ಇಂದಿರಾ ಕ್ಯಾಂಟೀನ್ ಗೆ ಅನುದಾನವೇ ಇಲ್ಲ
Team Udayavani, Jun 7, 2021, 5:17 PM IST
ಯಾದಗಿರಿ: ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗೆ ರಾಜ್ಯ ಬಿಜೆಪಿ ಸರ್ಕಾರ ಸಮರ್ಪಕ ಅನುದಾನ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಬಡವರು, ನಿರ್ಗತಿಕರಿಗೆ 10 ರೂ.ನಲ್ಲಿ ಊಟ ನೀಡುವ ಯೋಜನೆ ಬಿಜೆಪಿ ಸರ್ಕಾರದ ಅವಧಿ ಯಲ್ಲಿಯೂ ಬಡವರ ಹೊಟ್ಟೆ ತುಂಬಿಸುತ್ತಿದೆ.
ವಿಶೇಷವಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಉಚಿತ ಊಟ ನೀಡುವ ಯೋಜನೆಯನ್ನು ಸರ್ಕಾರ ಘೋಷಿಸಿದ್ದು, ಯಾದಗಿರಿಯಲ್ಲಿ ನಿತ್ಯ 700 ಜನರಿಗೆ ಬೆಳಿಗ್ಗೆ ಉಪಹಾರ ಮತ್ತು ಊಟ ನೀಡಲಾಗುತ್ತಿದೆ. ಮಹತ್ವದ ಯೋಜನೆಗೆ ಸರ್ಕಾರ ಉಪಾಹಾರವೊಂದಕ್ಕೆ 14.50 ರೂ., ಊಟವೊಂದಕ್ಕೆ 21.25 ರೂ. ಭರಿಸುತ್ತದೆ. ಕ್ಯಾಂಟೀನ್ ನಡೆಸುವವರು ಜನರಿಂದ ಉಪಾಹಾರಕ್ಕೆ 5 ರೂ. ಮತ್ತು ಊಟಕ್ಕೆ 10 ರೂ. ಪಡೆಯುತ್ತಿದ್ದರು. ಪ್ರಸ್ತುತ ಸರ್ಕಾರ ಉಚಿತ ಘೋಷಣೆಯಿಂದ ನಿತ್ಯ ಜನರಿಗೆ ಉಚಿತ ಊಟ ನೀಡಲಾಗುತ್ತಿದೆ. ಯಾದಗಿರಿಯ ಕ್ಯಾಂಟೀನ್‌ವೊಂದಕ್ಕೆ ಸುಮಾರು 80 ಲಕ್ಷ ರೂ. ಅನುದಾನ ಬಿಡುಗಡೆಗೊಳ್ಳಬೇಕಿದ್ದು.
ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸರ್ಕಾರ ಸುಮಾರು 15 ತಿಂಗಳಿಂದ ಅನುದಾನ ನೀಡದಿರುವುದು ಸಾಲ ಸೂಲ ಮಾಡುವ ಪರಿಸ್ಥಿತಿ ಎದುರಾಗಿದೆ. ಕ್ಯಾಂಟೀನ್ ನಡೆಸಲು 3 ವರ್ಷಗಳ ಅವ ಧಿಗೆ ಗುತ್ತಿಗೆ ನೀಡಿದ್ದು, ಜುಲೈಗೆ ಕೊನೆಗೊಳ್ಳಲಿದೆ. ಮಾರ್ಚ್ 2020ರಿಂದ ಮಾರ್ಚ್ 2021ವರೆಗೆ ಸುಮಾರು 80 ಲಕ್ಷ ರೂ. ಪಾವತಿಸಬೇಕಿದ್ದು, ಇಷ್ಟಿದ್ದರೂ ಗುತ್ತಿಗೆದಾರರು ಇಂದು, ನಾಳೆ ಬರುತ್ತೆ ಎನ್ನುವ ಆಸೆಯೊಂದಿಗೆ ನಡೆಸುತ್ತಿದ್ದಾರೆ.
ಸರ್ಕಾರದ ಯೋಜನೆಯಿಂದ ಬಡಜನರಿಗೆ ತೊಂದರೆಯಾಗಬಾರದು ಎಂದು ನಿರ್ವಹಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ವಿಶ್ವನಾಥರೆಡ್ಡಿ ದರ್ಶನಾಪುರ. ನಗರಾಭಿವೃದ್ಧಿ ಇಲಾಖೆಯಿಂದ ನಿರ್ವಹಿಲ್ಪಡುವ ಕ್ಯಾಂಟೀನ್‌ನಿಂದ ಲಾಕ್‌ಡೌನ್ ಅವ ಧಿಯಲ್ಲಿ ಜನರಿಗೆ ಉಚಿತ ಊಟ ನೀಡುವಂತೆ ರಾಜ್ಯ ಸರ್ಕಾರ ಘೋಷಣೆಯನ್ನೇನೋ ಮಾಡಿದೆ. ಆದರೆ ಅದಕ್ಕೆ ತಗಲುವ ವೆಚ್ಚವನ್ನು ಯಾವ ಲೆಕ್ಕ ಶೀರ್ಷಿಕೆಯಡಿ ಭರಿಸಬೇಕು ಎನ್ನುವ ಸ್ಪಷ್ಟ ನಿರ್ದೇಶನ ಇಲ್ಲದಿರುವುದು ಗೊಂದಲ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.