ವಡಗೇರಾ ತಾಲೂಕು ಹಯ್ನಾಳ (ಬಿ)ಯ 40 ವರ್ಷದ ಮಹಿಳೆ ಪಿ-29047 ಗೆ ಸೋಂಕು ಪತ್ತೆಯಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಸುರಪುರ ತಾಲೂಕಿನ ಸುತಾರ ಹುಣಸಗಿ 20 ವರ್ಷದ ಮಹಿಳೆ ಪಿ-29042ಗೆ ಸೋಂಕು ಕಾಣಿಸಿದೆ.
28933 ಜನರ ಕೋವಿಡ್ ಪರೀಕ್ಷೆ : ಜಿಲ್ಲೆಯಲ್ಲಿ ಗುರುವಾರ 433 ಹೊಸ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈವರೆಗೆ 28933 ಜನರ ಕೋವಿಡ್ ಪರೀಕ್ಷೆಯಾಗಿದೆ. ಇವರಲ್ಲಿ 26613 ಜನರ ವರದಿ ನೆಗೆಟಿವ್ ಬಂದಿದ್ದು ಇನ್ನು 1277 ಜನರ ವರದಿ ಬರಬೇಕಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದ 138 ಜನ ಪತ್ತೆಯಾಗಿದ್ದು, ಒಟ್ಟು 2276 ಮತ್ತು ದ್ವಿತೀಯ ಸಂಪರ್ಕದ 168 ಜನ ಸೇರಿ ಈವರೆಗೆ 3606 ಜನರನ್ನು ಪತ್ತೆ ಹಚ್ಚಲಾಗಿದೆ. ಗುರುವಾರ 9 ಕಂಟೇನ್ಮೆಂಟ್ ಝೋನ್ ರಚಿಸಲಾಗಿದ್ದು, ಒಟ್ಟು 105ಕ್ಕೆ ಏರಿಕೆಯಾಗಿದೆ. 1043 ಸೋಂಕಿತರಲ್ಲಿ ಈವರೆಗೆ 876ಜನ ಗುಣಮುಖವಾಗಿದ್ದು, 166 ಪ್ರಕರಣ ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.