ಸಮಯ ಪ್ರಜ್ಞೆಯಿಂದ ತಪ್ಪಿದ ಸಿಲಿಂಡರ್ ದುರಂತ
Team Udayavani, Mar 26, 2022, 3:33 PM IST
ಶಹಾಪುರ: ಗ್ರಾಮದಲ್ಲಿ ಕಳೆದ ಫೆ.25ರಂದು ನಡೆದ ಸಿಲಿಂಡರ್ ದುರಂತ ಶುಕ್ರವಾರಕ್ಕೆ ಸರಿಯಾಗಿ ಒಂದು ತಿಂಗಳ ಹೊತ್ತಿಗೆ ಮತ್ತೂಂದು ದುರಂತ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಗ್ರಾಮದ ಗಣಪತಿ ತಮಗೊಂಡ ಎಂಬವರ ಮನೆಯಲ್ಲಿ 5 ಕೆ.ಜಿ ಸಿಲಿಂಡರ್ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಉರಿಯ ತೊಡಗಿದೆ. ತಕ್ಷಣ ತಡಮಾಡದೇ ಅದನ್ನು ಹಸಿ ತಟ್ಟು, ಹಾಸಿಗೆಯಿಂದ ಮುಚ್ಚಲಾಗಿದೆ. ಆದರೂ ಬೆಂಕಿ ಉರಿ ನಿಲ್ಲದ ಕಾರಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಅಗ್ನಿಶಾಮಕ ದಳದ ಠಾಣಾಧಿಕಾರಿ ಮಚ್ಚೇಂದ್ರನಾಥ್, ಬಸವರಾಜ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಇದೇ ಸಂದರ್ಭದಲ್ಲಿ ನೆರದಿದ್ದ ಜನರಲ್ಲಿ ಸಿಲಿಂಡರ್ ಬಳಕೆ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿ ಹೇಳಿದರು. ಸಿಲಿಂಡರ್ ಆಕಸ್ಮಿಕ ಬೆಂಕಿ ಹತ್ತಿರುವ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಗ್ರಾಮದಲ್ಲಿ ಇದು ಮೂರನೇ ದುರಂತ. ವಾರದ ಹಿಂದೆ ಒಬ್ಬರ ಮನೆಯಲ್ಲೂ ಸಿಲಿಂಡರ್ ಅನಿಲ ಸೋರಿಕೆ ವಾಸನೆ ಎಲ್ಲೆಡೆ ಹರಡಿರುವುದರಿಂದ ಯುವಕರಿಬ್ಬರು ಅದನ್ನು ಬ್ಯಾರಲ್ ಒಂದರಲ್ಲಿ ಹಾಕಿ ನೀರು ಸುರಿದು ಹೊರವಲಯದಲ್ಲಿ ಹೊತ್ತೊಯ್ದಿದ್ದರು. ಆಗಲೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅದನ್ನು ಸಮರ್ಪಕವಾಗಿ ಪರಿಹರಿಸಿದ್ದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿ ಕಾರಿಗಳಾದ ಮಚ್ಚೇಂದ್ರನಾಥ್, ಬಸವರಾಜ ಸಿಬ್ಬಂದಿಗಳಾದ ಶಿವರಾಜ, ನೂರಂದಯ್ಯಸ್ವಾಮಿ, ರಫೀಕ್, ಮಂಜುನಾಥ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.