ತ್ಯಾಜ್ಯ ತುಂಬಿದ ತಿಮ್ಮಣ್ಣ ಬಾವಿ
Team Udayavani, Oct 10, 2018, 4:13 PM IST
ಗುರುಮಠಕಲ್: ನಗರದ ಮುಖ್ಯ ರಸ್ತೆಯಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ತಿಮ್ಮಣ್ಣ ಬಾವಿಯಲ್ಲಿ ಜಲಮೂಲ ಇದೆ. ಆದರೆ ತ್ಯಾಜ್ಯ ಬಾವಿಯಲ್ಲಿ ತುಂಬಿ ಚರಂಡಿಯಾಗಿ ಪರಿರ್ವನೆಗೊಂಡಿದೆ.
ಈ ಐತಿಹಾಸ ತಿಮ್ಮಣ್ಣ ಬಾವಿಗೆ ನಿರ್ವಹಣೆ ಭಾಗ್ಯವಿಲ್ಲ. ನಗರದ ಬಹುತೇಕರು ಈ ಬಾವಿ ಇರುವ ರಸ್ತೆಯಿಂದಲೇ ಸಂಚಾರಿಸುತ್ತಾರೆ. ಆದರೆ ಬಾವಿ ದುಸ್ಥಿತಿ ಕುರಿತು ಚಿಂತನೆ ನಡೆಸುತ್ತಿಲ್ಲ. ಈ ಬಾವಿಯನ್ನು ತಿಮ್ಮಣ್ಣ ಎನ್ನುವವರು ನಿರ್ಮಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತವೆ. ಹೀಗಾಗಿ ಇದಕ್ಕೆ ತಿಮ್ಮಣ್ಣನ ಬಾವಿ ಎಂದೇ ಕರೆಯಲಾಗುತ್ತಿದೆ. ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವ ತಿಮ್ಮಣ್ಣ ಬಾವಿ ಜನಬಿಡು ಪ್ರದೇಶದಲ್ಲಿದ್ದು, ಉತ್ತಮ ನೀರಿನ ಸೆಲೆ ಹೊಂದಿದೆ. ಮಳೆಗಾಲದಲ್ಲಿ ಬಾವಿಯಲ್ಲಿನ ನೀರು ನೆಲ ಮಟ್ಟಕ್ಕೆ ತುಂಬಿ ಹೊರಗಡೆ ಹರಿಯುತ್ತದೆ. ಆದರೆ ಸಾರ್ವಜನಿಕರು ಕಸಕಡ್ಡಿ ಹಾಕುವುದರಿಂದ ಬಾವಿ ಕುಲಿಷಿತಗೊಂಡಿದೆ.
ಪುರಸಭೆಯವರು ಒಂದೆರಡು ಬಾರಿ ಬಾವಿ ಸ್ವತ್ಛಗೊಳಿಸಿದ್ದರು. ಸಾರ್ವಜನಿಕರು ಕಸ ಹಾಕುವುದರಿಂದ ಮತ್ತೆ ಬಾವಿ ಕುಲುಷಿತಗೊಂಡಿದೆ. ಈ ಮೊದಲು ಸುತ್ತಲಿನ ಜನ ಈ ಬಾವಿ ನೀರನ್ನು ಕುಡಿಯಲು ಬಳಸುತ್ತಿದ್ದರು. ಯಾವಾಗ ವ್ಯಾಪಾರಿಗಳು ಕಸ ಹಾಕಲು ಆರಂಭಿದರೋ ಅಂದಿನಿಂದ ಬಾವಿ ನೀರು ಕಲುಷಿತಗೊಳ್ಳಲಾರಂಭಿಸಿತು.
ನಗರದ ನೀರಿನ ಸಮಸ್ಯೆ ನೀಗಿಸಲು ಸುಮರು 45 ಕಿ.ಮೀಟರ್ ದೂರದ ಭೀಮಾ ನದಿಯಿಂದ ನೀರನ್ನು ತರಲಾಗುತ್ತದೆ. ಆದರೆ ನಗರದಲ್ಲೇ ಇರುವ ಜಲಸಂಪನ್ಮೂಲ ರಕ್ಷಸಿಕೊಳ್ಳುವಲ್ಲಿ ಪುರಸಭೆ ಏಕೆ ಮುಂದಾಗಿಲ್ಲ ಎನ್ನುವುದು ಜನರ ಪ್ರಶ್ನೆ.
14 ಬಾವಿಗಳ ನಿರ್ವಹಣೆ ಕುರಿತು ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಪುರಸಭೆ ಯಿಂದ ಕಾರ್ಯ ಕೈಗೊಳ್ಳುವಂತೆ ಆದೇಶಿರುವುದರಿಂದ ಶೀಘ್ರವೇ ಈ ಕುರಿತು ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
ಈ ಬಾವಿ ಯಾವಗ ನಿರ್ಮಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ನಾಯಕನ ಬಾವಿಯನ್ನು ನಿರ್ಮಿಸಿದ ಒಂದೆರಡು ವರ್ಷಗಳ ನಂತರ ಈ ಬಾವಿಯನ್ನು ನಿರ್ಮಿಸಿದ್ದಾರೆ ಎಂದು ಹಿರಿಯರು ಹೇಳುತ್ತಿದ್ದಾರೆ.
ಬಸವಂತ ರಾಜ್ ನೀರೆಟಿ, ನಿವೃತ್ತ ಶಿಕ್ಷಕ
ಬಾವಿಯಲ್ಲಿ ಸಮೃದ್ಧವಾದ ನೀರಿನ ಸೆಲೆಯಿದೆ. ಈಗ ಬಾವಿಯಲ್ಲಿ ನಿರಿದ್ದರೂ, ಕಸಬಿದ್ದು ಚರಂಡಿಯಂತಾಗಿರುವುದು
ದುರದೃಷ್ಟಕರ.
ಸುರೇಶ ಬುದ್ದಿ, ಸ್ಥಳೀಯ ನಿವಾಸಿ
ಪುರಸಭೆಯವರು ಒಂದೆರಡು ಸಲ ಬಾವಿ ಸ್ವತ್ಛಗೊಳಿಸಿದ್ದರು. ಆದರೆ ಸಾರ್ವಜನಿಕರು ಕಸ ಹಾಕಿದ್ದರಿಂದ ಮತ್ತೆ ಕುಲುಷಿತಗೊಂಡಿದೆ. ಈ ಬಾವಿಗೆ ತಡೆಗೊಡೆ ನಿರ್ಮಿಸಬೇಕು. ಪುರಸಭೆ ಸಭೆಯಲ್ಲಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು.
ಪಾಪಿರೆಡ್ಡಿ, ಪುರಸಭೆ ಸದಸ
ಚನ್ನಕೇಶವುಲು ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.